ಗಜೇಂದ್ರಗಡ : (Mar_23_2025)
ಪಟ್ಟಣದ ಗುಡ್ಡದಲ್ಲಿ ಮಣ್ಣು ಅಗೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡಿರುವ ಆರೋಪಕ್ಕೆ ಜೆಡಿಎಸ್ ಧ್ವನಿ ಗೂಡಿಸಿದೆ. ಕಾಂಗ್ರೆಸ್ ಭ್ರಷ್ಟಾಚಾರ ರಾಜ್ಯದಲ್ಲೂ ಇದೆ. ಕ್ಷೇತ್ರದಲ್ಲೂ ಇದೆ. ಮುಂದುವರಿದಿದೆ. 5 ಗ್ಯಾರಂಟಿಗಳನ್ನ ಜಾರಿಗೆ ತಂದು ಭ್ರಷ್ಟಾಚಾರ ಮಾಡಲಾಗುತ್ತಿಲ್ಲ. ಹೀಗಾಗಿ, ಗುಡ್ಡಕ್ಕೆ ಕನ್ನ ಹಾಕಿದ್ದಾರೆ ಎಂದು ಮಕ್ತುಮಸಾಬ್ ಗಂಭೀರ ಆರೋಪ ಮಾಡಿದರು.
ಪ್ರಕೃತಿ ದತ್ತವಾದ ಗುಡ್ಡವನ್ನ Mines & Geology ಇಲಾಖೆ ಹೆಸರು ಹಾಕಿ ಹಗಲು ದರೋಡೆ ಮಾಡುತ್ತಿದ್ದಾರೆ. ಗುಡ್ಡವನ್ನ ಅಗೆದು ಕ್ರೀಡಾಂಗಣ ನಿರ್ಮಾಣಮಾಡಬೇಕಾ ಎಂದು ಪ್ರಶ್ನಿಸಿದರು.
ಇನ್ನು ದಾಖಲೆಗಳಿಲ್ಲದೇ, ಸರ್ಕಾರದ ಅನುದಾನ ಬಾರದೇ, ಕಾಮಗಾರಿ ಪ್ರಾರಂಭಿಸಿದ್ದು, ಮೊದಲ ತಪ್ಪು. ತಮ್ಮ ಅಧಿಕಾರವನ್ನ ಚಲಾಯಿಸಲು ತಹಶೀಲ್ದಾರ್ ಅವರ ಮೂಲಕ ಪತ್ರಿಕಾ ಹೇಳಿಕೆ ಕೊಟ್ಟಿರುವುದು ಸಹ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನ ಬಿಂಬಿಸುತ್ತದೆ. ಅಭಿವೃದ್ಧಿ ಬೇಕು. ಆದ್ರೆ, ಅಭಿವೃದ್ಧಿ ಹೆಸರಲ್ಲಿ ಕಾನೂನನ್ನ ಗಾಳಿಗೆ ತೂರುವುದನ್ನ ಸಹಿಸಲಾಗದು
ಎಂದು ಜೆಡಿಎಸ್ ಗದಗ ಜಿಲ್ಲಾಧ್ಯಕ್ಷ ಮಕ್ತುಮಸಾಬ್ ಮುಧೋಳ್ ಕಿರಾ ನ್ಯೂಸ್ ಕನ್ನಡಕ್ಕೆ ಮಾತನಾಡುತ್ತ ಕಾಂಗ್ರೆಸ್ ನಡೆಯನ್ನ ವಿರೋಧಿಸಿದರು.
Post a Comment