ಶಾಸಕರ ಹೇಳಿಕೆ ಮೂಲಕ ನಡೆಯುತ್ತಿದೆ ಹಗಲು ದರೋಡೆ ಕ್ರೀಡಾಂಗಣದ ಮರಳು ಮಾಫಿಯಾ : ಚಂದ್ರು ರಾಠೋಡ್
ಗಜೇಂದ್ರಗಡ : (Mar_30_2025)
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ತೆರಳುವ ರಸ್ತೆ ಬದಿ ಇರುವ ಗಜೇಂದ್ರಗಡ ಗುಡ್ಡದಲ್ಲಿ ಕ್ರೀಡಾಪಟುಗಳಿಗೆ ಕ್ರೀಡಾಂಗಣ ಪ್ರಾರಂಭಿಸಬೇಕು ಎನ್ನುವ ಎಷ್ಟೋ ಜನರ ಕನಸಾಗಿತ್ತು. ಅದನ್ನು ಸರ್ಕಾರ ಗುರುತಿಸಿ 9.95ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದನ್ನು ವಿದ್ಯಾರ್ಥಿ ಸಂಘಟನೆ ಸ್ವಾಗತಿಸುತ್ತದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಗದಗ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ್ ಹೇಳಿದ್ದಾರೆ. ಸರ್ಕಾರ ಈಗಾಗಲೇ ಕ್ರೀಡಾಂಗಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರರಿಗೆ ಟೇಂಡರ್ ಪಾಸ್ ಆಗಿರುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಒಂದು ವೇಳೆ, ಈ ಆರೋಪಗಳು ನಿಜವಾಗಿದ್ದರೆ, ಮಾನ್ಯ ಶಾಸಕರಾದ ಜಿ ಎಸ್ ಪಾಟೀಲ್ ಅವರು ನೆರವಾಗಿ ಕಾನೂನು ಬಾಹಿರವಾಗಿ ಕಾಮಗಾರಿ ಪ್ರಾರಂಭಿಸಲು ತಿಳಿಸಿರುವುದು, ಅವರು ನೀಡಿರುವ ಪತ್ರಿಕಾ ಹೇಳಿಕೆಗಳೆ ಸಾಕ್ಷಿ. ಹೀಗಾಗಿ ಶಾಸಕರು ಹಾಗೂ ಅಧಿಕಾರಿಗಳು ನೇರವಾಗಿ ಕಾರಣಕರ್ತರು ಆಗಿರುತ್ತಾರೆ. ಆದಕಾರಣ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಈ ಕೂಡಲೇ ಕಾನೂನಾತ್ಮಕವಾಗಿ ಕ್ರೀಡಾಂಗಣಕ್ಕೆ ಕೆಲಸ ಮಾಡಲು ಮುಂದಾಗಬೇಕೆಂದು ಚಂದ್ರು ರಾಠೋಡ್ ಆಗ್ರಹಿಸಿದರು.
ಇನ್ನೂ, ಶಾಕರ ಅಣತಿಯಂತೆ ಅಕ್ರಮವಾಗಿ ಕ್ರೀಡಾಂಗಣದ ಮಣ್ಣು ಮಾಫಿಯಾ ಪಾಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಹೀಗೆ ಮುಂದುವರೆದರೇ, ಪಟ್ಟಣ ಪ್ರಕೃತಿ ವಿಕೋಪಕ್ಕೆ ತುತ್ತಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
Post a Comment