ಗಜೇಂದ್ರಗಡ : (Mar_25_2025)
ಪಟ್ಟಣದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ ಜೋರಾಗಿದೆ. ಪಟ್ಟಣದ ಎಪಿಎಂಸಿ ಆವರಣದಲ್ಲಿ ಎಗ್ಗಿಲ್ಲದೇ ಅಕ್ರಮ ಅಕ್ಕಿ ಸಾಗಾಟ ನಡೆಯುತ್ತಲೇ ಇದೆ. ಎಪಿಎಂಸಿ ಆವರಣದ ಬಾಲಪ್ಪ ಗೌಡ್ರ ಎಂಬುವವರಿಗೆ ಈ ಅಕ್ಕಿ ಸೇರಿದೆ ಎನ್ನಲಾಗಿದೆ. ಅಂದಾಜು 70 ರಿಂದ 80 ಪ್ಲಾಸ್ಟಿಕ್ ಚೀಲಗಳು ಸಿಕ್ಕಿವೆ ಎಂದು ಆಹಾರ ಇಲಾಖೆ ಅಧಿಕಾರಿ ಶಾಂತಾ ಚವಡಿ ಸ್ಥಳದಲ್ಲಿ ಪಡಿತರ ಅಕ್ಕಿಯನ್ನ ಪರಿಶೀಲನೆ ನಡೆಸಿದ ಬಳಿಕ ಮಾಹಿತಿ ನೀಡಿದ್ದಾರೆ. ಅಕ್ರಮ ಅಕ್ಕಿ ಸಾಗಾಟದ ಮಾಹಿತಿ ಬಂತು. ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದೇವೆ ಎಂದು ಶಾಂತಾ ಚವಡಿ ಹೇಳಿದ್ದಾರೆ.
ಪೊಲೀಸ್ ಠಾಣಾಧಿಕಾರಿ ಸೋಮನಗೌಡ ಗೌಡ್ರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.
ರಾಜ್ಯದಲ್ಲಿ ಪಡಿತರ ಅಕ್ಕಿಗೆ ಪರದಾಡುವ ಪರಿಸ್ಥಿತಿ ಎದುರಾದಾಗ ಅಕ್ಕಿ ಕಳ್ಳಸಾಗಾಟ ನಡೆಯುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಅಕ್ರಮ ಅಕ್ಕಿ ಸಾಗಾಟಗಾರರ ಕಿಂಗ್ ಪಿನ್ ಗಳು ಪಟ್ಟಣದವರೆ ಎನ್ನಲಾಗಿದೆ.
ಎಪಿಎಂಸಿ ಆವರಣದ ಮತ್ತೊಂದು ಅಂಗಡಿಯಲ್ಲೂ ಪಡಿತರ ಅಕ್ಕಿ ಸಂಗ್ರಹ ಮಾಡಿದ್ದಾರೆ ಎಂಬ ಮಾಹಿತಿಯೂ ಹರಿದಾಡುತ್ತಿದೆ.
Post a Comment