ಗದಗ : (Mar_10_2025)
ಕರ್ನಾಟಕ ವಿಶ್ವ ವಿದ್ಯಾಲಯ ಸೇರಿದಂತೆ ರಾಜ್ಯಾದ್ಯಂತ ಹಲವು ವಿವಿಗಳಿಗೆ ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯನ್ನ ಬಂಜಾರ ಸಮುದಾಯದ ಪ್ರೊ. ಸೀತಾರಾಮ್ ಕೆಪವಾರ್ ಅವರಿಗೆ ಕೊಡಬೇಕಂದು ಕರ್ನಾಟಕ ಜನಪರ ಸೇವಾ ಸಮಿತಿ ರಾಜ್ಯಾಧ್ಯಕ್ಷ ಗಣೇಶ್ ಗುಗಲೋತ್ತರ್ ಸರ್ಕಾರವನ್ನ ಆಗ್ರಹಿಸಿದ್ದಾರೆ. ಕಳೆದ 34 ವರ್ಷದಿಂದ ಸೀತಾರಾಮ್ ಪವಾರ್ ಕವಿವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಹಾಗೂ ಹಿಂದಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತ ಸರ್ಕಾರದ ಯು.ಪಿ.ಎಸ್.ಸಿ.ಯ ಬಿ.ಓ.ಎ ಸದಸ್ಯರಾಗಿ, ಭಾರತದ ಉನ್ನತ ಶಿಕ್ಷಣ ಇಲಾಖೆಯ ತನಿಖಾಧಿಕಾರಿಯಾಗಿ, ಮತ್ತು ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸದಸ್ಯರಾಗಿ, ಕವಿವಿಯ ದೂರ ಶಿಕ್ಷಣ ವಿಭಾಗದ ನಿರ್ದೇಶಕರಾಗಿ, ಮುದ್ರಣಾಲಯದ ನಿರ್ದೇಶಕರಾದಾಗ ಕೋಟ್ಯಾಂತರ ರೂಪಾಯಿ ಉಳಿಯುವಂತೆ ಮಾಡಿದ್ದಾರೆ. ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ಆಂದ್ರ ಪ್ರದೇಶ ಹಾಗೂ ಪಂಜಾಬ್ ವಿಶ್ವವಿದ್ಯಾಲಯಗಳ. ಬಿ.ಓ.ಎ, ಬಿ.ಓ.ಎಸ್ ಹಾಗೂ ಬಿ.ಓ.ಇ ಸದಸ್ಯರಾಗಿಯೂ ಕಾರ್ಯನಿರವಹಿಸುತ್ತಿದ್ದಾರೆ.
ಪ್ರಸ್ತುತ ಕವಿವಿಯ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿಸುತ್ತಿದ್ದಾರೆ. ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ಹೀಗೆ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಬಂಜಾರ ಸಮುದಾಯದ ಪ್ರೊ. ಸೀತಾರಾಮ್ ಪವಾರ್ ಅವರಿಗೆ ಕುಲಪತಿ ಹುದ್ದೆ ನೀಡಬೇಕೆಂದು ಗಣೇಶ್ ಗುಗಲೋತ್ತರ್ ಹೇಳಿದ್ದಾರೆ.
ಬಂಜಾರ ಸಮುದಾಯದಿಂದ ಬಂದವರು ಸರ್ಕಾರಿ ಹುದ್ದೆಯಲ್ಲಿ ಬೆರಳೆಣಿಕೆಯಷ್ಟು ಜನರಿದ್ದಾರೆ. ಸಚಿವ ಸಂಪುಟದಲ್ಲೂ ಅಷ್ಟಕ್ಕಷ್ಟೆ. ಹೀಗಾಗಿ, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಹೆಚ್.ಕೆ ಪಾಟೀಲ್, ಸಂತೋಷ್ ಲಾಡ್, ಎಂ.ಬಿ. ಪಾಟೀಲ್ ಸೇರಿದಂತೆ ಎಲ್ಲರಿಗೂ ಮನವಿ ಮಾಡುವುದೆನೆಂದರೆ, ದಕ್ಷ ಹಾಗೂ ಪ್ರಾಮಾಣಿಕ ವಾಗಿರುವ ಬಂಜಾರ ಸಮುದಾಯದ ಸೀತಾರಾಮ್ ಕೆ ಪವಾರ್ ಅವರಿಗೆ ಕವಿವಿ ಕುಲಪತಿ ಹುದ್ದೆ ನೀಡಬೇಕಂದು ರಾಜ್ಯದ ಬಂಜಾರ ಸಮುದಾಯದ ಒತ್ತಾಯವಾಗಿದೆ ಎಂದು ಗಣೇಶ್ ಗುಗಲೋತ್ತರ್ ಕರ್ನಾಟಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸೀತಾರಾಮ್ ಕೆ ಪವಾರ್ ಅವರಿಗೆ ಹುದ್ದೆ ನೀಡದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಲಿದೆ ಎಂದು ಗಣೇಶ್ ಗುಗಲೋತ್ತರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Post a Comment