-->
Bookmark

Gajendragad : ಗಜೇಂದ್ರಗಡ ಗುಡ್ಡ ಕುಸಿತದ ಆತಂಕದಲ್ಲಿ ಸಾರ್ವಜನಿಕರು...!!ಅಭಿವೃದ್ಧಿ ನೆಪದಲ್ಲಿ ಪ್ರಕೃತಿ ನಾಶ..?

Gajendragad : ಗಜೇಂದ್ರಗಡ ಗುಡ್ಡಕ್ಕೆ ಜೆಸಿಬಿ ಪೆಟ್ಟು 
ಮಳೆಗಾಲದಲ್ಲಿ ಗುಡ್ಡ ಕುಸಿತದ ಆತಂಕದಲ್ಲಿ ಸಾರ್ವಜನಿಕರು 
ಅಭಿವೃದ್ಧಿ ನೆಪದಲ್ಲಿ ಪ್ರಕೃತಿ ನಾಶ..?  
ಮಳೆ ಬಂದರೆ ಹಮಾಲರ ಪ್ಲಾಟ್ ಗೆ ಸಂಚಕಾರ‌

ಗಜೇಂದ್ರಗಡ : (Mar_19_2025)
ಬೆಟ್ಟ, ಗುಡ್ಡಗಳು ಪ್ರಕೃತಿ ಸಮತೋಲನಕ್ಕಾಗಿ ರಚನೆಯಾಗಿವೆ. ಮಳೆಗಾಲ ಬಂದಾಗ ದೇಶಾದ್ಯಂತ ಗುಡ್ಡ ಕುಸಿತ ಕಂಡು ಬರುತ್ವೆ. ನಮ್ಮ ರಾಜ್ಯದಲ್ಲೂ ಆಗಾಗ ಪ್ರಕೃತಿ ವಿಕೋಪಗಳು ಕಂಡು ಬರುತ್ವೆ. ಇದೆಕ್ಕೆ ಮೂಲ ಕಾರಣ ನಾವು ಪ್ರಕೃತಿ ಯೊಂದಿಗೆ ಚಲ್ಲಾಟವಾಡುವುದು, ಪ್ರಕೃತಿ ನಾಶ ಮಾಡುವುದು. 

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಗುಡ್ಡಗಳು ಸಾವಿರಾರು ವರ್ಷಗಳಿಂದ ಮಳೆ, ಗಾಳಿಯಿಂದ ರಕ್ಷಿಸುತ್ತಾ ಬಂದಿದೆ. ಈ ಗುಡ್ಡದಲ್ಲಿ ಮಳೆಗಾಲದಲ್ಲಿ ಗಿಡಮರಗಳನ್ನ ಬೆಳೆಸಲು ಕೆಲ ಸಂಘಟನೆಗಳು, ಸಂಘ ಸಂಸ್ಥೆಗಳು ಈ ಹಿಂದಿನಿಂದಲೂ ಕೆಲಸ ಮಾಡಿವೆ. ಆದ್ರೀಗ, ಮೊದಲು ಕೋರ್ಟ್ ನಿರ್ಮಾಣ ಮಾಡುತ್ತೇವೆ ಎಂದು ಗುಡ್ಡ ಅಗೆಯಲು ಪ್ರಾರಂಭಿಸಿದರು. ಅದಾದ ಬಳಿಕ ಕ್ರೀಡಾಂಗಣ ನೆಪದಲ್ಲಿ ಗುಡ್ಡವನ್ನ ಜೆಸಿಬಿಯಿಂದ ಅಗೆಯಲು ಆರಂಭಿಸಿ ಅದೆಷ್ಟೋ ದಿನಗಳಾಗಿವೆ. ಹಗಲು ರಾತ್ರಿ ಎನ್ನದೆ, ಮಣ್ಣು ಅಗೆಯುವ ಕಾರ್ಯ ನಡೆದಿದೆ. 

ಮಳೆಗಾಲ‌ ಹತ್ತಿರವಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಗುಡ್ಡ ಅಗೆದ ನಂತರ ಒಮ್ಮೆ ಜೋರಾದ ಮಳೆ ಬಂದರೇ,  ಮಳೆಯಲ್ಲಿ ಮೊದಲು ಕೊಚ್ಚಿ ಹೋಗುವುದು ಹಮಾಲರ  ಪ್ಲಾಟ್ ಎಂದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ. ಒಮ್ಮೆ ಗುಡ್ಡ ಕುಸಿತ ಪ್ರಾರಂಭವಾಯ್ತು ಎಂದಾದಲ್ಲಿ ನಿಧಾನವಾಗಿ ಕಾಲಾ ನಂತರ ಸಂಪೂರ್ಣ ಗುಡ್ಡ ಕುಸಿಯುವ ಸಂಭವ ಹೆಚ್ಚು‌. ಪಟ್ಟಣ ಮತ್ತು ಪಟ್ಟಣದ ಸುತ್ತಮುತ್ತ ರೀಯಲ್ ಎಸ್ಟೇಟ್ ಧಂದೆ ಜೋರಾಗಿದೆ. ಹೀಗಾಗಿ, ಗುಡ್ಡ ಬಿಟ್ಟರೆ ಮಳೆಯನ್ನ ತಡೆಯುವ ಗಿಡಮರಗಳು ಇಲ್ಲ. ಗುಡ್ಡವೂ ಮಾಯವಾದರೇ, ಮಳೆಯನ್ನ ನಂಬಿದ ರೈತರಿಗೆ ಅನ್ಯಾಯವಾಗಲಿದೆ. ಮೊಡವನ್ನ ತಡೆದು ಮಳೆ ಬರುವಂತೆ ಮಾಡುವ ಶಕ್ತಿ ಗುಡ್ಡಕ್ಕಿದೆ. ಮಳೆಯಾಗಲು ನಾವು ಗುಡ್ಡವನ್ನೆ ಅವಲಂಬಿಸಿದ್ದೇವೆ.

ಗಿಡಮರಗಳನ್ನ ಬೆಳೆಸಲಿಲ್ಲ. ಕನಿಷ್ಟಪಕ್ಷ ವರ್ಷದಲ್ಲಿ ಕೆಲವೆ ಕೆಲವು ಮಿಲಿಮೀಟರ್ ಮಳೆಯಾಗುವುದನ್ನ ಸಹ ತಡೆಯುತ್ತಿದ್ದೇವೆ. ಹೆಚ್ಚು ಮಳೆಯಾಗಲು ಬಹುದು, ಕಡಿಮೆ ಮಳೆಯಾಗುವ ಸಾಧ್ಯತೆಯೂ ಇದೆ. ಮುಂರುವ ದಿನಗಳಲ್ಲಿ ಗಜೇಂದ್ರಗಡ ಪಟ್ಟಣ ಸಂಪೂರ್ಣ ನಾಶವಾಗುವುದಕ್ಕೆ ಬೇಕಾಗುವ ಕೆಲಸ ಕಾರ್ಯಗಳನ್ನ ಮಾಡುತ್ತಿದ್ದೇವೆ.‌ 

ಬೆಟ್ಟದಲ್ಲಿ ಒಂದೆಡೆ ಕಲ್ಲು ಗಣಿಗಾರಿಕೆಯೂ ಜೋರಾಗಿದೆ. ಮತ್ತೊಂದೆಡೆ ಈಗ ಕ್ರೀಡಾಂಗಣ ನೆಪದಲ್ಲಿ ಮಣ್ಣು ಅಗೆಯುವ ಕಾರ್ಯ ನಡೆಯುತ್ತಿದೆ. ಮಳೆಗಾಲದಲ್ಲಿ ಗುಡ್ಡ ಕುಸಿತ ಸಂಭವಿಸಿದರೇ, ಗುಡ್ಡಕ್ಕೆ ಹೊಂದಿಕೊಂಡಿರುವ ಮನೆಗಳು ಮೊದಲು ನೆಲಸಮ ವಾಗಲಿವೆ. ಇದಾದ ಬಳಿಕ ಬೃಹದಾಕಾರದ ಬಂಡೆಗಲ್ಲುಗಳು ಉರುಳುವ ಸಾಧ್ಯತೆಯೂ ಇದೆ. 2021 ಜುಲೈ 15 ರಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗುಡ್ಡ ಕುಸಿದು,   ಅಕ್ಕಪಕ್ಕದ ಗ್ರಾಮಗಳಿಗೆ ಆತಂಕ ಎದುರಾಗಿತ್ತು. ಎರಡು ದಿನಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿತ್ತು. ಅಕ್ಕ ಪಕ್ಕ ಜನನಿಬೀಡ ಪ್ರದೇಶ ಇಲ್ಲದ್ದರಿಂದ ಹೆಚ್ಚಿನ ಅನಾಹುತ ಆಗಿಲ್ಲ ಎಂದು ಸ್ಥಳೀಯರು ಹೇಳಿದ್ದನ್ನು ಸ್ಮರಿಸಬಹುದು. ಮಂಡ್ಯ, ಮಡಿಕೇರಿ, ಚಿಕ್ಕಮಗಳೂರು, ಕರಾವಳಿಯ ಕೆಲವು ಭಾಗಗಳಲ್ಲಿ ಕಂಡುಬರುವ ಗುಡ್ಡ ಕುಸಿತಗಳು ನಮ್ಮಲ್ಲೂ ಸಂಭವಿಸಿದರೇ, ಆಶ್ಚರ್ಯ ಪಡಬೇಕಿಲ್ಲ. 

ಬೇಕಾ ಬಿಟ್ಟಿ ಗುಡ್ಡ ಅಗೆದು, ಮಣ್ಣನ್ನ ದರೋಡೆ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಇದೆ. ಗುಡ್ಡ ಅಗೆಯುವಾಗ ಹಮಾಲರ ಪ್ಲಾಟ್ ಜನರಿಗೆ ತೊಂದರೆಯಾಗಿರುವುದನ್ನು ಮತ್ತು ರಸ್ತೆ ಸಂಚಾರಕ್ಕೆ ಅಡೆ, ತಡೆ ಉಂಟಾಗಿರುವುದನ್ನು ನೋಡವಹುದು. ಈ ಮಧ್ಯೆ, ಅಲ್ಲಿ ಸಂಚರಿಸುವ ಜನರಿಗೆ ಧೂಳು ಸ್ವಾಗತಿಸುತ್ತದೆ. ಅಲ್ಲಿ ವಾಸವಾಗಿರುವ ಸಾರ್ವಜನಿಕರಿಗೆ, ಮಕ್ಕಳಿಗೆ, ಮಹಿಳೆಯರಾದಿಯಾಗಿ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ ಎಂಬ ಆರೋಪವೂ ಇದೆ. ಹೀಗಿರುವಾಗ ಗಜೇಂದ್ರಗಡ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಅನಾಹುತಕ್ಕೆ ನಾಂದಿ ಹಾಡಲಿದೆ ಎಂದೆ ಹೇಳಬಹುದು. 

ಪ್ರಕೃತಿ ವಿಕೋಪದಿಂದ ಆಹಾರ ಅರಸಿ ಚಿರತೆಗಳು ರೈತರ ಜಮಿನುಗಳಿಗೆ ಆಗಮಿಸುತ್ತಿವೆ. ಸಾಕು ಪ್ರಾಣಿಗಳನ್ನ ಹೊತ್ತೊಯ್ದು, ರೈತರ ಮೇಲೂ ದಾಳಿ ನಡೆದಿವೆ.‌ ಮೊದಲು ಗುಡ್ಡದಲ್ಲಿ ನೆಲೆಸಿದ್ದ ಕೋತಿಗಳು ( ಮಂಗಗಳು ) ಈಗ ರೈತರ ಜಮೀನುಗಳಿಗೆ ನುಗ್ಗಿ ಬೆಳೆದ ಬೆಳೆಯನ್ನ ನಾಶ ಮಾಡುತ್ತಿವೆ. ಬೆಳೆದ ಬೆಳೆಗಿಂತ ಮಂಗಗಳನ್ನ ಓಡಿಸುವುದು ಮತ್ತು ಚಿರತೆ ಬಂದು ದಾಳಿ ಮಾಡುತ್ತದೆ ಎಂಬ ಆತಂಕದಲ್ಲೇ ರೈತರು ಕಾಲ ಕಳೆಯುವಂತಾಗಿದೆ. ಇದಕ್ಕೆ ಪರ್ಯಾಯ ಮಾರ್ಗಗಳಿಲ್ಲ ಎಂಬಂತೆ ಎಲ್ಲರೂ ಕಣ್ಮುಚ್ಚಿ ಕುಳಿತು, ಗೊತ್ತಿದ್ದರೂ, ಮೂಕ ಪ್ರೇಕ್ಷಕರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಇದರ ವಿರುದ್ಧ ಪಟ್ಟಣದಲ್ಲಿ ಕ್ರಾಂತಿಯಾದರೂ ಆಶ್ಚರ್ಯ ವಿಲ್ಲ. 

ಮಳೆಗಾಲದ ನಂತರದ ದಿನಗಳಲ್ಲಿ ಗಜೇಂದ್ರಗಡ ಗುಡ್ಡ ಅಗೆತದ ಪರಿಣಾಮ ಕಂಡು ಬರಲಿದೆ. 

ವರದಿ : 
ಕೃಷ್ಣ ರಾಠೋಡ್ 
ಸಂಪಾದಕರು, ಕಿರಾ ನ್ಯೂಸ್ ಕನ್ನಡ. 
ಗಜೇಂದ್ರಗಡ. 
ಮೊ : 8197474996
Post a Comment

Post a Comment