ಗಜೇಂದ್ರಗಡ : (Mar_15_2025)
ಹೋಳಿ ಹುಣ್ಣಿಮೆ ಸಂಭ್ರಮ ಗಜೇಂದ್ರಗಡದಲ್ಲಿ ಮನೆ ಮಾಡಿದೆ. ತಮ್ಮ ತಮ್ಮ ವಠಾರದ ಮಹಿಳೆಯರು ಬಣ್ಣದಲ್ಲಿ ಮಿಂದೆದ್ದರು. 10 ವರ್ಷದ ಹಿಂದೆ ಮಹಿಳೆಯರು ಮನೆಯಿಂದ ಹೊರ ಬರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೀಗ ಮಹಿಳೆಯರು ಮನೆಯಿಂದ ಹೊರ ಬಂದು ಹಬ್ಬಹರಿದಿನಗಳಲ್ಲಿ ಮಹಿಳೆಯರು, ಮಕ್ಕಳು ಕುಟುಂಬ ಸಮೇತರಾಗಿ ಹೋಳಿ ಆಚರಿಸಿ, ಗಮನ ಸೆಳೆದರು. ಬಸವೇಶ್ವರ ನಗರದಲ್ಲಿ ಮಹಿಳೆಯರು ಮಿಂದೆದ್ದು, ಫೋಟೋಗೆ ಪೋಸ್ ಕೊಟ್ಟಿದ್ದು ಕಂಡು ಬಂತು.
ಇನ್ನೂ, ಬಣ್ಣಹಚ್ಚಿ, ಪುರುಷರು ಪಾರ್ಟಿ ಗಿರ್ಟಿ ಎಂದು ತಮ್ಮ ಸ್ನೇಹಿತರ ಬಳಗದೊಂದಿಗೆ ಹೊರ ಹೋಗಿ ಊಟ ಸವಿಯೂವ ಪರಿಪಾಠ ಅಂತು ಎಂದಿನಂತೆ ಕಂಡು ಬಂತು.
Post a Comment