-->
Bookmark

Gajendragad : ಕ್ರೀಡಾಂಗಣ ಕಾಮಗಾರಿ ಕಾನೂನು ಬಾಹಿರ ಆರೋಪ : ಜನರ ಕಣ್ಣಿಗೆ ಮಣ್ಣೆರಚುವ ಹಗಲು ದರೋಡೆನಾ...?

Gajendragad : ಕ್ರೀಡಾಂಗಣ ಕಾಮಗಾರಿ ಕಾನೂನು ಬಾಹಿರ ಆರೋಪ : ಜನರ ಕಣ್ಣಿಗೆ ಮಣ್ಣೆರಚುವ ಹಗಲು ದರೋಡೆನಾ...? 

ಗಜೇಂದ್ರಗಡ : (Mar_23_2025)

ಕೋಟೆನಾಡು ಗಜೇಂದ್ರಗಡ ಗುಡ್ಡದಲ್ಲಿ ನಡೆಯುತ್ತಿರುವ ಕ್ರೀಡಾಂಗಣ ಕಾಮಗಾರಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. 

ಗುಡ್ಡದಲ್ಲಿ ಕ್ರೀಡಾಂಗಣ ಆರಂಭಿಸುವ ಮೊದಲು ಕೌಂಟರ್ ಮ್ಯಾಪ್ ಹಾಕಬೇಕು. ಗುಡ್ಡದಲ್ಲಿ ಕಂಡು ಬರುವ ತಗ್ಗು, ದಿಬ್ಬಗಳ ಅಳತೆ ಪಡೆಯಲಾಗುತ್ತದೆ. ಗುಡ್ಡವನ್ನ ಅಗೆಯುವಾಗ ಬಂದ ಮಣ್ಣನ್ನು ಮತ್ತು ಕಲ್ಲುಗಳನ್ನ ಸೈಟ್‌ನಲ್ಲಿ ಒಂದೇ ಕಡೆ ಸಂಗ್ರಹಿಸಬೇಕು. ಹೀಗೆ ಸಂಗ್ರಹಿಸಿದ ಬಳಿಕ ಮಣ್ಣಿನ ಪರಿಶೀಲನೆ  ಮಾಡಲಾಗುತ್ತದೆ. ಅದರಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. 

ವರ್ಕ್‌ ಆರ್ಡರ್ ಪಡೆಯಲೇಬೇಕೆಂಬುದಿದೆ.  

10 ಕೋಟಿ ಹಣಕ್ಕಿಂತ ಕಡಿಮೆ ವೆಚ್ಚ ತಗಲುವ ಕಾಮಗಾರಿಗಳಿಗೆ ಚೀಫ್‌ ಇಂಜಿನಿಯರ್ ಹಂತದಲ್ಲಿ ಅನುಮೊದನೆ‌ ಪಡೆಯಬಹುದು.  10ಕೋಟಿಗಿಂತ ಹೆಚ್ಚು ಹಣದ ಕಾಮಗಾರಿಗೆ ಸೆಕ್ರೆಟರಿ ಯಿಂದ ಅನುಮೋದನೆ ಪಡೆಯಬೇಕು. ಕ್ರೀಡಾಂಗಣಕ್ಕೆ 9.95 ಕೋಟಿ ವೆಚ್ಚ ಅಂದಾಜು ಎಂದು ಹೇಳಲಾಗಿದೆ. ಇವರಿಗೆ 9.95 ಕೋಟಿ ವೆಚ್ಚ ಆಗಲಿದೆ ಎಂದು ಯಾರು ಹೇಳಿದ್ದು, ಯಾವ ಇಲಾಖೆ ಇವರಿಗೆ ಅಂದಾಜು ಪ್ರತಿ (Estimate) ಕೊಟ್ಟಿದೆ ಎಂಬ ಬಗ್ಗೆ ಚರ್ಚೆ ಜನರಲ್ಲಿ ಶುರುವಾಗಿದೆ. 


ಕ್ರೀಡಾಂಗಣವು ಮೊಟ್ಟೆಯಾಕಾರ ಇರಬೇಕು ಎಂದು ತಜ್ಞರು ಹೇಳುತ್ತಾರೆ. ಜೊತೆಗೆ ಅದಕ್ಕೆ ಬೇಕಾಗುವ ಸ್ಥಳಾವಕಾಶ ಸಹ 220 ಮೀಟರ್ ಗ್ರೌಂಡ್. ಅದಕ್ಕೆ ಬೇಕಾಗುವ ಒಟ್ಟು ಜಾಗ ಅಂದಾಜು 400 ಮೀಟರ್ ವಿಸ್ತಿರ್ಣ.

ಕಾಮಗಾರಿ ಪ್ರಾರಂಭಕ್ಕೂ ಮುನ್ನ (ADM ) ಆಡಳಿತಾತ್ಮಕ ಅನುಮೋದನೆ ಪಡೆಯಬೇಕು. ತಾಂತ್ರಿಕ ಮಂಜೂರಾತಿ ಬೇಕು. ಮಂಜೂರಾತಿ‌ ಬಳಿಕ (Division ) ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಳಿಸಲಾಗುತ್ತದೆ. ಅವರು ಎಲ್ಲವೂ ಪರಿಶೀಲನೆ ನಡೆಸಿದ ಬಳಿಕ ಸೂಪರಿಂಟೆಂಡೆಂಟ್ ಇಂಜಿನಿಯರ್ ಅವರಿಂದ  ಪಾಸಾಗಿ ಮತ್ತೆ ಚೀಫ್ ಇಂಜಿನಿಯರ್ Zonal ಮಟ್ಟದಲ್ಲಿ ಅನುಮೋದನೆ ಪಡೆಯಬೇಕು. ಇಷ್ಟಾದ ಬಳಿಕ Secretariat Office ಗೆ ಹೋಗತ್ತೆ. ನಂತರ  KPPP ದಾಖಲೆಗಳೆಲ್ಲ ಪರಿಶೀಲನೆ ( Design, Drawing ) ಸೇರಿ ತಾಂತ್ರಿಕವಾಗಿ ಎಲ್ಲವೂ ಸರಿ ಇದೆ. ಅಂದಾಗ ಮಾತ್ರ ಮಂಜುರಾತಿ ಸಿಗುತ್ತದೆ. ಆಗ ಟೆಂಡರ್ ಕರೆಯೋಕೆ ರೆಡಿ ಎಂದಾಗ KPPP ಯಿಂದ ಟೆಂಡರ್ ಪಾಸಾಗತ್ತೆ.

ಟೆಂಡರ್ ನಲ್ಲಿ ಅದಕ್ಕೆ ತಗಲುವ ವೆಚ್ಚಕ್ಕಿಂತ ಕಡಿಮೆ ಹಣದಲ್ಲಿ ಯಾರು ಕಾಮಗಾರಿ ಮಾಡಿಕೊಡಲು ಮುಂದೆ ಬರುತ್ತಾರೋ‌ ಅವರಿಗೆ ಈ ಟೆಂಡರ್ (( L-1) (Lower One )) ಕೊಡಲಾಗುತ್ತದೆ. ಆಗ ಸರ್ಕಾರದಿಂದ ವರ್ಕ್ ಆರ್ಡರ್ ರಿಸೀವ್ ಆಗತ್ತೆ. ಅವರಿಗೆ ಕಾಲಾವಧಿ ನಿಗದಿ ಪಡಿಸಿ ಕಾಮಗಾರಿ ಮಂಜೂರಾಗುತ್ತದೆ. ಪ್ರಕೃತಿ ‌ವಿಕೋಪ ಹೊರತು ಪಡಿಸಿ ಕಾಲಮಿತಿ ನೀಡಲಾಗುತ್ತದೆ. ಇದಾದ ಬಳಿಕ ಭೂಮಿ ಪೂಜೆ ಮಾಡಿ ಕೆಲಸ ಆರಂಭಿಸುತ್ತಾರೆ. ಕಾಮಗಾರಿ ಮುಗಿಸಿ ಸೈಟ್ ಹ್ಯಾಂಡೊವರ್ ಮಾಡಿ ಹೊಗುತ್ತಾರೆ.


ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಮಣ್ಣಿನ ಪರೀಕ್ಷೆ. 20 ಕೆಜಿ ಮಣ್ಣನ್ನ‌ ಲ್ಯಾಬ್ ಗೆ ಕಳುಸಿಲಾಗುತ್ತದೆ. ಈ ಮಣ್ಣನ್ನು ಅಗೆದರೆ, ಮಳೆಗಾಲದಲ್ಲಿ ಮಣ್ಣು ಕುಸಿಯುವ ಸಂಭವ ಮತ್ತು ಕಟ್ಟಡ ಕುಸಿಯುವ ಸಂಭವ  ಇದೆಯಾ ಅಥವಾ ಇಲ್ವಾ ಎಂಬುದನ್ನ ಸಹ ಪರೀಕ್ಷೆ ಮಾಡಲಾಗುತ್ತದೆ. ಈ ಪರೀಕ್ಷೆ ಮೂರು ಬಾರಿ ಹಂತ ಹಂತವಾಗಿ ನಡೆಯುತ್ತದೆ. ಇದಕ್ಕೆ ಸರ್ಕಾರದ ಮಾನ್ಯತೆ ಬೇಕು. 

ಇಲ್ಲಿ ಕ್ರೀಡಾಂಗಣ ಕಾಮಗಾರಿ  Estimate ಆಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮಣ್ಣು ಕುಸಿತ ಅಥವಾ ಗುಡ್ಡ ಕುಸಿತವಾದರೆ, ಅದಕ್ಕೆ ತಡೆಗೋಡೆ ನಿರ್ಮಾಣ ಮಾಡಬೇಕಾ, ಡ್ರೈನೇಜ್ ಮಾಡಬೇಕಾ. ಸಿಸಿ ಡ್ರೈನೇಜ್ ಮಾಡಿಸಬೇಕಾ, ನಾರ್ಮಲ್ ಸಿಸಿ ಡ್ರೈನೇಜಾ ಎಂಬುದನ್ನು ಸಹ ತಿಳಿಸಲಾಗುತ್ತದೆ. ಇದರಲ್ಲಿ ಲೈನ್ Estimate ಇಲ್ಲ.

ರೋಡ್, ಕೋರ್ಟ್ ಸೇರಿ ಹಲವು ಕಾಮಗಾರಿಗಳು PWD ಇಲಾಖೆಗೆ ಕೊಡಬೇಕೆಂದಿದೆ. ಯಾಕೆ ಅಂದ್ರೆ, ವರ್ಕ್ ಆಫ್ ಸ್ಟ್ಯಾಂಡರ್ಡ್, ಕ್ವಾಲಿಟಿ ಚೆಕ್ ಸೇರಿದಂತೆ ಎಲ್ಲವೂ ಆಡಳಿತಾತ್ಮಕವಾಗಿ ನಿಖರವಾಗಿ ಕಾರ್ಯನಿರ್ವಹಿಸುವ ಟ್ಯಾಗ್ ಹೊಂದಿರುವುದರಿಂದ ಅವರಿಗೆ ಟೆಂಡರ್ ಕೊಡಲಾಗುತ್ತದೆ. PWD ಇಲಾಖೆಯಿಂದ Estimate, soil test, Administrative Approval ಅನ್ನು ಮಾಡಿಕೊಂಡು ಅವರು ಬೇರೆ ಇಲಾಖೆಗೂ ಕಾಮಗಾರಿಯನ್ನ ಕೊಡಬಹುದು. 

ಕ್ರೀಡಾಂಗಣ 120 ಮೀಟರ್ ಅಗಲ ಇರಬೇಕು. 150 ಮೀಟರ್ ಉದ್ದ, ಮೊಟ್ಟೆಯಾಕಾರ ವಿದ್ದು,  100*2 ಮೀಟರ್ ಎರಡು ಟ್ರ್ಯಾಕ್, ಟ್ರ್ಯಾಕ್ ಕರ್ವಿಂಗ್ ಗೆ 100*2 ಮೀಟರ್ ಸೇರಿ ಒಟ್ಟು 400 ಮೀಟರ್ ಬೇಕೆ ಬೇಕು. 

ಗುಡ್ಡದ ಮೇಲೆ ಮೇಲ್ನೋಟಕ್ಕೆ ಕೇವಲ 15 ಮೀಟರ್ ಅಗಲ  ಜಾಗವಿದೆ ಎನ್ನಲಾಗುತ್ತಿದೆ. ಗುಡ್ಡದಲ್ಲಿ ಆಗಿದ್ದೆ ಆದ್ರೆ, ಬೇರೆ ಸ್ಥಳದಲ್ಲಿ ಮಾಡುವ ಕ್ರೀಡಾಂಗಣಕ್ಕೆ ತಗುಲುವ ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚಾಗತ್ತೆ. ಹೀಗಾಗಿ ಇದಕ್ಕೆ ತಾಂತ್ರಿಕ ಅನುಮೋದನೆ ಸಿಗುವುದಿಲ್ಲ ಎಂದು ತಜ್ಞರು ಅಭಿಪ್ರಾಯ ತಿಳಿಸಿದ್ದಾರೆ. ಗುಡ್ಡದ ಮೇಲೆ ಕಾಮಗಾರಿ ನಡೆದಿದ್ದು, ಮೂರ್ಖತನದ ಪರಮಾವಧಿಯಾಗಿದೆ ಎಂದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ. 

ಹೀಗಾಗಿ, ಗಜೇಂದ್ರಗಡ ಕೆರೆ ಪಕ್ಕದ ಜಾಗ ಕ್ರೀಡಾಂಗಣ ನಿರ್ಮಾಣಕ್ಕೆ ಸೂಕ್ತ ಎಂದು ಪರಿಗಣಿಸಲಾಗಿತ್ತು. ಅಲ್ಲಿ  ಕ್ರೀಡಾಂಗಣಕ್ಕೆ ಬೇಕಾಗುವ ನೀರು, ಪ್ರಕೃತಿ ಸೌಂದರ್ಯ, ಸ್ವಚ್ಛಂದ ಗಾಳಿ ಎಲ್ಲವೂ ಇತ್ತು. 

ಆದ್ರೆ, ಅದೆಲ್ಲವನ್ನ ಬಿಟ್ಟು 20 feet ಕೊರದ್ರೆ, ಗುಡ್ಡದಲ್ಲೇ ಕ್ರೀಡಾಂಗಣವಾಗತ್ತೆ ಎಂಬ ತಪ್ಪು ಸಂದೇಶ ನೀಡಿದ್ದಾದರೂ ಯಾರು ? ಸರ್ವೇ ಆಫೀಸರ್ ಅವ್ರು ಕೂಡ ಮ್ಯಾಪ್ ಕೊಟ್ಟು ಜಾರಿಕೊಂಡಿದ್ದೇಕೆ ? 

ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತರಿಗೆ  ಅನುಕೂಲವಾಗಲಿದೆ ಎಂಬ ಮನೋಸ್ಥಿತಿಯಿಂದನೋ ಏನೋ ಗೊತ್ತಿಲ್ಲ, ಅವರಿಗೆ ಕಾಮಗಾರಿ ಜವಾಬ್ದಾರಿ ವಹಿಸಿದ್ದಾರೆ ಎನ್ನಲಾಗಿದೆ. ಇನ್ನೂ, ಅವರ ಹೇಳಿಕೆಯಂತೆ ಇಲ್ಲೆ ಕ್ರೀಡಾಂಗಣ ಮಾಡೋಣ ಅಂತಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ. 

ಈ ಮಧ್ಯೆ, ಗುಡ್ಡದ ಮೇಲೆ 
ಹೋಗೋಕೆ ದಾರಿ ಮಾಡ್ತಿದಾರೆ ಅನ್ನೊದಾದ್ರೆ, ದಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆಯಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಗಜೇಂದ್ರಗಡದಲ್ಲಿ ಕುಳಿತು ಕ್ರೀಡಾಂಗಣದ ಮೊತ್ತ ಡಿಸೈಡ್ ಮಾಡೋದಲ್ಲ. ಆಡಿಟ್ ಜನರಲ್ ಆಫೀಸನಿಂದ ಹಣದ ಮೊತ್ತ ಎಷ್ಟು ಅಂತಾ ಬಹಿರಂಗವಾಗಬೇಕಿದೆ. 


ಜನರು ಟ್ಯಾಕ್ಸ್ ರೂಪದಲ್ಲಿ ನೀಡಿದ ಸರ್ಕಾರದ ಹಣವನ್ನ  ಮಂಜೂರು ಮಾಡಿದ್ದೆ ಆದಲ್ಲಿ, ಅದಕ್ಕೆ ದಾಖಲೆಗಳನ್ನ ನೀಡಬೇಕಾಗುತ್ತದೆ. ಸರ್ಕಾರಕ್ಕೆ ಆಡಂಬರ ಬೇಡ. ಹೆಚ್ಚಿನ ಹಣ ಪೋಲಾಗುವುದನ್ನ ತಡೆಯುವ ನಿಟ್ಡಿನಲ್ಲಿ ನಿಯಮಗಳನ್ನ ಅನುಸರಿಸಲಾಗುತ್ತದೆ. 

ಗುಡ್ಡ ಕೊರೆಯಲು ಯಾವ ಯಂತ್ರ ಬಳಸುತ್ತೀರಿ..? ಎಂಬಿತ್ಯಾದಿ ಸಲಹೆ ಸೂಚನೆಗಳ ಮೇರೆಗೆ ಆಡಳಿತಾತ್ಮಕ ಅನುಮೋದನೆ ದೊರೆಯಲಿದೆ. ಇದ್ಯಾವುದು ನಡೆಯದೇ. ಹೇಳುವವರಿಲ್ಲ, ಕೇಳುವವರಿಲ್ಲ. ತಮಗೆ ತೋಚಿದ್ದನ್ನ, ಲಘುಬಗೆಯಲ್ಲಿ ದಾರಿ ಮಾಡುತ್ತಿದ್ದೇವೆ ಎಂದರೇ ಒಪ್ಪುವುದಾದ್ರೂ ಹೇಗೆ...?

ದಾರಿ ಮಾಡುತ್ತೇವೆ ಎಂದಾದರೇ ಮಣ್ಣನ್ನು ಸೈಟ್ ನಲ್ಲೆ ಸಂಗ್ರಹಿಸಬೇಕಿತ್ತು. ಇದು ಕೋರ್ಟ್ ಕಾಮಗಾರಿಗೆ ಗುಡ್ಡ ಅಗೆದಾಗ ಬಂದ ಮಣ್ಣು ಸೈಟ್ ನಲ್ಲೆ ಸಂಗ್ರಹವಾಗಿದ್ದನ್ನು ನೋಡಬಹುದು‌‌. ಹಾಗಿದ್ದಾಗ ಗುಡ್ಡದಲ್ಲಿ ದಾರಿ ಮಾಡುತ್ತಿರುವ ಮಣ್ಣು ಯಾರ ಪಾಲಾಗುತ್ತಿದೆ..? 


ಯಾರೋ ಮಾಡಿದ ತಪ್ಪನ್ನ ಕೊನೆಗೆ ಸರ್ಕಾರಿ ಅಧಿಕಾರಿಗಳ ತಲೆಗೆ ಕಟ್ಟುವ ಪರಿಪಾಠ ನಿರಂತರವಾಗಿ ಎಲ್ಲ ಸರ್ಕಾರದಲ್ಲೂ ನಡೆಯುತ್ತಿರುವುದನ್ನ ನೋಡಬಹುದು...

( ದಾಖಲೆಗಳು : ಸಂಭಂದಿಸಿದ ಇಲಾಖೆಯ ವೆಬ್ಸೈಟ್ ಮತ್ತು ಅಧಿಕಾರಿಗಳು ) 

ವರದಿ : 
ಕೃಷ್ಣ ರಾಠೋಡ್,
ಸಂಪಾದಕರು
ಕಿರಾ ನ್ಯೂಸ್ ಕನ್ನಡ

ಮೊ : 8197474996
Post a Comment

Post a Comment