PU Result : ಪಟ್ಟಣದ JT PU College ಉತ್ತಮ ಫಲಿತಾಂಶ
ಗಜೇಂದ್ರಗಡ : (Apr_08_2025)
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಜಗದ್ಗುರು ತೋಂಟದಾರ್ಯ ವಿಜ್ಞಾನ ಹಾಗೂ ವಾಣಿಜ್ಯ ಪಿ.ಯು ಕಾಲೇಜ್ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ವಿಜ್ಞಾನ ವಿಭಾಗದಲ್ಲಿ ಸಂಗೀತಾ ರಾಘವೇಂದ್ರಸಾ ಪವಾರ 94.50% ಪ್ರಥಮ ಸ್ಥಾನ, ಶ್ರೇಯಾ ಶಿವಪ್ಪ ಸಂಗನಾಳ 90.33% ದ್ವಿತೀಯ ಸ್ಥಾನ ಮತ್ತು ಪ್ರತಿಕ್ಷಾ ಚವಡಿಮನಿ 87.83% ತೃತೀಯ ಸ್ಥಾನ ಗಳಿಸಿದ್ದಾರೆ.
ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೊ. ಶಿವಾನಂದ ಪಟ್ಟಣಶೆಟ್ಟರ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಂಗಮೇಶ ಬಾಗೂರ ಹಾಗೂ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರಾದ ಹುತ್ತಪ್ಪ ಮಾರನಬಸರಿ, ಶರಣು ಅಂಗಡಿ, ಅಭಿಲಾಶಾ ಗಂಜಿಹಾಳ್, ಶೃತಿ ನಡಕಟ್ಟಿನ, ಅಶೋಕ ಅಂಗಡಿ, ಆನಂದ ಜೂಚನಿ, ಮಲ್ಲನಗೌಡ ಗೌಡರ, ಶಿವಕುಮಾರ್, ಪ್ರಶಾಂತ ಹಾರೊಗೇರಿ, ಸಿದ್ರಾಮೇಶ್ ಕರಬಾಶೆಟ್ಟರ್, ಹನಮಂತ ನಡಕಟ್ಟಿನ, ಸುಶೀಲಾ ಮುಂಡರಗಿ, ಫಾತೀಮಾ ವಣಗೇರಿ, ಕರುಣಾ ಜಕ್ಕಲಿ, ಮಾಧುರಿ ನಾಡಗೇರಿ, ಪ್ರವೀಣ ಚಿತ್ರಗಾರ ಮತ್ತು ಬೋಧಕೇತರ ಸಿಬ್ಬಂಧಿಗಳು ಅಭಿನಂದನೆ ಸಲ್ಲಿಸಿ ಮುಂದಿನ ಶಿಕ್ಷಣಕ್ಕೆ ಶುಭ ಹಾರೈಸಿದ್ದಾರೆ.
Post a Comment