-->
Bookmark

Gajendragad : ಶ್ರೀ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ : ವೀರಶೈವ ಧರ್ಮ ಸಂಸ್ಥಾಪಕರಾಗಿ ಧರ್ಮ ಸಂರಕ್ಷಣೆ : ಸಿದ್ದಪ್ಪ ಬಂಡಿ

Gajendragad : ಶ್ರೀ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ : ವೀರಶೈವ ಧರ್ಮ ಸಂಸ್ಥಾಪಕರಾಗಿ ಧರ್ಮ ಸಂರಕ್ಷಣೆ : ಸಿದ್ದಪ್ಪ ಬಂಡಿ 

ಗಜೇಂದ್ರಗಡ : (Mar_12_2025)

ಕೃತಯುಗದಲ್ಲಿ ಶ್ರೀಜಗದ್ಗುರು ಏಕಾಕ್ಷರ ಶಿವಾಚಾರ್ಯರಾಗಿ, ತ್ರೇತಾಯುಗದಲ್ಲಿ ಶ್ರೀಜಗದ್ಗುರು ಏಕವಕ್ರ ಶಿವಾಚಾರ್ಯರಾಗಿ, ದ್ವಾಪರಯುಗದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯರಾಗಿ, ಕಲಿಯುಗದಲ್ಲಿ ಶ್ರೀಜಗದ್ಗುರು ರೇವಣಸಿದ್ಧರಾಗಿ ಅವತರಿಸಿ ವೀರಶೈವ ಧರ್ಮ ಸಂಸ್ಥಾಪಕರಾಗಿ ಯುಗಪ್ರವರ್ತಕರಾಗಿ ಧರ್ಮ ಸಂರಕ್ಷಣೆಗಾಗಿ ಜಗದಲ್ಲಿ ಶಿವಜ್ಞಾನದ ಬೆಳಕನ್ನು ಬೀರಿದರು. ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಶ್ರೀಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಿದ್ದಪ್ಪ ಬಂಡಿ ಹೇಳಿದರು. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಆಚರಣೆಯಲ್ಲಿ‌ ಭಾಗವಹಿಸಿ ಮಾತನಾಡಿದ ಅವರು, ಜಗದ್ಗುರು ರೇಣುಕರು ತಮ್ಮ ಜೀವನವನ್ನ ಬರಿ ಧಾರ್ಮಿಕ ಕ್ರಾಂತಿಗೆ ಮೀಸಲಿಡದೇ, ಸಾಮಾಜಿಕ ಕ್ರಾಂತಿಗೂ ಪರಿವರ್ತನೆ ತಂದರು. ಪೌರಾಣಿಕ  ವರ್ಚಸ್ಸಿನಲ್ಲಿ ಬಂಧತನಾಗಿದ್ದ ಅಗಸ್ತ್ಯ ಮಹರ್ಷಿಗಳಿಗೆ ಜ್ಞಾನ ದೀಕ್ಷೆ ನೀಡಿ, ಆಧ್ಯಾತ್ಮಿಕ ವರ್ಚಸ್ಸು ಕರುಣಿಸಿ, ಅಂದೆ ದಲಿತೋದ್ಧಾರ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ ಎಂದು ಅವರು ಹೇಳಿದರು. 
ತಹಶೀಲ್ದಾರರಾದ ಕಿರಣಕುಮಾರ್ ಕುಲಕರ್ಣಿ, ವೀರಶೈವ ಸಮಾಜದ ಅಧ್ಯಕ್ಷರಾದ ಸಿದ್ದಪ್ಪ ಬಂಡಿ, ಜಂಗಮ ಕ್ಷೇಮಾಬಿರುದ್ಧಿ ಸಂಘದ ಅಧ್ಯಕ್ಷ ಶಿವಕುಮಾರ್ ಕೊರಧಾನ್ಯಮಠ, ವಿವಿಧ ಸಂಘಗಗಳ ಅಧ್ಯಕ್ಷ ಚಂಬಣ್ಣ ಚಾವಡಿ, ವಿವಿಧ ಸಮಾಜದ ಮುಖಂಡರಾದ ಗುರುಸಿದ್ದಯ್ಯ ಸೂಗಿರಯ್ಯನಮಠ, ಸಿದ್ದು ಗೊಂಗಡಶೆಟ್ಟಿಮಠ, ಪ್ರಭು ಚವಡಿ, ನಾಗಯ್ಯ ಗೊಂಗಡಶೆಟ್ಟಿಮಠ, ಕಾಲಕಾಲೇಶ್ವರ ಅರ್ಚಕರಾದ ಮಲ್ಲಯ್ಯ ಗುರುಸ್ಥಲಮಠ, ಅಮರೇಶ್ ಗೌರಿಮಠ, ಬಸವರಾಜ್ ಬೆಲೇರಿ, ವಿರೇಶ್ ಚಿನ್ನಯ್ಯನಮಠ, ಮುತ್ತಯ್ಯ ಬಳಿಕಯಿಮಠ, ಶಿವಯ್ಯ ಚಕ್ಕಡಿಮಠ, ಉಮೇಶ್ ಜಡಿಮಠ, ಚನ್ನಯ್ಯ ಮಠಪತಿ, ಮಹಾಂತೇಶ ಹಿಡಕಿಮಠ, ಪ್ರಬಯ್ಯಾ ಗ್ಯಾನಯ್ಯನಮಠ, S B ಹಿಡಕಿಮಠ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
Post a Comment

Post a Comment