ದಾಂಡೇಲಿ : (Mar_28_2025)
'ಜನರಿಗೆ ಯಾವುದನ್ನೂ ಉಚಿತವಾಗಿ ನೀಡಬಾರದು ಎಂದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕಿನ ಅಂಬೆವಾಡಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಸಚಿವರಾದ ಆರ್.ವಿ ದೇಶಪಾಂಡೆ ಹೇಳಿದರು.
ಜನ ಸಾಮಾನ್ಯರು ಸಹ ಟ್ಯಾಕ್ಸ್ ರೂಪದಲ್ಲಿ ಕಟ್ಟಿದ ದುಡ್ಡನ್ನ ರಾಜಕಾರಣಿಗಳು ಯೋಜನೆ ನೆಪದಲ್ಲಿ ಮನ ಬಂದಂತೆ ಹಣ ವ್ಯಯಿಸುವಾಗ, ಜನ ಪ್ರತಿನಿಧಿಗಳ ಭತ್ಯೆಗಳಿಗೆ ಹಣ ನೀಡುವಾಗ ಉಚಿತ ಎಂದು ಅನಿಸದಿರುವುದು ಯೋಚಿಸಬೇಕಿತ್ತು. ಶ್ರೀಮಂತರ ಹಣ ಲೂಟಿ ಮಾಡಿ ಬಡವರಿಗೆ ಅನ್ಯಾಯವಾದಾಗ ಮಲಗಿ, ನಿದ್ದೆ ಮಾಡುತ್ತಿದ್ದವರು ಈಗ ಎಚ್ಚೆತ್ತುಕೊಂಡಂತಿದೆ.
ಜನ ಸಾಮಾನ್ಯರ ದುಡ್ಡನ್ನ ಜನರಿಗೊಸ್ಕರ ವ್ಯಯ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದಾಗ ವೈಯಕ್ತಿಕವಾಗಿ ವಿರೋಧಿಸುತ್ತೇನೆ ಎಂದು ಯಾಕೆ ಹೇಳಲಿಲ್ಲ. ಆಗ ಆಡಳಿತ ಚುಕ್ಕಾಣಿ ಹಿಡಿಯ ಬೇಕಿತ್ತು. ಈಗ ಜನ ಸಾಮಾನ್ಯರನ್ನ ಮಂಗ ಮಾಡಿದ್ದಾಯ್ತು. ಮತ್ತೊಮ್ಮೆ ಅಧಿಕಾರ ಸಿಗದು ಎಂದು ತಿಳಿದಾಗ ಮಾತಿನ ವರಸೆ ಬದಲಿಸಿದಂತಿದೆ ಎಂದೆನಿಸುತ್ತಿದೆ.
ರಾಜಕಾರಣಿಗಳ ದ್ವಿಮುಖ ಧೋರಣೆ ಗಮನಿಸಬಹುದು. ಯಾವುದೇ ಸರ್ಕಾರ ವಿರಲಿ, ಜನ ಸಾಮಾನ್ಯರ ದುಡ್ಡಲ್ಲಿ ಎಂಜಾಯ್ ಮಾಡುವ ರಾಜಕಾರಣಿಗಳಿಗೆ ಮತದಾರ ತಕ್ಕ ಪಾಠ ಕಲಿಸುವ ದಿನಗಳು ದೂರ ವಿಲ್ಲ.
ಉಚಿತ ಎಂಬ ಶಬ್ದವೇ ಅಪಾಯಕಾರಿ. ಯಾವುದೇ ಸೇವೆಯಾದರೂ ಅದಕ್ಕೆ ಶುಲ್ಕ ನಿಗದಿಪಡಿಸಬೇಕು' ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿರುವುದು ಖಂಡನೀಯ.
Post a Comment