ಪ್ರಯೋಗಾತ್ಮಕ ಕಲಿಕೆಗೆ ಅತ್ಯಾಧುನಿಕ ಕಂಪ್ಯೂಟರ್‌ಗಳು ಸಹಕಾರಿ
ನರೇಗಲ್ : (Mar_12_2025)
ಕಂಪ್ಯೂಟರ್ ಜ್ಞಾನವಿಲ್ಲದವರನ್ನು ಅನಕ್ಷರಸ್ಥರಂತೆ ನೋಡುವ ಪರಿಸ್ಥಿತಿ ಬಂದಿದೆ. ಹೀಗಾಗಿ ಇಂದಿನ ಸ್ಪರ್ಧಾತ್ಮಕ, ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಅತ್ಯಗತ್ಯವಾಗಿದೆ ಎಂದು ಮುಖಂಡ ಮಿಥುನ್ ಜಿ. ಪಾಟೀಲ ಹೇಳಿದರು.
ಕರ್ನಾಟಕ ರಾಜ್ಯ ಮಿನೆರಲ್ಸ್ ಕಾರ್ಪೋರೇಷನ್ ಲಿಮಿಟೆಡ್‌ನವರು ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ಉಚಿತವಾಗಿ ನೀಡಿದ ಅಂದಾಜು ₹8,64,220 ಮೌಲ್ಯದ ಅತ್ಯಾಧುನಿಕ ಕಂಪ್ಯೂಟರ್‌ಗಳ ಉದ್ಘಾಟನೆಯನ್ನು ಬುಧವಾರ ನೆರವೇರಿಸಿ ಮಾತನಾಡಿದರು.
ಸರ್ಕಾರಿ ಕಾಲೇಜಿನಲ್ಲಿ ಬಿಸಿಎ ಪದವಿ ಆರಂಭಿಸಿ ಗ್ರಾಮೀಣ ಭಾಗದ ಬಡ ಹಾಗೂ ಹಿಂದುಳಿದ ಮಕ್ಕಳ ಕಲಿಕೆಗೆ ಇಲ್ಲಿನ ಪ್ರಾಧ್ಯಾಪಕರು ಮುಂದಾಗಿರುವುದು ಶ್ಲಾಘನೀಯ. ಅದಕ್ಕೆ ಅಗತ್ಯವಾದ ಆಧುನಿಕ ತಂತ್ರಜ್ಞಾನ ಒಳಗೊಂಡು ಕಂಪ್ಯೂಟರ್‌ಗಳನ್ನು ಕೊಡಿಸುವಂತೆ ಬೇಡಿಕೆಯಿಟ್ಟಿದ್ದರು ಅದಕ್ಕೆ ವಿಶೇಷ ಆಸಕ್ತಿ ವಹಿಸಿದ ನಮ್ಮ ಕ್ಷೇತ್ರದ ಶಾಸಕರಾದ ಜಿ. ಎಸ್. ಪಾಟೀಲರು ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಿದ್ದಾರೆ ಎಂದರು. ಸರ್ಕಾರಿ ಕಾಲೇಜಿಗೆ ಸವಲತ್ತುಗಳನ್ನು ನೀಡುವುದರಿಂದ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳ ಬಾಳಿಗೆ ಅನಕೂಲವಾಗುತ್ತದೆ ಆದಕಾರಣ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯತೆಗಳ ಬಗ್ಗೆ ಮಾಹಿತಿ ನೀಡಿದರೆ ಸಾಧ್ಯವಾದಷ್ಟು ಪೂರೈಸಲಾಗುವದು ಎಂದು ಭರವಸೆ ನೀಡಿದರು. ₹8ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಕಂಪ್ಯೂಟರ್‌ಗಳನ್ನು ಒದಗಿಸಲಾಗಿದ್ದು ಇದರ ಸದ್ಬಳಿಕೆ ಮಾಡಿಕೊಳ್ಳಲು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಎಸ್. ಎಲ್. ಗುಳೇದಗುಡ್ಡ ಮಾತನಾಡಿ, ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಕಂಪ್ಯೂಟರ್‌ಗಳು ಇಲ್ಲವೆಂದು ಬೇಡಿಕೆ ನೀಡಿದ ಮೂರು ತಿಂಗಳಲ್ಲಿ ಒದಗಿಸಿ ಉದ್ಘಾಟನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸರ್ಕಾರಿ ಕಾಲೇಜಿನ ಮಕ್ಕಳ ಅನಕೂಲಕ್ಕೆ ತ್ವರಿತವಾಗಿ ಸ್ಪಂದಿಸಿದ್ದಕ್ಕೆ ವಿದ್ಯಾರ್ಥಿಗಳು ಖುಷಿಯಾಗಿದ್ದಾರೆ ಎಂದರು.
ಈ ವೇಳೆ ಮುಖಂಡರಾದ ನಿಂಗನಗೌಡ ಲಕ್ಕನಗೌಡ್ರ, ಅಲ್ಲಾಬಕ್ಷಿ ನದಾಫ್, ಮೈಲಾರಪ್ಪ ವೀ. ಚಳ್ಳಮರದ, ಸಂತೋಷ ಹನಮಸಾಗರ, ಸದ್ದಾಂ ನಶೇಖಾನ್, ವೀರನಗೌಡ ಪಾಟೀಲ, ಗಿರೀಶ ಹೆಗ್ಗಡಿನ್ನಿ, ಎನ್ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶಿವಮೂರ್ತಿ ಕುರೇರ, ಸುನಂದಾ ಮುಂಜಿ, ಜಯಶ್ರೀ ಮುತಗಾರ, ಶಶಿಕಲಾ ವಿ. ಎಸ್, ಕೆ. ಆರ್. ಪಾಟೀಲ, ನಸರೀನಾಬಾನು ಜಮಾದಾರ, ವಿರೂಪಾಕ್ಷ, ಶಿವಪ್ಪ ಕುರುಬರ, ಅನೀಲಕುಮಾರ, ಅಯ್ಯಪ್ಪ, ವಿರೂಪಾಕ್ಷ, ವಿ. ಸಿ. ಇಲ್ಲೂರ, ವಿ. ಕೆ. ಸಂಗನಾಳ, ಕಿರಣ ರಂಜಣಗಿ, ಎನ್. ಎಸ್. ಹೊನ್ನೂರ, ಚಂದ್ರು ಸಂಶಿ, ಬಸವರಾಜ ಎಸ್. ಮಡಿವಾಳರ, ಬಿ. ಕೆ. ಕಂಬಳಿ, ಶಂಕರ ನರಗುಂದ, ಎಂ. ಎಫ್. ತಹಶೀಲ್ದಾರ, ಕೆ. ಎನ್. ಕಟ್ಟಿಮನಿ ಇದ್ದರು.
Post a Comment