ಸಂವಿಧಾನ ಬದಲಿಸಿ ಸಂವಿಧಾನ ಹಿಡಿದು ಓಡಾಡುತ್ತಿರುವುದು ಕಾಂಗ್ರೆಸ್ : ಎಂ.ವೈ ಮುಧೋಳ್
ಗಜೇಂದ್ರಗಡ : (Mar_28_2025)
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕೆಂದು ಜೆಡಿಎಸ್ ಗದಗ ಜಿಲ್ಲಾಧ್ಯಕ್ಷ ಎಂ.ವೈ ಮುಧೋಳ್ ಹೇಳಿದರು. ಗಜೇಂದ್ರಗಡದ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಂವಿಧಾನ ಬದಲಿಸುತ್ತಿದೆ ಎಂದು ಪದೇ ಪದೇ ಡಿ.ಕೆ ಶಿವಕುಮಾರ್ ಹೇಳುತ್ತಾರೆ. ಅದೇ ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ತುರ್ತು ಪರಿಸ್ಥಿತಿ ಹೇರಿದ್ದು, ಇದೇ ಕಾಂಗ್ರೆಸ್ ಎಂದು ದೂರಿದರು.
ಪದೇ ಪದೇ ಬಿಜೆಪಿ ಸಂವಿಧಾನ ಬದಲಿಸುತ್ತಿದೆ ಎಂದು ಹೇಳಿಕೆ ನೀಡುತ್ತಾರೆ. ಯಾವ ಆಧಾರದಲ್ಲಿ ಇಂತಹ ಹೇಳಿಕೆ ನೀಡುತ್ತಾರೆ ಎಂದು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ರು. ಅಲ್ಲದೇ, ಈ ತಪ್ಪು ಹೇಳಿಕೆ ಹಿನ್ನೆಲೆಯಲ್ಲಿ ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕೆಂದು ಎಂ.ವೈ ಮುಧೋಳ್ ಆಗ್ರಹಿಸಿದರು.
ಮಾಡಿದ್ದುಣ್ಣೊ ಮಾರಾಯಾ ಎಂಬಂತೆ ಕಳೆದು 10 ವರ್ಷ ಪ್ರತಿಪಕ್ಷ ಸ್ಥಾನ ಪಡೆದು, ಮೂರನೇ ಬಾರಿಯೂ ವಿರೋಧ ಪಕ್ಷದಲ್ಲಿ ಕುಳಿತಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ ಎಲ್ಲೆಡೆ ಸಂವಿಧಾನ ಹಿಡಿದು ಹೋರಾಟ ನಡೆಸಿದರೂ, ಪ್ರಯೋಜನವಾಗಿಲ್ಲ. ಸಂವಿಧಾನ ಹಿಡಿದು ಹೊರಟರೆ ದೇಶ ಬದಲಾಗದು. ಕಾಂಗ್ರೆಸ್ ಮೊದಲು ದೇಶದ ಜನರಿಗೆ ಕೊಡುತ್ತಿರುವ ಕೊಡುಗೆ ಏನೆಂದು ಮೊದಲು ಹೇಳಲಿ ಎಂದು ಇದೇ ವೇಳೆ ಎಂ.ವೈ ಮುಧೋಳ್ ಪ್ರಶ್ನಿಸಿದರು.
Post a Comment