ವಿಂಡ್ ಪವರ್ ನೆಪದಲ್ಲಿ ರೈತರಿಗೆ ಪಂಗನಾಮ : ಗಣೇಶ್ ಗುಗಲೋತ್ತರ್
ವಿಂಡ್ ಪವರ್ ನೆಪದಲ್ಲಿ ಅನ್ಯಾಯವಾಗಿದ್ದರೆ ಸಂಪರ್ಕಿಸಿ : ಗಣೇಶ್ ಗುಗಲೋತ್ತರ್
ಗಣೇಶ್ ಗುಗಲೋತ್ತರ್ ತಮ್ಮ ಫೇಸ್ಬುಕ್ ನಲ್ಲೂ ಪೋಸ್ಟ್
ರೈತರ ಬೆನ್ನಿಗೆ ನಿಂತ ಕಜಸೇಸ ರಾಜ್ಯಾಧ್ಯಕ್ಷ
ಗಜೇಂದ್ರಗಡ : (Mar_18_2025)
ಸರ್ಕಾರ ಸಬ್ಸಿಡಿ ನಿಡುವ ಯೋಜನೆ ಕೆಲ ಕಂಪನಿಳಿಗೆ ವರದಾನವಾಗಿದೆ. ಚಿಲ್ಲರೆ ಕಾಸು ಹೂಡಿಕೆ ಮಾಡಿ, ರೈತರ ಜಮೀನಿನ ಮೇಲೆ ಹಿಡಿತ ಸಾಧಿಸಿ, ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುವ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಕರ್ನಾಟಕ ಜನಪರ ಸೇವಾ ಸಮಿತಿ ರಾಜ್ಯಾಧ್ಯಕ್ಷ ಗಣೇಶ್ ಗುಗಲೋತ್ತರ್.
ವಿಂಡ್ ಪವರ್ ಹಾವಳಿ ರಾಜ್ಯಾದ್ಯಂತ ಹೆಚ್ಚಾಗಿದೆ. ಆದ್ರೆ, ಗದಗ ಮತ್ತು ಕೊಪ್ಪಳ ಜಿಲ್ಲೆಯ ರೈತರಿಗೆ ಖಾಸಗಿ ವಿಂಡ್ ಪವರ್ ಕಂಪನಿಗಳು ಸಿಂಹ ಸ್ವಪ್ನವಾಗಿ ಕಾಡುತ್ತಿದೆ. ದಶಗಳಿಂದಲೂ ರೈತರ ಜಮೀನಿನ ಮೇಲೆ ಕಬ್ಜಾ ಮಾಡಿ, ಸರ್ಕಾರದ ನಿಯಮ ಗಾಳಿಗೆ ತೂರಿ ತಮಗೆ ಇಷ್ಟ ಬಂದಂತೆ ನಿಯಮ ರೂಪಿಸಿ, ರೈತರಿಗೆ ಬಿಡಿಗಾಸು ನೀಡುತ್ತಿರುವ ಮತ್ತು ರೈತರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಗದಗ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಆಗಾಗ ಕೇಳಿ ಬರುತ್ತಿವೆ. ಇದೆಲ್ಲವನ್ನ ಗಮನಿಸಿದ ಕಜಸೇಸ ರಾಜ್ಯಾಧ್ಯಕ್ಷ ಗಣೇಶ್ ಗುಗಲೋತ್ತರ್, ರೈತರ ನೆರವಿಗೆ ನಿಂತಿದ್ದಾರೆ.
ರೈತ ದೇಶದ ಬೆನ್ನೆಲುಬು ನಿಜ. ಆದ್ರೆ, ಆ ಬೆನ್ನೆಲುಬನ್ನೆ ಮುರಿದು ಮೂಲೆ ಗುಂಪು ಮಾಡಿ, ಮುಂಬರುವ ದಿನಗಳಲ್ಲಿ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣ ಮಾಡಲು ಮುಂದಾಗಿದೆ. ಇದಕ್ಕೆ ನಿದರ್ಶನ ಬಡತನದಿಂದ ಬಳಲುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಹೀಗಾಗಿ, ರೈತರಿಗೆ ಸಹಾಯ ಮಾಡುವ ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸಲು ಗಣೇಶ್ ಗುಗಲೋತ್ತರ್ ರೆಡಿಯಾಗಿದ್ದಾರೆ.
ವಿಂಡ್ ಪವರ್ ನೆಪದಲ್ಲಿ ಕೆಲ ಫಲವತ್ತಾದ ಭೂಮಿಯನ್ನ ರೈತ ಕಳೆದುಕೊಳ್ಳುತ್ತಿದ್ದಾರೆ. ರೈತರಿಗೆ ಅನ್ಯಾಯ ಮಾಡುವ ಕಂಪನಿಗಳ ವಿರುದ್ಧ ದೂರುಗಳಿದ್ದಲ್ಲಿ ಗದಗ, ಕೊಪ್ಪಳ ಅಷ್ಟೆ ಅಲ್ಲದೆ, ರಾಜ್ಯಾದ್ಯಂತ ರೈತರು ನಮ್ಮನ್ನು ಸಂಪರ್ಕಿಸಿ ಎಂದು ಗಣೇಶ್ ಗುಗಲೋತ್ತರ್ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನೂ, ಕೆಲ ಕಂಪನಿಗಳು ಹಗಲು ದರೋಡೆಗೆ ನಿಂತಿವೆ. ಅದರಲ್ಲಿ ಕೆಲ ಕಂಪನಿಗಳು ರೇನ್ಯೂ, ರೇನ್ಯೂ ಬೆಲ್, ಯಾಕ್ ಮಿ, ಸುಜ್ಜಲನ್, ಶಾ ಮ್ಯಾನ್ಸನ್ ಗೇಮಿಂಗ್, ಜಿಂದಾಲ್, ಎನ್ ಎಸ್ ಪವರ್ ಸೇರಿದಂತೆ ನೂರಾರು ಕಂಪನಿಗಳು ನಾಯಿಕೊಡೆಗಳಂತೆ ಅಲ್ಲಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜೊತೆಗೆ ಗಣೇಶ್ ಗುಗಲೋತ್ತರ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲೂ ಪೋಸ್ಟ್ ಹಂಚಿಕೊಂಡಿದ್ದಾರೆ. ರಾಜ್ಯಾದ್ಯಂತ ರೈತರು ಆತಂಕಗೊಳ್ಳುವ ಅಗತ್ಯ ವಿಲ್ಲ. ಅವರ ಬೆಂಬಲಕ್ಕೆ ನಾವಿದ್ದೇವೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಿ, ರೈತರ ಬೆನ್ನಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.
Post a Comment