ಬೆಂಗಳೂರು : (Mar_19_2025)
ರಾಜ್ಯ ಸರ್ಕಾರದ ಸಂಪುಟ ಪುನಾರಚನೆಯ ಮುನ್ಸೂಚನೆ ಸಿಕ್ಕಿದೆ. ಸಿದ್ದರಾಮಯ್ಯ ಬಳಿಕ ಡಿ.ಕೆ ಶಿವ ಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾತುಗಳು ಹೆಚ್ಚಾಗಿವೆ. ಹೀಗಾಗಿ, ಗಜೇಂದ್ರಗಡದ ಕಾಂಗ್ರೆಸ್ ನಿಯೋಗ ಬೆಂಗಳೂರಿಗೆ ತೆರಳಿದೆ. ಬೆಂಗಳೂರಿಗೆ ತೆರಳಿ ಈ ಬಾರಿ ಸಚಿವ ಸಂಪುಟದಲ್ಲಿ ರೋಣ ಮತ ಕ್ಷೇತ್ರದ ಶಾಸಕರು ಮತ್ತು ನಿಗಮ ಮಂಡಳಿ ಅಧ್ಯಕ್ಷರೂ ಆದ ಜಿ.ಎಸ್. ಪಾಟೀಲ್ ಅವರನ್ನ ಸಚಿವನ್ನಾಗಿ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಜಿ.ಎಸ್ ಅವರು ಸಚಿವರಾಗಬೇಕೆಂಬುದು ರೋಣ ಕ್ಷೇತ್ರದ ಕಾರ್ಯಕರ್ತರ ಬೇಡಿಕೆಯಾಗಿದ್ದು, ಕ್ಷೇತ್ರದಲ್ಲಿ ಹಚ್ಚಿನ ಅಭಿವೃದ್ಧಿಯಾಗಲಿದೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ ಕಾಂಗ್ರೆಸ್ ಕಾರ್ಯಕರ್ತರು.
ಇದೇ ವೇಳೆ, ಕಳೆದಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಜೇಂದ್ರಗಡಕ್ಕೆ ಆಗಮಿಸಿದಾಗ ಕಾಲಾವಕಾಶದ ಕೊರತೆಯಿಂದ ಅವರನ್ನ ಸನ್ಮಾನಿಸಲಾಗಿಲ್ಲ. ಸಿ.ಎಂ ಅವರನ್ನ ಸನ್ಮಾನಿಸಲು ಬೆಂಗಳೂರಿನಲ್ಲಿ ಸಮಯ ನಿಗದಿ ಮಾಡುವುದಾಗಿ ಹೇಳಲಾಗಿತ್ತು. ಅದರಂತೆ ಗಜೇಂದ್ರಗಡ ಪುರಸಭೆವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಸನ್ಮಾನಿಸಲಾಯ್ತು ಎಂದು ಕಾಂಗ್ರೆಸ್ ಮುಖಂಡರಾದ ಮುರ್ತುಜಾ ಡಾಲಾಯತ್ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆಳ್ಳಿ ಗಧೆಯನ್ನ ನೀಡಿ ಸನ್ಮಾನಿಸಲಾಯ್ತು.
ಸನ್ಮಾನದ ವೇಳೆ, ಶಾಸಕರಾದ ಜಿ.ಎಸ್. ಪಾಟೀಲ್, ಸಿದ್ದಪ್ಪ ಬಂಡಿ, ರೋಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವೀರಣ್ಣ ಶಟ್ಟರ್, ಹೆಚ್.ಎಸ್.ಸೋಂಪೂರ್, ಅರ್ಜುನ್ ರಾಠೋಡ್, ಪುರಸಭೆ ಅಧ್ಯಕ್ಷರಾದ ಸುಭಾಸ್ ಮ್ಯಾಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮುದಿಯಪ್ಪ ಮುಧೋಳ್, ಪುರಸಭೆ ಸದಸ್ಯರಾದ ಮುರ್ತುಜಾ ಡಾಲಾಯತ್, ರಾಜು ಸಾಂಗ್ಲಿಕರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
Post a Comment