-->
Bookmark

Gajendragad : ಯತ್ನಾಳ್ ಬೆಂಬಲಕ್ಕೆ "ಪಂಚ"ಮ‌ಸಾಲಿ ರಾಜ್ಯದುದ್ದಕ್ಕೂ ಹೋರಾಟ : ಸಿದ್ದಪ್ಪ ಬಂಡಿ

Gajendragad : ಯತ್ನಾಳ್ ಬೆಂಬಲಕ್ಕೆ "ಪಂಚ"ಮ‌ಸಾಲಿ ರಾಜ್ಯದುದ್ದಕ್ಕೂ ಹೋರಾಟ : ಸಿದ್ದಪ್ಪ ಬಂಡಿ 

ಗಜೇಂದ್ರಗಡ : (Apr_01_2025)

ಪಂಚಮಸಾಲಿ ಸಮಾಜಕ್ಕೆ ಧಕ್ಕೆ ತರುವ ಯಾವುದೇ ಘಟನೆ, ಪ್ರಕರಣವನ್ನೂ ಸಹಿಸುವುದಿಲ್ಲ ಎಂದು ವೀರಶೈವ ಲಿಂಗಾಯತ ಸಮಾಜದ ಗಜೇಂದ್ರಗಡ ರೋಣ ತಾಲೂಕಾ ಅಧ್ಯಕ್ಷರಾದ ಸಿದ್ದಪ್ಪ ಬಂಡಿ ಹೇಳಿದರು. 

ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಪಂಚಮಸಾಲಿ ಸಮುದಾಯ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬೆಂಬಲಿಸಿ, ನಡೆದ ಪಾದಯಾತ್ರೆ ಬಳಿಕ ಕೆಕೆ ಸರ್ಕಲ್ ನಲ್ಲಿ ಮಾತನಾಡಿದ ಅವರು, ಪಂಚಮ ಸಾಲಿ ಸಮುದಾಯದ ನಾಯಕರನ್ನ ರಾಜಕೀಯವಾಗಿ ಮುಗಿಸುವ ಹುನ್ನಾರವನ್ನ ಸಹಿಸಲ್ಲ ಎಂದರು. ಹಿಂದು ಸಮಾಜವನ್ನ ಕಟ್ಟಿ ಬೆಳೆಸುತ್ತಿರುವ ಮತ್ತು ಸಮಾಜಕ್ಕೆ ಮೀಸಲಾತಿ ಕೊಡಿ ಎಂದು ಹೇಳಿದ್ದಾರೆ. ಹೀಗಾಗಿ, ನಮ್ಮ ನಾಯಕರನ್ನ ಕಡೆಗಣಿಸುತ್ತಿದ್ದಾರೆ. ಪಂಚಮಸಾಲಿ ಸಮಾಜ ಒಡೆಯುವ ಯಾವುದೇ ಘಟನೆ, ಪ್ರಕರಣಗಳನ್ನ ಸಮಾಜ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. 

ಮುಂಬರುವ ದಿನಗಳಲ್ಲಿ 
ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಸಮಾಜವನ್ನ ಒಡೆಯುವ ಕೆಲಸ ಇದಾಗಿದ್ದು, ತಮ್ಮ ರಾಜಕೀಯ ಸ್ಥಿರತೆಗಾಗಿ ಮತ್ತೊಬ್ಬ ನಾಯಕರಿಗೆ ಅನ್ಯಾಯ ಮಾಡುವುದನ್ನ ಸಹಿಸುವುದಿಲ್ಲ. ಸಮಾಜದ ಹಿತ ದೃಷ್ಟಿಯಿಂದ ಕೆಲಸ ಮಾಡಿದ್ದಾರೆ. ಹಿಂದು ಹುಲಿ ಎಂದೆ ಖ್ಯಾತರಾಗಿದ್ದಾರೆ ನಮ್ಮ ಸಮಾಜವನ್ನ ಒಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ಯಡಿಯೂರಪ್ಪ ಮತ್ತು ಪುತ್ರರ ವಿರುದ್ಧ ಸಿದ್ದಪ್ಪ ಬಂಡಿ ಹರಿಹಾಯ್ದರು. 

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರದ ಹಲವು ನಾಯಕರಿಗೆ ಆಪ್ತರಾಗಿದ್ದಾರೆ. ರಾಜ್ಯ ನಾಯಕರ ಒತ್ತಡದ ಮೇಲೆ ಬಿಜೆಪಿ ಇಂತಹ ನಿರ್ಣಯ ಕೈಗೊಂಡಿರುವುದು ಕಾಣಿಸುತ್ತಿದೆ ಎಂದು ಪ್ರತಿಭಟನೆಯಲ್ಲಿ ನೆರೆದಿದ್ದ ಇತರೆ ಪಂಚಮಸಾಲಿ ನಾಯಕರು ಮಾತನಾಡಿದರು. 

ಪಟ್ಟಣದ ಎಪಿಎಂಸಿ ಆವರಣದಿಂದ ಪಂಚಮಸಾಲಿ ಮುಖಂಡರು ಪಾದಯಾತ್ರೆ ಮೂಲಕ ಕೆಕೆ ಸರ್ಕಲ್ ಬಳಿ ಬಂದು, ಬಹಿರಂಗವಾಗಿ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. 

ಉಚ್ಚಾಟನೆ ಆದೇಶ ಹಿಂಪಡೆಯದಿದ್ದರೆ, ಬಿಜೆಪಿಗೆ ಪಂಚಮಸಾಲಿ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪಂಚಮಸಾಲಿ ಸಮಾಜದ ಗಜೇಂದ್ರಗಡ, ರೋಣ ಘಟಕದ ಅಧ್ಯಕ್ಷರಾದ ಸಿದ್ದಪ್ಪ ಬಂಡಿ, ವಿಶ್ವನಾಥ್ ಜಿಡ್ಡಿಬಾಗಿಲ ಉಪಾಧ್ಯಕ್ಷರು, ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷರು ಚಂಬಣ್ಣ ಚವಡಿ, ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷರು ಟಿ.ಎಸ್ ರಾಜೂರ್, ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷರು ಅಯ್ಯಪ್ಪ ಅಂಗಡಿ, ಮಾಜಿ ಅಧ್ಯಕ್ಷರಾದ ಪ್ರಭು ಚವಡಿ, ಗೋಗೇರಿ ಗ್ರಾಮದ ಪಂಚಮಸಾಲಿ ಮುಖಂಡರು ಬಸಣ್ಣ ಮೂಲಿಮನಿ, ಪಂಚಸೇನಾ ರಾಜ್ಯಾಧ್ಯಕ್ಷರಾದ ರುದ್ರಗೌಡ ಸೊಲಬಗೌಡರ್, ಚಮಸಾಲಿ ಸಮಾಜದ ಕಾರ್ಯದರ್ಶಿ ಮಹೇಶ್ ಪಲ್ಲೇದ್, ಪಂಚಮಸಾಲಿ ಸಮಾಜದ ಸಹ ಕಾರ್ಯದರ್ಶಿ ತುಳಸಪ್ಪ ಸುಳ್ಳದ್, ಗಜೇಂದ್ರಗಡ ಪಂಚಮಸಾಲಿ ಸಮಾಜದ ನಿರ್ದೇಶಕರು ಮಹಾಂತೇಶ್ ಬನ್ನಿಗೋಳ, ಪಂಚಮಸಾಲಿ ಸಮಾಜದ ಯುವಘಟಕದ ಕಾರ್ಯದರ್ಶಿ ವೀರೇಶ್ ಸಂಗಮದ್, ಯುವ ಘಟಕದ  ಅಧ್ಯಕ್ಷರಾದ ಮುತ್ತಣ್ಣ ಮ್ಯಾಗೇರಿ, ಭೀಮಣ್ಣ ಮ್ಯಾಗೇರಿ, ಪಂಚಮಸಾಲಿ ಸಮಾಜದ ಉಪಾಧ್ಯಕ್ಷರು 
ಬಿಕೆ ಪುರ್ತಗೇರಿ, ಉಪಾಧ್ಯಕ್ಷರು ಪಂಚಮಸಾಲಿ ಸಮಾಜ 
ಐ.ಡಿ ಮ್ಯಾಗೇರಿ, ಹಿರಿಯರಾದ ಕಳಕಪ್ಪ ಅಬ್ಬಿಗೇರಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Post a Comment

Post a Comment