ಸಂಘಟನೆಗಳ ಖಂಡನೆ...!
ಗಜೇಂದ್ರಗಡ : (Mar_21_2025)
ಗಜೇಂದ್ರಗಡ ಗುಡ್ಡ ಕುಸಿತದ ಆತಂಕದಲ್ಲಿ ಸಾರ್ವಜನಿಕರು
ಅಭಿವೃದ್ಧಿ ನೆಪದಲ್ಲಿ ಪ್ರಕೃತಿ ನಾಶ...? ಎಂಬ ಶೀರ್ಷಿಕೆ ಯಡಿ ಕಿರಾ ನ್ಯೂಸ್ ಕನ್ನಡ ಮೊದಲು ಸುದ್ದಿ ಬಿತ್ತರಿಸಿತ್ತು. ಈ ಪ್ರಕರಣದ ಬಗ್ಗೆ ಓದುಗರಿಗೆ ಸಮಗ್ರ ಮಾಹಿತಿ ನೀಡುತ್ತಿದೆ ಕಿರಾ ನ್ಯೂಸ್ ಕನ್ನಡ.
ಗಜೇಂದ್ರಗಡ ಗುಡ್ಡದಲ್ಲಿ ಮಣ್ಣು ಅಗೆಯುತ್ತಿರುವ ಬಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕರಾದ ಶರಣು ಗೋಗೇರಿ ಅವರಿಗೆ ಕರೆ ಮಾಡಿದಾಗ ಅವರು ಹೇಳಿದ್ದು ಹೀಗೆ...!
ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಚಿದಂಬರಂ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಿಲ್ಲ.
ಕ್ರಾಂತಿಸೂರ್ಯ ಜೈ ಭೀಮ್ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ರಾಠೋಡ್ ಮಾತನಾಡಿ, ಹಿಂದಿನಿಂದಲೂ ಗಜೇಂದ್ರಗಡ ಗುಡ್ಡದಲ್ಲಿ ಯಾವುದೇ ಕಾಮಗಾರಿ ನಡೆಯದಂತೆ ನೋಡಿಕೊಂಡಿದ್ದೇವೆ. ಆದ್ರೆ, ಈಗ ಕ್ರೀಡಾಂಗಣ ನೆಪದಲ್ಲಿ ಗಜೇಂದ್ರಗಡ ಪಟ್ಟಣವನ್ನ ಹಾಳು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇತ್ತ, ಕರ್ನಾಟಕ ಜನಪರ ಸೇವಾ ಸಮಿತಿ ರಾಜ್ಯಾಧ್ಯಕ್ಷ ಗಣೇಶ್ ಗುಗಲೋತ್ತರ್ ಸಹ ಗಜೇಂದ್ರಗಡ ಪಟ್ಟಣಕ್ಕೆ ಸಂಚಕಾರ ಹೂಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅನಧಿಕೃತವಾಗಿ ಮಣ್ಣು ಅಗೆಯುವುದು ಕಂಡು ಬಂದಿದೆ. ಈ ಬಗ್ಗೆ ಮುಂಬರುವ ದಿನಗಳಲ್ಲಿ ಸಂಬಂಧ ಪಟ್ಟ ಇಲಾಖೆಯಿಂದ ಸಂಪೂರ್ಣ ವರದಿ ತರಿಸುವ ಕಾರ್ಯ ಮಾಡುತ್ತೇವೆ. ಪಟ್ಟಣಕ್ಕೆ ಸಂಚಕಾರ ಮಾಡುತ್ತಿರುವುದು ಅಕ್ಷರಶಃ ತಪ್ಪು ಎಂದು ಗಣೇಶ್ ಗುಗಲೋತ್ತರ್ ಹೇಳಿದ್ದಾರೆ.
ಗಜೇಂದ್ರಗಡ ಅಭಿವೃದ್ಧಿಯಾಗಬೇಕಿದೆ. ಅಭಿವೃದ್ಧಿ ಮಾಡಲಿ ತಪ್ಪಿಲ್ಲ. ಆದ್ರೆ, ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನೆ ನೆಪ ಮಾಡಿಕೊಂಡು ಹಗಲು ದರೋಡೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕೃಷ್ಣ ರಾಠೋಡ್,
ಸಂಪಾದಕರು,
ಕಿರಾ ನ್ಯೂಸ್ ಕನ್ನಡ ಗಜೇಂದ್ರಗಡ
ಮೊ : 8197474996
Post a Comment