ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ : ಪ್ರೊ ಜಯಶ್ರೀ, ಪ್ರೊ. ಎಸ್.ಕೆ ಪವಾರ್ ಪ್ರೊ. ಎಸ್. ಕೆ ಪವಾರ್
ಧಾರವಾಡ : (Mar_21_2025)
ಉತ್ತರ ಪ್ರದೇಶ ನೋಯ್ಡಾದ ಅಮೇಥಿಯಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ರಾಷ್ಟ್ರೀಯ ಉತ್ಸವದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 6 ಪ್ರಶಸ್ತಿಗಳು ಬಂದಿವೆ. 120 ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸಿದ್ವು. ಕವಿವಿಯಗೆ ಒಟ್ಟು 6 ಪ್ರಶಸ್ತಿಗಳು ಬಂದಿದ್ದು, ಉತ್ಸವದಲ್ಲಿ ವಿಜೇತರಿಗೆ ಅಭಿನಂದನೆ ಸಲ್ಲಿಸಲಾಯ್ತು.
ಈ ವೇಳೆ, ಹಂಗಾಮಿ ಕುಲಪತಿ ಪ್ರೊ. ಜಯಶ್ರೀ ಮಾತನಾಡಿ, ಜೀವನದಲ್ಲಿ ಜೀವನೋತ್ಸಾಹ ಬಹಳ ಮುಖ್ಯ. ಅದಕ್ಕಾಗಿ ಇಂತಹ ಉತ್ಸವಗಳು ವಿದ್ಯಾರ್ಥಿ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸುವುದು ಮುಖ್ಯ ಎಂದು ಪ್ರೊ. ಜಯಶ್ರೀ ಹೇಳಿದರು.
ಇನ್ನೂ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಹಾಗೂ ಡೈರೆಕ್ಟರ್ ಪ್ರೊ. ಎಸ್. ಕೆ ಪವಾರ್ ಮಾತನಾಡಿ, ರಾಷ್ಟ್ರೀಯ ಉತ್ಸವ ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬುತ್ತದೆ. ಕಲಿಕೆಯೊಂದಿಗೆ ನಮ್ಮ ಪ್ರತಿಭೆ ಅನಾವರಣಕ್ಕೆ ದಾರಿಯಾಗಲಿದೆ. ರಾಷ್ಟ್ರೀಯ ಉತ್ಸವ ನಿಮಗೆಲ್ಲರಿಗೂ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಮುಂದಿನ ಜೀವನ ರೂಪಿಸಿಕೊಳ್ಳಿ ಎಂದು ಪ್ರೊ.ಎಸ್.ಕೆ ಪವಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ವಂದಿಸಿದರು.
ಕುಲಸಚಿವರು ಡಾ. ಚನ್ನಪ್ಪಾ, ಫೈನಾನ್ಸ್ ಆಫೀಸರ್ ಪ್ರೊ. ಕೃಷ್ಣಮೂರ್ತಿ, ಮೌಲ್ಯಮಾಪನ ಸಚಿವ ಪ್ರೊ. ಮಟ್ಟಿಹಾಳ್, ಜಿಮ್ಖಾನಾ ಪ್ರೆಸಿಡೆಂಟ್ ಡಾ. ಈಶ್ವರ್ ಬೈದಾರಿ ಸಹ ಇದೇ ವೇಳೆ ಮಾತನಾಡಿದರು.
ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳೊಂದಿಗೆ ವಿವಿಯ ಸಿಬ್ಬಂದಿಗಳು ಗ್ರೂಪ್ ಫೋಟೋಗೆ ಪೋಸ್ ಕೊಟ್ಟರು.
Post a Comment