ಗಜೇಂದ್ರಗಡ : ( Mar_22_2025)
ಪಟ್ಟಣದ ಗುಡ್ಡದಲ್ಲಿ ಮಣ್ಣು ಅಗೆಯುತ್ತಿರುವ ಪ್ರಕರಣವನ್ನ ಬಿಜೆಪಿ ಕಟುವಾಗಿ ಟೀಕಿಸಿದೆ. ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಅಶೋಕ್ ವನ್ನಾಲ್, ಗಜೇಂದ್ರಗಡದಲ್ಲಿ ಮಣ್ಣು ಮಾಫಿಯಾ ನಡೆಯುತ್ತಿದೆ ಎಂದು ಆರೋಪಿಸಿದರು. ಅಲ್ಲದೇ, ಅನುದಾನ ಬಂದಿದೆ ಅಂತಾ ಶಾಸಕರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಕ್ರೀಡಾ ಇಲಾಖೆಗೆ ಗುಡ್ಡದ ಮೇಲೆ ಜಗಾ ಸಿಕ್ಕಿದೆ ಅಂತಾ ಹೇಳುತ್ತಾರೆ. ಅದಿಕ್ಕೆ ಸಂಬಂಧ ಪಟ್ಟಂತೆ ಯಾವುದೇ ದಾಖಲೆಗಳಿಲ್ಲ. ಅನುದಾನ ಸಹ ಬಿಡುಗಡೆಯಾಗಿಲ್ಲ. ಗಜೇಂದ್ರಗಡ ಮತ್ತು ರಾಜೂರಿಗೆ ಸಂಬಂಧಿಸಿದಂತೆ ಗುಡ್ಡವನ್ನ ಕೊಳ್ಳೆ ಹೊಡೆದು, ದುಡ್ಡು ಮಾಡುವ ಮಾಫಿಯಾ ನಡೆದಿದೆ ಎಂದು ನೇರವಾಗಿ ಆರೋಪಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ, ತಹಶೀಲ್ದಾರ್, ಪಿ.ಎಸ್.ಐ, ಕ್ರೀಡಾ ಇಲಾಖೆ ಅಧಿಕಾರಿಗಳುಗೂ ಕೇಳಿದಿವಿ. ಆದ್ರೆ, ಇಂದು ಬರ್ತಿವಿ, ನಾಳೆ ಬರ್ತಿವಿ, ನಾಡಿದ್ದು ಬರ್ತಿವಿ ಎಂದು ಹೇಳಿ ಒಂದು ತಿಂಗಳಿಂದ ಕಾಲಹರಣ ಮಾಡುತ್ತಿದ್ದಾರೆ. ಹೀಗಿದ್ದಾಗ ಕೊಳ್ಳೆ ಹೊಡೆಯೊರನ್ನ ತಡೆಯೋರು ಯಾರು ಎಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.
ಅಧಿಕಾರಿಗಳು ಶಾಸಕರ ಮೌಖಿಕ ಆದೇಶ ಅಂತಾ ಹೇಳ್ತಾರೆ. ಮೌಖಿಕ ಆದೇಶ ಅಂದ್ರೆ, ಯಾರು ಯಾರಿಗೆ ಆದೇಶ ಮಾಡಿದ್ರು..? ಲಿಖಿತವಾಗಿ ಕೊಡಿ. ಮಣ್ಣು ಎಲ್ಲಿಂದ ಎಲ್ಲಿಗೆ ಹೋಗ್ತಿದೆ. ಯಾವ ಆದೇಶವೂ ಇಲ್ಲ. ಕೇಳಿದ್ರೆ, ನನಗೆ ಗೊತ್ತಿಲ್ಲ. ನಿನಗೆ ಗೊತ್ತಿಲ್ಲ ಎಂದು ಅಧಿಕಾರಿಗಳು ಇದನ್ನೆ ಹೇಳುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ರು.
ರೋಣದಲ್ಲಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಾವಿತ್ರಿ ಎನ್ನುವವರಿಗೆ ಫೋನ್ ಮಾಡಿದ್ರೆ, ನಾನು ಒಂದು ತಿಂಗಳಿಂದ ರಜೆಯಲ್ಲಿದೇನೆ. ಮರಳಿ ಬಂದ ಬಳಿಕ ಪರಿಶೀಲನೆ ಮಾಡುತ್ತೇವೆ ಎನ್ನುತ್ತಾರೆ. ಆ ಒಂದು ತಿಂಗಳಲ್ಲಿ ಎಷ್ಟಾದ್ರು ಮಣ್ಣು ಕೊಳ್ಳೆ ಹೊಡೆಯಲಿ ಅಂತಾ ನಾ ಎಂದು ಪ್ರಶ್ನಿಸಿದರು. ನಾನು ಏನ್ ಮಾಡ್ಲಿ, ನಾನು ಹೆಲ್ಪ್ ಲೆಸ್ ಎಂದು ಅಧಿಕಾರಿಗಳು ಉತ್ತರಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮತ್ತೊಬ್ಬ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಗನಗೌಡ ಅನ್ನೋರಿಗೂ ಕರೆ ಮಾಡಿದಾಗ, ನಾನು ಬಂದು inspection ಮಾಡ್ತಿನಿ ಅಂತಾರೆ. ಯಾವಾಗ ಬರ್ತಿರಿ ಅಂದ್ರೆ, ಯಾವಾಗ ಅಂತಾ ಗೊತ್ತಿಲ್ಲ. ಬರ್ತಿವಿ ಅಷ್ಟೆ ಎಂಬ ಮಾತುಗಳು ಬರುತ್ತಿವೆ ಎನ್ನುತ್ತಾರೆ ಅಶೋಕ್ ವನ್ನಾಲ್.
ಗುಡ್ಡದ ಮೇಲಿರುವ Fan ಅವರಿಗೆ ಓಡಾಡಲು ಮತ್ತು ಅವರಿಗೆ ಸರಕುಗಳನ್ನ ಇಳಿಸಲು ಮಾಡುತ್ತಿರುವ ಮಾಫಿಯಾ. ಗಜೇಂದ್ರಗಡದವ್ರು ಒಂದು ಟ್ರಿಪ್ ಮಣ್ಣು ಕೇಳಿದ್ರೆ, ಸರ್ಕಾರಿ ಕೆಲಸ ಇದು ಹಂಗೆಲ್ಲ ಕೊಡೊಕೆ ಬರಲ್ಲ ಅಂತಾರೆ. ಇದೆಲ್ಲ ಕೊಳ್ಳೆ ಹೊಡೆಯೋ ಹುನ್ನಾರ ಎಂದು ಅಶೋಕ್ ವನ್ನಾಲ್ ಆರೋಪಿಸಿದರು.
ಈ ಮಧ್ಯೆ, ಮೊನ್ನೆ ಸನ್ಮಾನ್ಯ ಶಾಸಕರು ಒಂದು ಹೇಳಿಕೆ ಕೊಟ್ಟಿದಾರೆ. ಅಭಿವೃದ್ಧಿ ಕೆಲಸಗಳಿಗೆ ಬಿಜೆಪಿ ಅಡ್ಡಗಾಲು ಹಾಕ್ತಿದೆ ಅಂತಾ. ಯಾವ ಅಭಿವೃದ್ಧಿ ಕೆಲಸಕ್ಕೆ ಆ ಮಣ್ಣು ಹೋಗುತ್ತಿದೆ ಹೇಳ್ರಿ ಜನ್ರಿಗೆ ಎಂದು ಕಾಂಗ್ರೆಸ್ ನವರಿಗೆ ಸವಾಲು ಹಾಕಿದರು. ಒಂದು ಪ್ರೆಸ್ ಮೀಟ್ ಕರೀರಿ. ಇದಕ್ಕೆಷ್ಟು ಸರ್ಕಾರಕ್ಕೆ ದುಡ್ಡು ಕಟ್ಟಿದಿವಿ. ಯಾವ ಇಲಾಖೆಯಿಂದ ಯಾವ ಇಲಾಖೆಗೆ ಆದೇಶವಾಗಿದೆ ಎಂಬೆಲ್ಲ ವಿಷಯಕ್ಕೆ ಸಂಬಂಧಿಸಿದಂತೆ ಕುಳಿತುಕೊಂಡು ಮಾತಾಡೋಣ ಅಂತಾ ಬಹಿರಂಗ ಚರ್ಚೆಗೆ ಆಹ್ವಾನಿಸಿದರು.
ಗುಡ್ಡದಲ್ಲಿ ಮಣ್ಣು ಅಗೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ, ಪ್ರತ್ಯಾರೋಪ ಕಂಡು ಬರ್ತಿದೆ. ಬಿಜೆಪಿ ಆಹ್ವಾನವನ್ನ ಕಾಂಗ್ರೆಸ್ ಒಪ್ಪಿಕೊಳ್ಳುತ್ತಾ...? ಬಹಿರಂಗ ಚರ್ಚೆಗೆ ಕಾಂಗ್ರೆಸ್ ಸಿದ್ಧ ವಿದೆಯಾ ಎಂಬುದನ್ನ ಕಾದು ಕೋಡಬೇಕಿದೆ.
ಕೃಷ್ಣ ರಾಠೋಡ್
ಸಂಪಾದಕರು, ಕಿರಾ ನ್ಯೂಸ್ ಕನ್ನಡ. ಗಜೇಂದ್ರಗಡ.
ಮೊ : 8197474996
Post a Comment