-->
Bookmark

Gajendragad : ಮಂತ್ರಿ ಕುಟುಂಬ ಕುಡಿ ರಿದ್ಧಿ PU 97% ಆಳ್ವಾಸ್ ನಲ್ಲಿ ಸಾಧನೆ : ಕುಟುಂಬದಲ್ಲಿ ಸಂತಸ

Gajendragad : ಮಂತ್ರಿ ಕುಟುಂಬ ಕುಡಿ ರಿದ್ಧಿ PU 97% ಆಳ್ವಾಸ್ ನಲ್ಲಿ ಸಾಧನೆ : ಕುಟುಂಬದಲ್ಲಿ ಸಂತಸ 

ಗಜೇಂದ್ರಗಡ : 
ಆಳ್ವಾಸ್ ನಲ್ಲಿ ಓದುತ್ತಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿ ರಿದ್ಧಿ ವಾಣಿಜ್ಯ ವಿಭಾಗದಲ್ಲಿ ಶೇಕಡಾ 97% ನೊಂದಿಗೆ ತೇರ್ಗಡೆಯಾಗಿದ್ದು, ಕುಟುಂಬದಲ್ಲಿ ಸಂತಸ ಮೂಡಿದೆ. ಗಜೇಂದ್ರಗಡ ಪಟ್ಟಣದ ತಮ್ಮ ನಿವಾಸದಲ್ಲಿ 
ತಂದೆ  ಆನಂದ್ ಮಂತ್ರಿ ಮತ್ತು ತಾಯಿ ಶೀತಲ್ ಮಂತ್ರಿ ಪುತ್ರಿ ರಿದ್ಧಿ ಅವರಿಗೆ ಸಿಹಿ ತಿನಿಸಿ ಸಂಭ್ರಮಿಸಿದರು.  
ಅಲ್ಲದೇ, ಆಳ್ವಾಸ್ ನಲ್ಲಿ ಕಲಿತಿದ್ದು ಸಂತಸ ತಂದಿದೆ. ನನಗೆ ಕಲಿಯಲು ಪ್ರೇರೇಪಿಸಿದ ಕಾಲೇಜಿನ ಸಿಬ್ಬಂದಿಗಳು, ಮತ್ತು ಕುಟುಂಬದ ಸದಸ್ಯರಿಗೆ ಧನ್ಯವಾದಗಳು ಎಂದು ವಿದ್ಯಾರ್ಥಿನಿ ರಿದ್ಧಿ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದರು. 

ಇನ್ನೂ ರಿದ್ಧಿ ತಂದೆ ಆನಂದ್ ಮಂತ್ರಿ ಮಾತನಾಡಿ, ಕಾಲೇಜಿನಲ್ಲಿ ಕಲಿಸುವುದನ್ನ ಓದು ಎಂದು ಹೇಳ್ತಿದ್ವಿ ಬಿಟ್ರೆ, ಮತ್ತೆ ಬೇರೆನು ಹೇಳಿಲ್ಲ. ಮಕ್ಕಳು ತಮ್ಮ ಓದಿನ ರೀತಿ, ಪರಿಪಾಠವನ್ನ ರೂಢಿಗತ ಮಾಡಿಕೊಂಡಿರುತ್ತಾರೆ. ಹೀಗಾಗಿ, ಬೇರೆ ರೀತಿಯ ಮಾರ್ಗದರ್ಶನ ನೀಡಬಾರದು. ಮಕ್ಕಳಿಗೆ ಓದುವ ಸ್ವಾತಂತ್ರ್ಯ ಕೊಟ್ಟಾಗ ಮಾತ್ರ ಇಂತಹ ಫಲಿತಾಂಶ ಬರಲು ಸಾಧ್ಯ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು. ಇನ್ನೂ ತಾಯಿ ಶೀತಲ್ ಅವರು ಸಹ  ಗಜೇಂದ್ರಗಡಕ್ಕೆ ಕೀರ್ತಿ ತಂದಿದ್ದಾರೆ. ಮಗಳ ಸಾಧನೆಗೆ ಮಾತುಗಳು ಬರುತ್ತಿಲ್ಲ. ಮಕ್ಕಳ ಮೇಲೆ‌ ಪಾಲಕರು ಹೆಚ್ಚಿನ ಒತ್ತಡ ಹಾಕದೇ, ಅವರಿಗೆ ಓದುವ ರೀತಿಯಲ್ಲಿ ಬೆಂಬಲಿಸಬೇಕೆಂದು ತಮ್ಮ ಅನಿಸಿಕೆ‌ ಹಂಚಿಕೊಂಡರು.

ಅಜ್ಜಿ ಪದ್ಮಾ ಮಂತ್ರಿ, ದೊಡ್ಡಪ್ಪ ಸಂತೋಷ್ ಮಂತ್ರಿ, ದೊಡ್ಡಮ್ಮ ರಾಧಾ ಮಂತ್ರಿ, ಸಹೋದರಿ ವೈಷ್ಣವಿ ಸಹೋದರ ಕೃಷ್ಣಾ ಮತ್ತು ರಾಘವ್, ರಿದ್ಧಿ ಅವರ ಭವಿಷ್ಯ ಉತ್ತಮವಾಗಿರಲೆಂದು ಹಾರೈಸಿದ್ದಾರೆ.
Post a Comment

Post a Comment