ನರಗುಂದ : (Mar_06_2025)
ಐದು ತಿಂಗಳ ಬಾಣಂತಿಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದ ಹಗೇದಕಟ್ಟಿಯಲ್ಲಿ ನಡೆದಿದೆ.
ಪವಿತ್ರಾ ಕಲ್ಲಕುಟಿಕರ್ (25) ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಾಣಂತಿಯಾಗಿದ್ದು, ತವರು ಮನೆಯಿಂದ ಗಂಡನ ಮನೆಗೆ ಬಂದ ಮೂರೇ ದಿನದಲ್ಲಿ ಪವಿತ್ರಾ ಮೃತಳಾಗಿದ್ದಾಳೆ.
ಇನ್ನು ಪವಿತ್ರಾ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ಕುತ್ತಿಗೆ ಹಿಸುಕಿ ನೇಣುಬಿಗಿದು ಹತ್ಯೆಮಾಡಿರುವ ಆರೋಪ ಕೇಳಿಬಂದಿದೆ. ಪವಿತ್ರಾ ಗಂಡ ಹರೀಶ್ ಕಲ್ಲಕುಟಿಕರ್, ಮಾವ ಮೂಕಪ್ಪ, ಅತ್ತೆ ಸೋಮವ್ವ ಇವರ ಮೇಲೆ ಕೊಲೆ ಆರೋಪ ಕೇಳಿ ಬಂದಿದೆ.
ಸೊಸೆ ಪವಿತ್ರಾಳಿಗೆ ವರದಕ್ಷಿಣೆ ಹಣ ತರುವಂತೆ ನಿತ್ಯ ಕಿರುಕುಳ ನೀಡುತ್ತಿದ್ದ ಆರೋಪವಿದ್ದು, ನಿನ್ನೆ ಸಂಜೆ ಮನೆಯಲ್ಲಿ ಪವಿತ್ರಾ ಮೇಲೆ ಹಲ್ಲೆ ಮಾಡಿ ನೇಣುಬಿಗಿದಿರುವ ಶಂಕೆ ವ್ಯಕ್ತವಾಗಿದೆ. ಬಾಣಂತಿ ಸಾವಿನಿಂದ ಹಸುಗೂಸು ಅನಾಥವಾಗಿದ್ದು, ಮಗಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವರದಕ್ಷಿಣೆ ಕಿರುಕುಳ ಹಿನ್ನೆಲೆ ಕೊಲೆ ಪವಿತ್ರಾಳ ಕುಟುಂಬಸ್ಥರು ಅಂತಾ ದೂರು ದಾಖಲಿಸಿದ್ದು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment