ಗ್ರಾ.ಪಂ ಸದಸ್ಯೆ ಶಾಂತಮ್ಮ ಬಸಪ್ಪ ಬಂಡಿವಡ್ಡರ್ ಗೂಂಡಾ ವರ್ತನೆ
ಕಾನೂನು ಕೈಗೆತ್ತಿಕೊಂಡ ಗ್ರಾ.ಪಂ ಸದಸ್ಯೆ ಶಾಂತಮ್ಮ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ದಬ್ಬಾಳಿಕೆ : ಕ್ರಾಂತಿ ಸೂರ್ಯ ಸಂಘಟನೆ ರಾಜ್ಯಾಧ್ಯಕ್ಷ ಮಂಜುನಾಥ್ ರಾಠೋಡ್
ಯಲಬುರ್ಗಾ : (March_01_2015)
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯತ್ ಪಿಡಿಓ ರತ್ನಮ್ಮ ಎಂಬುವವರ ಮೇಲೆ ಗ್ರಾಮ ಪಂಚಾಯತ್ ಸದಸ್ಯೆ ಶಾಂತಮ್ಮ ಬಸಪ್ಪ ಬಂಡಿವಡ್ಡರ್ ಮತ್ತು ಸಂಬಂಧಿಕರು ಹೆಲ್ಲೆ ನಡೆಸಿದ್ದಾರೆ. ಫೆಬ್ರವರಿ 27 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಿಸಿಟಿವಿ ಇದ್ದರೂ ಶಾಂತಮ್ಮ ಬಂಡಿವಡ್ಡರ್ ಮತ್ತು ಕುಟುಂಬ ಸದಸ್ಯರು
ಕ್ಯಾರೆ ಎನ್ನದೇ ದಾಳಿ ನಡೆಸಿದ್ದಾರೆ.
ಪಂಚಾಯತ್ ಸಭಾಂಗಣದಲ್ಲಿ ಪಿಡಿಓ ನೇತೃತ್ವದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಸಂಬಂಧಿಸಿದಂತೆ ಮನೆಗಳ ಹಂಚಿಕೆ ಮತ್ತು ಫಲಾನುಭವಿಗಳ ಆಯ್ಕೆ ಕುರಿತು ಸದಸ್ಯರು ಮತ್ತು ಗ್ರಾಮಸ್ಥರು ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಭೆ ಆರಂಭವಾಗುತ್ತಿದ್ದಂತೆ ಸಭಾಂಗಣಕ್ಕೆ ಏಕಾಏಕಿ ಆಗಮಿಸಿದ ಅದೇ ಗ್ರಾಮ ಪಂಚಾಯತ್ ಸದಸ್ಯೆ ಶಾಂತಮ್ಮ ಬಸಪ್ಪ ಬಂಡಿವಡ್ಡರ್ ಕರ್ತವ್ಯ ನಿರತ ಪಿಡಿಓ ರತ್ನಮ್ಮ ಮೇಲೆ ಹಲ್ಲೇ ನಡೆಸಿದ್ದಾರೆ. ಅಲ್ಲಿ ನೆರೆದವರು ಅವರನ್ನ ಹಲ್ಲೆ ಮಾಡದಂತೆ ತಡೆಯಲು ಯತ್ನಿಸಿದರೂ, ಕ್ಯಾರೆ ಎನ್ನದೇ, ಗೂಂಡಾವರ್ತನೆ ತೋರಿದ್ದಾರೆ ಇದು ಖಂಡನೀಯ. ಮುಂಬರುವ ದಿನಗಳಲ್ಲಿ ಇಂತಹತ ಘಟನೆ ರಾಜ್ಯದಲ್ಲೆ ಮರುಕಳಿಸದಂತೆ ಎಚ್ಚರಿಕೆ ವರಿಸಬೇಕು ಗೂಂಡಾವರ್ತನೆಗೆ ತಿಲಾಂಜಲಿ ಹಾಡಬೇಕಿದೆ ಎಂದು ಕ್ರಾಂತಿಸೂರ್ಯ ಸಂಘಟನೆ ರಾಜ್ಯಾಧ್ಯಕ್ಷರಾದ ಮಂಜುನಾಥ್ ರಾಠೋಡ್ ಹೇಳಿದ್ದಾರೆ.
ಸಿಸಿಟಿವಿ ದೃಶ್ಯ ಎಂತವರನ್ನು ಆಶ್ಚರ್ಯ, ಭಯ ಹುಟ್ಟಿಸುವಂತಿದೆ. ದಬ್ಬಾಳಿಕೆಯ ಆಡಳಿತ ನಡೆಯುತ್ತಿರುವುದು ಶೋಚನೀಯ ಎಂದು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಭಧಿಸಿದಂತೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.
Post a Comment