-->
Bookmark

Gajendragad : ಕನ್ನಡದ ಬಾವುಟಕ್ಕೆ ಅವಮಾನ : ಕಣ್ಮುಚ್ಚಿ ಕುಳಿತ ಪುರಸಭೆ

Gajendragad : ಕನ್ನಡದ ಬಾವುಟಕ್ಕೆ ಅವಮಾನ : ಕಣ್ಮುಚ್ಚಿ ಕುಳಿತ ಪುರಸಭೆ 

ಗಜೇಂದ್ರಗಡ : (Mar_05_2025)

ಮಾರ್ಚ್ 4 ರಂದು ವಿಶ್ವಾದ್ಯಂತ ಕ್ರಿಕೆಟ್ ಪ್ರೇಮಿಗಳು ಭಾರತ ಮತ್ತು  ಆಸ್ಟ್ರೇಲಿಯಾ ಪಂದ್ಯದಲ್ಲಿ ಕ್ರಿಕೆಟ್ ನೋಡುತ್ತ, ಭಾತರದ ಬಾವುಟ ದುಬೈನಲ್ಲಿ ರಾರಾಜಿಸುವುದನ್ನ ನೋಡಿ ಚಪ್ಪಾಳೆ ತಟ್ಟಿ, ಗೌರವ ಸಲ್ಲಿಸಿ, ಹೆಮ್ಮೆ ಪಡುತ್ತಿದ್ದರೇ, ಇತ್ತ ಗಜೇಂದ್ರಗಡದ ಪ್ರಮುಖ ಬೀದಿಗಳಲ್ಲಿ ಕನ್ನಡ ಬಾವುಟಕ್ಕೆ ಅವಮಾನ‌ ಮಾಡುವ ಘಟನೆ ನಡೆದಿದೆ. ಜನವರಿ 20_21 ರಂದು ಜಿಲ್ಲಾ ಸಮ್ಮೇಳನದ ಹಿನ್ನೆಲೆ ಹಾಕಿದ್ದ ಕನ್ನಡದ ಹಳದಿ ಮತ್ತು ಕೆಂಪು ಬಾವುಟ ಹರಿದು ಹಾಕಿದ್ದಾರೆ, ಅಗೌರವ ತೋರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕನ್ನಡ ಬಾವುಟದ ಬಣ್ಣ ಹೊಂದಿರುವ ಬಟ್ಟೆ ಇರಬಹುದು. ಆದ್ರೆ, ಅದಕ್ಕೆ ಅದರದೇ ಆದ ಘನತೆ ಗೌರವ ಇದೆ. ಆದ್ರೆ, ಪಟ್ಟಣದ ಪುರಸಭೆ ಬಾವುಟಕ್ಕೆ ಚ್ಯುತಿ ಬರುವಂತೆ ವರ್ತಿಸಿದ್ದಾರೆ. ಪಟ್ಟಣದಾದ್ಯಂತ ಹಾಕಿದ್ದ ಬಾವುಟ ತೆಗೆಯುವಾಗ ಲೋಪ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.  ಬಾವುಟಕ್ಕೆ ಅಥವಾ ಬಾವುಟದ ಸಂಕೇತವಾಗಿ ಬಳಸಿದ ಬಟ್ಟೆಗಳನ್ನ ಹರಿದು, ಹಂಚಿ, ರಸ್ತೆ ಮೇಲೆ ಅದನ್ನ ಬಿಸಾಡಿ ಮನ ಬಂದಂತೆ ಮಸಿ ಅರಬಿ ( ಮನೆಯಲ್ಲಿ ಬಳಸುವ ಮಸಿ ಬಟ್ಟೆ, ಅಥವಾ ಮುಸರಿ ಬಟ್ಟೆ ) ಬಳಸುವಂತೆ ಬಳಸಿ, ಅವಮಾನ ಮಾಡಿದ್ದು, ಯಾರ ಕಣ್ಣಿಗೂ ಕಾಣದಂತಾಗಿದೆ. ಪುರಸಭೆ ಸಿಬ್ಬಂದಿಗಳಿಗೆ ತರಬೇತಿಯ ಅವಶ್ಯಕತೆ ಇದೆ. ಇದೆಲ್ಲ ಜವಾಬ್ದಾರಿಯಿಂದ ನಿರ್ವಹಿಸಬೇಕಾದ ಕೆಲಸವೂ ಹೌದು. ಆದ್ರೆ, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ಬೇಸರದ ಸಂಗತಿ. ಇನ್ನೂ, ಕೆಲವೆ ತಿಂಗಳಲ್ಲಿ ಪುರಸಭೆ ಚುನಾವಣೆ ನಡೆಯಲಿದೆ. ಈ ಹಂತದಲ್ಲಾದರೂ, ಜಾಗರೂಕತೆಯಿಂದ ಇರಬೇಕಾದ, ಕೆಲಸ ಮಾಡುವಾಗ ನಿರ್ವಹಿಸಬೇಕಾದ ಜವಾಬ್ದಾರಿಯೂ ತಿಳಿಯದಂತಾಗಿರುವುದು ವಿಪರ್ಯಾಸ. ಗಡಿಯಲ್ಲಿ ಕನ್ನಡದ ವಿಷಯ ಬಂದಾಗ ಪುಂಖಾನುಪುಂಖವಾಗಿ ಮಾತನಾಡುವ ಕನ್ನಡದ ಕಟ್ಟಾಳುಗಳು ಈಗ ಮಾಯವಾಗಿದ್ದಾರೆ. ತಮ್ಮ ಬೀದಿಯಲ್ಲಿ ಕನ್ನಡದ ಬಾವುಟಕ್ಕೆ ಮಾಡಿದ ಅವಮಾನ ಕನ್ನಡಕ್ಕೆ ಅವಮಾನ ಮಾಡಿದಂತೆ ಎಂದು ಹೇಳುವವರು ಇಲ್ಲದಂತಾಗಿದೆ. System ಗೆ ಹೊಂದಿಕೊಂಡು, ಹೊಂದಾಣಿಕೆ ವಿಷಯ ರಾಜಕೀಯಕ್ಕೆ ಮಾತ್ರ ಸೀಮಿತ ಇರಲಿ. ಕನ್ನಡದ ವಿಷಯ ಬಂದಾಗಲಾದರೂ ಸರಿ, ತಪ್ಪುಗಳನ್ನ ತಿದ್ದಿ ಹೇಳಿ. ಒಂದಲ್ಲ ಒಂದು ದಿನ ಸಾರ್ವಜನಿಕರೇ ಬೀದಿಗಿಳಿದು ಹೋರಾಟ ಮಾಡುವ ದಿನಗಳು ದೂರವಿಲ್ಲ. ಎಲ್ಲರಿಗೂ ಪಾಠ ಕಲಿಸುವ ಸಾರ್ವಜನಿಕರು, ಮತದಾರರೇ ನಿರ್ಣಾಯಕರು ಎಂಬುದನ್ನ ಮರೆಯಬೇಡಿ...!!! 

ವರದಿ : 
ಕೃಷ್ಣ ರಾಠೋಡ್, 
ಸಂಪಾದಕರು, ಕಿರಾ ನ್ಯೂಸ್ ಕನ್ನಡ, ಗಜೇಂದ್ರಗಡ.‌ 
ಮೊ : 8197474996
Post a Comment

Post a Comment

Design By Raushan Design and MafiaXDesign and ThemeXDesign