-->
Bookmark

Gajendragad : ಜಾತ್ಯಾತೀತತೆಗೆ ರಾಜ್ಯಕ್ಕೆ ಮಾದರಿ ಗಜೇಂದ್ರಗಡ : ಚೈತ್ರ, ಮೌನೇಶ್

Gajendragad : ಜಾತ್ಯಾತೀತತೆಗೆ ರಾಜ್ಯಕ್ಕೆ ಮಾದರಿ ಗಜೇಂದ್ರಗಡ : ಚೈತ್ರ, ಮೌನೇಶ್ 

ಗಜೇಂದ್ರಗಡ : (Mar_21_2025)
ರಂಜಾನ್ ಮುಸ್ಲೀಂ ಬಾಂದವರು ವಿಶೇಷವಾಗಿ ಆಚರಿಸುವ ಮತ್ತು ಪುಣ್ಯಗಳಿಸಲು ಹೆಚ್ಚು ಅನುವು ಇರುವ ಮಾಸ‌ ಇದಾಗಿದೆ. 2025 ರ ರಂಜಾನ್ ಮಾಸ್ ಮಾರ್ಚ್ 2 ರಿಂದ ಆರಂಭವಾಗಿದ್ದು, ಬಿರು ಬೇಸಿಗೆಯನ್ನು ಲೆಕ್ಕಿಸದೇ, ಮಕ್ಕಳಿಂದ ಹಡಿದು ಹಿರಿಯರು ಮಾಸಾಚರಣೆ ಮಾಡುತ್ತಾರೆ. "ಜಕಾತ್" ತಾವು ಗಳಿಸಿದ ಆದಾಯದ ಒಂದು ಭಾಗವನ್ನ ಬಡವರಿಗೆ ನೀಡುವ ಪ್ರತೀತಿ ಈ ಮಾಸದಲ್ಲೇ ಹೆಚ್ಚು. 
ಬೆಳಗ್ಗೆಯಿಂದ ಉಪವಾಸ ವಿದ್ದವರಿಗೆ ಸಂಜೆ ರೋಜಾ ಬಿಡುವ ವೇಳೆಗೆ ಅವರಿಗೆ ಶುಚಿತ್ವದ ಹಣ್ಣುಗಳನ್ನ ನೀಡುವುದು. ಮತ್ತು ಆಹಾರಗಳನ್ನ ನೀಡುವುದು ವಾಡಿಕೆ.‌ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಹಿಂದು ಸಮಾಜದ ಬಾಂಧವರು, ಈ ಮಾಸದಲ್ಲಿ ಮಸೀದಿಗಳಿಗೆ ತೆರಳಿ ಇಫ್ತಾರ್ ಕೂಟವನ್ನ ಸಹ ಆಚರಿಸುತ್ತಾರೆ. ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳು,‌ ಕೆಲ‌ ಎನ್.ಜಿ.ಒಗಳು ಇದಕ್ಕೆ ಸಾಥ್ ನೀಡುತ್ವೆ. ಈ ಮಧ್ಯೆ, ಕೆಲ ಹಿಂದು ಸಮಾಜದ ಬಾಂಧವರು ಸಹ ಮೌಲ್ವಿಗಳಿಗೆ ಮತ್ತು ರೋಜಾ ಇರುವ ಮುಸ್ಲಿಮರಿಗೆ ಮನೆಗೆ ಆಮಂತ್ರಿಸಿ, ಅವರಿಗೆ ಊಟೋಪಚಾರವನ್ನ ಮಾಡಿಸುತ್ತಾರೆ. ಇಂತಹ ಸದ್ಭಾವನೆ ರಾಜ್ಯದುದ್ದಗಲಕ್ಕೂ ಪಸರಿಸಬೇಕು. 
ಅಲ್ಲದೇ, ಇಲ್ಲಿ ಹಿಂದು ಮುಸ್ಲೀಂ ಎಂಬ ಬೇಧಭಾವ ಇಲ್ಲದೇ, ಒಗ್ಗಟ್ಟಾಗಿರುವುದು ಒಂದು ವಿಶೇಷ. ಜಾತ್ಯಾತೀತತೆಗೆ ರಾಜ್ಯಕ್ಕೆ ಮಾದರಿಯಾಗಿದೆ ನಮ್ಮ ಪಟ್ಟಣ. ಒಂದೆ ತಟ್ಟೆಯಲ್ಲಿ ಊಟ ಮಾಡುವ ಪರಿಪಾಠವೂ ಇಲ್ಲಿ ಕಂಡು ಬರುತ್ತದೆ. 
ಇತ್ತ, ರಂಜಾನ್ ತಿಂಗಳಾಗಿದ್ದರಿಂದ ಹಣ್ಣುಗಳು,‌ ಖರ್ಜುರ ಸೇರಿದಂತೆ ಇತರೆ ಹಣ್ಣುಗಳ ಖರೀದಿಯೂ ಜೋರಾಗಿದೆ. ವಿಶೇಷ ಸಂಧರ್ಬದಲ್ಲಿ ಬರುವಂತಹ ಹಣ್ಣುಗಳು ರಂಜಾನ್ ತಿಂಗಳಲ್ಲೆ ಬರುವುದರಿಂದ ಆ ಹಣ್ಣುಗಳನ್ನ ನಾವು ಸಹ ಸವಿಯುತ್ತೇವೆ.‌ ವಿಶೇಷ ಪಾಯಸಗಳನ್ನ ಮಾಡುತ್ತೇವೆ ಎಂದು ಹೇಳುವ ಮಾತುಗಳು ಆಗಾಗ ಹಿಂದುಗಳಿಂದಲೂ ಕೇಳಿ ಬರುತ್ತದೆ. ಮುಸ್ಲೀಂ ಬಾಂಧವರ ಮನೆಯಿಂದ ಪಾಯಸ ತಂದು ಕೊಡಿ, ಮನೆಯಲ್ಲಿ ಕೇಳುತ್ತಿದ್ದಾರೆ ಎಂದು ಕೇಳಿ ಪಡೆಯುವವರನ್ನು ನಾವು ನೋಡುತ್ತೆವೆ. 
ಜಾತಿ ಹೆಸರಲ್ಲಿ ದೇಶ ಒಡೆಯುವ ಹುನ್ನಾರ ಒಂದೆಡೆಯಾದ್ರೆ, ಮತ್ತೊಂದೆಡೆ, ತಾಜ್ಯಾತೀತವಾಗಿ ಒಗ್ಗಟ್ಟಿನಿಂದ ಭಾತೃತ್ವದಿಂದ ನಡೆಯುವುದನ್ನ ರಾಜ್ಯ ದೇಶಕ್ಕೆ ಮಾದರಿಯಾಗಿದೆ ನಮ್ಮ ಹೆಮ್ಮೆಯ ಗಜೇಂದ್ರಗಡ ಪಟ್ಟಣ. ಇಂತಹ ಪಟ್ಟಣದಲ್ಲಿ ಜನ್ಮ ತಾಳಿದ ನಾವುಗಳೆ ಧನ್ಯರು. ಈ ಮಣ್ಣಿನ ಋಣ ತೀರಿಸಲಾಗದು...!! ಈ ಮಣ್ಣಲ್ಲೆ‌ ಮಣ್ಣಾಗಿ, ಮುಂದಿನ ಜನ್ಮದಲ್ಲಿ ಈ ಮಣ್ಣಲ್ಲೆ ಹುಟ್ಟುವ ಮಹದಾಸೆ ಇದೆ...!!  

ಲೇಖನ : 
ಚೈತ್ರ & ಮೌನೇಶ್ ವಿಶ್ವಬ್ರಾಹ್ಮಣ, ಗಜೇಂದ್ರಗಡ.
Post a Comment

Post a Comment