ಸಾಮ್ರಾಜ್ಯಶಾಹಿ ವ್ಯವಸ್ಥೆ ನಾಶ ಮಾಡಿ ಸಮಾಜವಾದಿ ರಾಷ್ಟ್ರ ಕಟ್ಟುವ ಕನಸು ಭಗತ್ ಸಿಂಗ್ ಹಾಗೂ ಸಂಗಡಿಗರದ್ದಾಗಿತ್ತು : ಬಾಲು ರಾಠೋಡ
ಗಜೇಂದ್ರಗಡ : (Mar_2025)
ಪಟ್ಟಣದ ಎಸ್ ಎಫ್ ಐ ನ ಕಾರ್ಯಾಲಯದಲ್ಲಿ ಭಗತ್ ಸಿಂಗ್ ಹಾಗೂ ಸಂಗಡಿಗರ ಹುತಾತ್ಮ ದಿನಾಚರಣೆಯನ್ನು ಎಸ್ ಎಫ್ ಐ - ಡಿವೈಎಫ್ ಐ- ಸಿಐಟಿಯು- ಎಐಎಡ್ಲೂಯು ಹೀಗೆ ಸಾಮೂಹಿಕ ಸಂಘಟನೆಗಳ ನೇತೃತ್ವದಲ್ಲಿ ಹುತಾತ್ಮ ದಿನವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಐಎಡ್ಲೂಯು ನ ತಾಲ್ಲೂಕು ಅಧ್ಯಕ್ಷರಾದ ಬಾಲು ರಾಠೋಡ ಮಾತನಾಡಿ ಭಗತ್ ಸಿಂಗ್ ಅವರ ಕನಸಿನ ಭಾರತ ಕಟ್ಟಬೇಕಾದರೆ ನಾವು ಅವರಂತೆ ಅದ್ಯಯನ ಶೀಲರಾಗಬೇಕು ಜೊತೆಗೆ ಇಂದಿನ ಅಮೇರಿಕ ಅಂತಹ ದೊಡ್ಡ ಸಾಮ್ರಾಜ್ಯಶಾಹಿ ದೇಶ ಕ್ಯೂಬಾ ಎನ್ನುವ ಚಿಕ್ಕ ರಾಷ್ಟ್ರದ ಮೇಲೆ ನಿರಂತರ ದಾಳಿ ದಬ್ಬಾಳಿಕೆಯ ಮಾಡುತ್ತಲೆ ಇದೆ ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕ್ಯೂಬಾ ಇಂದು ಜಗತ್ತಿಗೆ ಆರೋಗ್ಯ ಕ್ಷೇತ್ರಕ್ಕೆ ವೈದ್ಯರನ್ನು ಮತ್ತು ಶಿಕ್ಷಕರನ್ನು ನೀಡುತ್ತಿದೆ ಅದು ಒಂದು ಸಮಾಜವಾದಿ ರಾಷ್ಟ್ರ ಎನ್ನುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲಾ ಅಮೇರಿಕಾಗೆ ಹೀಗಾಗಿ ಇಂದು ಅದರ ಮೇಲೆ ದಾಳಿ ಮಾಡಿ ತೆರಿಗೆ ವಿಧಿಸುವ ಕೆಲಸ ಮಾಡುತ್ತಿದೆ.ಇದನ್ನು ನಾವು ಅರ್ಥ ಮಾಡಿಕೊಂಡು ಕ್ಯೂಬಾಗೆ ಸಹಾಯ ನೀಡಬೇಕಿದೆ. ಭಗತ್ ಸಿಂಗ್ ಮತ್ತು ಸಂಗಡಿಗರು ಈ ಕಾರಗಳಿಗಾಗಿಯೇ ತಮ್ಮ ಅಮೂಲ್ಯ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಹಾಗಾಗಿ ಅವರ ಕನಸು ನನಸಾಗಿಸಲು ಕೆಲಸವನ್ನು ಮಾಡಬೇಕೆಂದರು.
ನಂತರ ಎಸ್ಎಫ್ಐನ ರಾಜ್ಯ ಮುಖಂಡರಾದ ಗಣೇಶ ರಾಠೋಡ ಮಾತನಾಡಿ ಉದಾತ್ತ ಕಾರಣಕ್ಕಾಗಿ ಮಾಡುವ ತ್ಯಾಗ ಎಂದಿಗೂ ವ್ಯರ್ಥವಾಗಲ್ಲಾ ಅಂತಹ ತ್ಯಾಗವನ್ನು ಭಗತ್ ಸಿಂಗ್ ಹಾಗೂ ಸಂಗಡಿಗರು ಮಾಡಿದ್ದಾರೆ ಹಾಗಾಗಿ ಇವತ್ತಿನ ವಿದ್ಯಾರ್ಥಿ ಯುವಜನರು ಭಗತ್ ಸಿಂಗ್ ಹಾಗೂ ಸಂಗಡಿಗರನ್ನು ಓದುವುದು ಅಗತ್ಯವಿದೆ ಮತ್ತು ಅವರ ಮಾರ್ಗದಲ್ಲಿ ನಡೆದರೆ ಅದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.
ಎಸ್ ಎಫ್ ಐ ತಾಲ್ಲೂಕು ಅಧ್ಯಕ್ಷರಾದ ಅನೀಲ್ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ನ ಜಿಲಾಧ್ಯಕ್ಷರಾದ ಚಂದ್ರು ರಾಠೋಡ, ಸಿಐಟಿಯುನ ಮುಖಂಡರಾದ ಮೆಹಬೂಬ್ ಹವಾಲ್ದಾರ್, ರೇವಣಪ್ಪ ರಾಠೋಡ ಡಿವೈಎಫ್ ಐ ನ ಮುಖಂಡರಾದ ಕನಕಪ್ಪ ಮಾದರ, ಎಸ್ ಎಫ್ ಐ ನ ಮುಖಂಡರಾದ ಪ್ರಜ್ವಲ್ ಕಲಾಲ್, ಮೌಲು ಡಾಲಾಯತ್ ಮತ್ತು ಇತರರು ಹಾಜರಿದ್ದರು.
Post a Comment