-->
Bookmark

Bengaluru : ಇದೆ 18 ರಿಂದ "ರಿಕ್ಷಾ ಚಾಲಕ " ತೆರೆಗೆ

Bengaluru : ಇದೆ 18 ರಿಂದ  "ರಿಕ್ಷಾ ಚಾಲಕ " ತೆರೆಗೆ
ಬೆಂಗಳೂರ : ( Apr_11_2025)
ಆಯುಷ್ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಶರಾವತಿ ಶಶಿಕುಮಾರ್ ರವರು ನಿರ್ಮಿಸಿರುವ ಚಿತ್ರ "ರಿಕ್ಷಾ ಚಾಲಕ" ಈ ವಾರ  ತೆರೆ ಕಾಣುತ್ತಿದೆ. ಆಯುಷ್ ಶಶಿಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರವು  ಕೊರೋನ ಸಂದರ್ಭದಲ್ಲಿ ದೇಶಾದ್ಯಂತ ಲಾಕ್ ಡೌನ್ ಆದಾಗ ಆಟೋ ಡ್ರೈವರ್ ಗಳು ಎದುರಿಸಿದ ಸಂಕಷ್ಟಗಳನ್ನ, ಅನುಭವಿಸಿದ ನೋವುಗಳನ್ನ ಕಣ್ಣಾರೆ ಕಂಡಿದ್ದು ಅದೇ ಕಥೆಯನ್ನು ಈಗ ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದಾರೆ. ಒಳ್ಳೆ ಆಟೋ ಡ್ರೈವರ್ ಸಮಾಜದಲ್ಲಿ ಸಾಕಷ್ಟು ಕಷ್ಟ ಎದುರಿಸುತ್ತಾನೆ. ಆಟೋ ಡ್ರೈವರ್ ಗಿರುವ ಕಷ್ಟವೇನು ಅಂತ ಈ ಸಿನಿಮಾದಲ್ಲಿ ತೋರಿಸಲಾಗಿದೆ.ಮನೆಮಂದಿಯೆಲ್ಲ ಕುಳಿತು ನೋಡಬಹುದಾದ ಚಿತ್ರ ಇದಾಗಿದ್ದು ಚಿತ್ರಮಂದಿರಕ್ಕೆ ಬಂದು ನೋಡಿ ಚಿತ್ರ ತಂಡವನ್ನು ಪ್ರೋತ್ಸಾಹಿಸಬೇಕೆಂದು ನಿರ್ಮಾಪಕರಾದ ಶರಾವತಿ ಶಶಿಕುಮಾರ ಮತ್ತು ನಾಯಕ ನಟ ಚಿರಂತ ಕೋರಿದ್ದಾರೆ. ಮೈಸೂರು, ವರುಣ, ಕೆ ಆರ್ ನಗರ ,ಸಾಲಿಗ್ರಾಮ ಹಾಗೂ ಮುರ್ಡೇಶ್ವರದಲ್ಲಿ ಈ ಚಿತ್ರದ ಚಿತ್ರೀಕರಣ ನಡಿಸಲಾಗಿದೆ. ನಾಯಕ ಚಿರಂತ್ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ನಂದಿನಿ, ಬಾಲರಾಜ್ ವಾಡಿ, ಮಿಮಿಕ್ರಿ ಗೋಪಿ, ಹರಣಿ, ಚಂದ್ರಪ್ರಭ, ವಿನೋದ್ ಗೊಬ್ರಗಾಲ, ರಜಿನಿ, ದರ್ಶನ್, ಮುನಿಸ್ವಾಮಿ, ನವೀನ್ ಕುಮಾರ್, ಮುಂತಾದವರಿದ್ದಾರೆ.
 ಧರ್ಮಾಚಾರಿ ಸಹ ನಿರ್ಮಾಪಕರಾಗಿದ್ದಾರೆ.  ವೇದಾಂತ್ ಅತಿಶಯ್ ಜೈನ್ ಸಂಗೀತ, ವಂಶಿ ಸಂಕಲನ, ಶಶಿ ಆರಕ್ಷಕ ಅವರ ಕಥೆ, ಸಾಹಿತ್ಯ, ಸಂಭಾಷಣೆ , ನೃತ್ಯ, ಆನಂದ್ ಅವರ ಛಾಯಾಗ್ರಹಣ ವಿ. ರಾಮದೇವ್ ಅವರ ಸಾಹಸ ಹಾಗೂ ಕಲ್ಲೇಶ್, ಡಾ. ಪ್ರಭು ಗಂಜಿಹಾಳ  ಡಾ. ವೀರೇಶ್ ಹಂಡಗಿ ಅವರ ಪತ್ರಿಕಾ ಸಂಪರ್ಕ ,ದೇವು ಅವರ ಪ್ರಚಾರಕಲೆ ಈ ಚಿತ್ರಕ್ಕಿದೆ.
***
-ಡಾ.ಪ್ರಭು ಗಂಜಿಹಾಳ
ಮೊ-9448775346
Post a Comment

Post a Comment