-->
Bookmark

Gajendragad : ಬಿಜೆಪಿ ತಪ್ಪಿದ್ದರೆ ಸನ್ಮಾನ್ಯ ಶಾಸಕರ ಪಾದ ಹಿಡಿದು ಬಹಿರಂಗವಾಗಿ ಕ್ಷಮೆ ಕೇಳುವೆ‌, ಶಾಸಕರ ತಪ್ಪಿದ್ದರೆ ಮತದಾರರ ಬಳಿ ಬಹಿರಂಗ ಕ್ಷಮೆ ಕೇಳಬೇಕು : ಅಶೋಕ್ ವನ್ನಾಲ್

Gajendragad : ಬಿಜೆಪಿ ತಪ್ಪಿದ್ದರೆ ಸನ್ಮಾನ್ಯ ಶಾಸಕರ ಪಾದ ಹಿಡಿದು ಬಹಿರಂಗವಾಗಿ ಕ್ಷಮೆ ಕೇಳುವೆ‌, ಶಾಸಕರ ತಪ್ಪಿದ್ದರೆ ಮತದಾರರ ಬಳಿ ಬಹಿರಂಗ ಕ್ಷಮೆ ಕೇಳಬೇಕು : ಅಶೋಕ್ ವನ್ನಾಲ್ 

ಗಜೇಂದ್ರಗಡ : (Mar_24_2025)

ಆಹ್ವಾನ ಸ್ವೀಕರಿಸಿದ್ದಕ್ಕೆ ಕಾಂಗ್ರೆಸ್ ಹಿರಿಯ ಮುಖಂಡರಾದ ವೀರಣ್ಣ ಶೆಟ್ಟರ್ ಅವರಿಗೆ ಧನ್ಯವಾದಗಳು. ಅವರು ಹಿರಿಯರು. ಅವರ ಮುಂದೆ ನಾನು ತುಂಬಾ ಚಿಕ್ಕವನು. ಅವರು ದಾಖಲೆಯೊಂದಿಗೆ ಬರುತ್ತಾರೆ ಎಂದರೆ ಅದು ಸಂತೋಷದ ಸಂಗತಿ ಎಂದಿದ್ದಾರೆ. ಪುರಸಭೆ ಅಧ್ಯಕ್ಷರಾದ ಸುಭಾಷ್ ಮ್ಯಾಗೇರಿ ಅವರಿಗೂ ಸ್ವಾಗತ ಎಂದು ಬಿಜೆಪಿ ಮುಖಂಡ ಅಶೋಕ್ ವನ್ನಾಲ್ ಹೇಳಿದ್ದಾರೆ. 

ಬಹಿರಂಗ ಚರ್ಚೆ ಬಗ್ಗೆ ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಅವರು, ಬಹಿರಂಗ ಚರ್ಚೆಗೆ ಗದಗ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು, ಕ್ರೀಡಾ ಇಲಾಖೆಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಮತ್ತು ಅಧಿಕಾರಿಗಳು, ಪೊಲೀಸ್ ಇಲಾಖೆಯಿಂದ ಎಸ್.ಪಿ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಸೇರಿದಂತೆ ಎಲ್ಲರನ್ನು ಕರೆದು ಗಜೇಂದ್ರಗಡದ ಕೆಕೆ ಸರ್ಕಲ್ ನಲ್ಲಿ ಟೆಂಟ್ ಹಾಕಲಿ. ನಾನು ಚರ್ಚೆಗೆ ಬರುತ್ತೇನೆ ಎಂದಿದ್ದಾರೆ. ಸನ್ಮಾನ್ಯ ಜಿ.ಎಸ್. ಪಾಟೀಲರು ಸೇರಿದಂತೆ ಚರ್ಚೆಗೆ ಯಾರ್ಯಾರು ಬರ್ತಿರಾ ಬನ್ನಿ. ಮತದಾರರಿಗೆ ಸತ್ಯ ತಿಳಿಯಲಿ. ಬಿಜೆಪಿ ಸುಳ್ಳು ಹೇಳುತ್ತಿದೆಯೋ, ಕಾಂಗ್ರೆಸ್ ಸುಳ್ಳು ಹೇಳುತ್ತಿದೆಯೋ ಸಾರ್ವಜನಿಕರಿಗೆ ತಿಳಿಯಲಿ ಎಂದರು. 
ನಾನು ಸುಳ್ಳು ಹೇಳಿದರೇ, ಜಿ.ಎಸ್. ಪಾಟೀಲ್ ಅವರ ಪಾದ ಹಿಡಿದು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ.‌ ಒಂದು ವೇಳೆ ಶಾಸಕರದ್ದು ತಪ್ಪಿದ್ದರೇ, ಮತದಾರರ ಬಳಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಸವಾಲು ಹಾಕಿದರು. 

ರೋಣ ಮತ ಕ್ಷೇತ್ರದ ಜನತೆಗೆ ಸತ್ಯ ತಿಳಿಯಲಿ. ಇವ್ರು ಎಲ್ಲಿ ಮಣ್ಣು ಸಂಗ್ರಹಿಸಿದ್ದಾರೋ ಆ ಜಾಗಕ್ಕೆ ಪತ್ರಕರ್ತರಿಗೆ ನಾನು ತೋರಿಸುತ್ತೇನೆ ಎಂದಿದ್ದಾರೆ ಬಿಜೆಪಿ ಮುಖಂಡ ಅಶೋಕ್ ವನ್ನಾಲ್. 

ಪಟ್ಟಣದಲ್ಲಿ ಮಣ್ಣು ಅಗೆಯುತ್ತಿರುವ ಪ್ರಕರಣ ದಿನೇ‌ ದಿನೇ ಸೂರ್ಯನ ಶಾಖದಂತೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಬೆಂಕಿ ಕೆಂಡವಾಗುತ್ತಿದೆ. ಇವೆಲ್ಲವೂ ತೆರೆಮರೆಯಲ್ಲೆ ನಡೆಯುತ್ತಾ ಇಲ್ಲ. ತೆರೆಯ ಮುಂದೆಯೂ ಚರ್ಚೆ ನಡೆಯುತ್ತಾ ಎಂಬುದನ್ನ ಕಾದು ನೋಡಬೇಕಿದೆ.
Post a Comment

Post a Comment