ಕುಷ್ಟಗಿ : (Apr_01_2025)
ತಾಲೂಕಿನ ಹನಮನಾಳ ಹೋಬಳಿಯ ಮಾಲಗಿತ್ತಿ ಗ್ರಾಮದ ನಿವಾಸಿ ಹಾಗೂ ಬಿಜೆಪಿ ಮುಖಂಡ ಶರಣಪ್ಪ ಪಟ್ಟಣಶೆಟ್ಟಿ ಬೈಕ್ ಅಪಘಾತದಿಂದ ತಲೆಗೆ ಪೆಟ್ಟು ಬಿದ್ದಿದ್ದರಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ನಿಧನರಾದರು. ಇವರಿಗೆ ತಾಯಿ, ಪತ್ನಿ, ಇಬ್ಬರು ಪುತ್ರರು, ಇಬ್ಬರು ಸಹೋದರರು ಇದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಸ್ವಗ್ರಾಮ ಮಾಲಗಿತ್ತಿಯಲ್ಲಿ ನಡೆಯಲಿದೆ.
ಶರಣಪ್ಪ ಬೆಂಗಳೂರಿನಲ್ಲಿ ವಿಮಾನದ ಬಿಡಿಭಾಗಗಳು ತಯಾರಾಗುವ ಖಾಸಗಿ ಕಂಪನಿ ಕೆಲಸ ಮಾಡುತ್ತಿದ್ದರು. ಇವರು ಕೋವಿಡ್ ಸಮಯದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮದ ಎಲ್ಲರಿಗೂ ಉಚಿತವಾಗಿ ಮಾಸ್ಕ್ ವಿತರಿಸುವ ಜೊತೆಗೆ ಹಲವು ಸಮಾಜಮುಖಿ ಕೆಲಸ ಮಾಡಿದ್ದರು. ಅಲ್ಲದೆ ಮಾಲಗಿತ್ತಿ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮರಗಳನ್ನು ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಜನ ಮೆಚ್ಚುಗೆಗೆ ಪಾತ್ರವಾಗಿದ್ದರು. ಇವರು ಕುಷ್ಟಗಿ ತಾಲೂಕು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ಬಂದರೆ ಬೆಂಗಳೂರಿನಿಂದ ಬಂದು ಚುನಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಇವರು ಪ್ರಮುಖ ಪಾತ್ರವಹಿಸಿದ್ದರು. 2023ರಲ್ಲಿ ಕುಷ್ಟಗಿ ಬಿಜೆಪಿ ಗೆಲುವು ಸಾಧಿಸಲು ಮಾಲಗಿತ್ತಿಯಿಂದ ಅಧಿಕ ಮತಗಳನ್ನು ಬಿಜೆಪಿಗೆ ಹಾಕಿಸುವಂತೆ ಮತದಾರ ಮನವೊಳಿಸಿ ತಾಲೂಕಿನಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಇವರು ಅಗಲಿಕೆಯಿಂದಾಗಿ ಮಾಲಗಿತ್ತಿ ಗ್ರಾಮದಲ್ಲಿ ನಿರವ ಮೌನ ಆವರಿಸಿದೆ. ಇವರಿಗೆ ಕನ್ನಡಪ್ರಭ ಹಿರಿಯ ಉಪಸಂಪಾದಕ ವೀರೇಶ ಉಳ್ಳಾಗಡ್ಡಿ, ಗ್ರಾಮದ ಯುವಕರು, ಗ್ರಾಮಸ್ಥರು ತೀವ್ರ ಸಂತಾಪ ಸೂಚಿಸಿದ್ದಾರೆ.
Post a Comment