-->
Bookmark

Gajendragad : ಅನಕ್ಷರಸ್ಥ ಸೋಮಪ್ಪ ರಾಠೋಡ್ ಅಕ್ಷರ ಕ್ರಾಂತಿಗೆ ಮುನ್ನುಡಿ

Gajendragad : ಅನಕ್ಷರಸ್ಥ ಸೋಮಪ್ಪ ರಾಠೋಡ್ ಅಕ್ಷರ ಕ್ರಾಂತಿಗೆ ಮುನ್ನುಡಿ 

ಗಜೇಂದ್ರಗಡ : (Apr_01_2025)

ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿಯಾಗಬೇಕೆಂದು ಕನಸು ಕಂಡ ಬಂಜಾರ ಸಮುದಾಯದ ನಾಯಕ ಸೋಮಪ್ಪ ರಾಠೋಡ್ ಅನಕ್ಷರಸ್ಥರು. 

ಅಕ್ಷರ ಕಲಿಯಲಿಲ್ಲ ಎಂಬ ನೋವು ಕಾಡುತ್ತದೆ ಎಂದು ಆಗಾಗಾ ತಮ್ಮ ಮನದಾಳ ಹಂಚಿಕೊಳ್ಳುವ ಹಿರಿಯರಾದ ಸೋಮಪ್ಪ ಅವರ ಚಿಂತನೆಗಳು ಅಪಾರ. 

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಉತ್ತರ ಕರ್ನಾಟಕ ಹಿಂದುಳಿದಿದೆ. ಈ ಸಮಸ್ಯೆಯನ್ನ ಬಗೆಹರಿಸಬೇಕೆಂದು ಹೇಳುತ್ತಲೆ ಇರುತ್ತಾರೆ. ಕಾಲಕಾಲೇಶ್ವರದಲ್ಲಿ ಕೊಚಿಂಗ್ ಸೆಂಟರ್ ಆರಂಭಿಸಿದರೇ ಹೇಗೆ ಎಂದು ಪುತ್ರ ಮಂಜುನಾಥ್ ರಾಠೋಡ್ ಅವರ ಬಳಿ ಪ್ರಸ್ತಾಪಿಸಿದಾಗ ಅವರ ಧ್ವನಿಗೆ ಧ್ವನಿ ಗೂಡಿಸಿ, ಸಮಾಜ ಸುಧಾರಣೆಯ ಕೆಲಸ ಮಾಡೋಣ ಎಂದು ಪಣ ತೊಟ್ಟ ಸೋಮಪ್ಪ ಒಂದು ಸಂಸ್ಥೆಯನ್ನ ಆರಂಭಿಸಿಯೇ ಬಿಟ್ಟರು. 

ಇದು ಕೇವಲ ಅಕ್ಷರದ ಮೇಲಿನ ಪ್ರೀತಿ ಅಷ್ಟೇ ಅಲ್ಲ. ಬದಲಾಗಿ, ದೈವತ್ವದ ಮೇಲೂ ಅವರಿಗೆ ಅಪಾರ ನಂಬಿಕೆ. ಕಣವಿಯಲ್ಲಿ ಈರಣ್ಣ ದೇವಸ್ಥಾನ ನಿರ್ಮಿಸಿ ಅದರ ಜಿರ್ಣೋದ್ಧಾರ ಮಾಡುತ್ತಿದ್ದುದು ಒಂದೆಡೆಯಾದ್ರೆ, ಮತ್ತೊಂದೆಡೆ, ಬಂಜಾರ ಸಮುದಾಯದ ಆರಾಧ್ಯ ದೈವ ತುಳಜಾ ಭವಾನಿ ದೇವಸ್ಥಾನವನ್ನ ನಿರ್ಮಿಸಿ, ತುಳಜಾ ಭವಾನಿ ದೇವಿಯನ್ನ ವಲಿಸಿಕೊಂಡಿದ್ದಾರೆ. ಸಮಾಜದ ಬಡವರು ಮಹಾರಾಷ್ಟ್ರದಲ್ಲಿ ನೆಲೆಸಿರುವ ತುಳಜಾ ಭವಾನಿ ದೇವಸ್ಥಾನಕ್ಕೆ ತೆರಳಿ ದರ್ಶನ ಮಾಡಲಾಗದು ಎಂದರಿತು, ಪ್ರತಿನಿತ್ಯ ತುಳಜಾ ಭವಾನಿ ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. 

ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಲಿ ಎಂದು ಕನಸು ಕಂಡು ಅದರಂತೆ ಅಥರ್ವ ನವೋದಯ ಕೊಚಿಂಗ್ ಸೆಂಟರ್ ಆರಂಭಿಸಿ, ಅದಕ್ಕೊಂದು ರೂಪ, ಸ್ವರೂಪ ಕೊಟ್ಟಿದ್ದು, ಮನಮಿಡಿಯುವಂತಿದೆ. 

ಈ ಹೃದಯವಂತಿಕೆ ಇರುವ ಸೋಮಪ್ಪ ರಾಠೋಡ್ ಅವರು ಮುಟ್ಟಿದ್ದೆಲ್ಲವೂ ಚಿನ್ನ. ಅವರ ನಡೆ, ನುಡಿ, ಆಚಾರ, ವಿಚಾರಗಳು ಇತರರಿಗೂ ಮಾರ್ಗದರ್ಶನವಾಗಲಿ. ಸ್ವಾಮಿ ವಿವೇಕಾನಂದರ ವಾಣಿಯಂತೆ ಜೀವನ ನಡೆಸುತ್ತಿರುವ ಸೋಮಪ್ಪ ರಾಠೋಡ್ ಅವರಿಂದ ಸಮಾಜ ಸುಧಾರಣೆಯ ಇನ್ನಷ್ಟು, ಮಗದಷ್ಟು ಕೆಲಸ ಕಾರ್ಯಗಳಾಗಲಿ ಎಂದು ಹಾರೈಸುತ್ತ. ಕಾಲಕಾಲೇಶ್ವರ ದೇವರ ಕೃಪಾಕಟಾಕ್ಷ ಹೀಗೆ ಇರಲಿ...!!! 


ಕೃಷ್ಣ ರಾಠೋಡ್,
ಸಂಪಾದಕರು 
ಕಿರಾ ನ್ಯೂಸ್ ಕನ್ನಡ 

ಮೊ : 8197474996
Post a Comment

Post a Comment