ಕಾಲಕಾಲೇಶ್ವರ : ( Feb_25_2025)
ಕಾಲಕಾಲೇಶ್ವರದ ಸರ್ಕಾರಿ ಪ್ರಾಥಮಿಕ ಶಾಲೆಯ SDMC ಅಧ್ಯಕ್ಷರಾಗಿ ರುದ್ರಪ್ಪ ಚವ್ಹಾಣ್ ಮತ್ತು ಶ್ರೀಮತಿ ಗಂಗಮ್ಮ ಕೆಂಪನಾಳ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಗ್ರಾಮಸ್ಥರು ಸ್ವಾಗತಿಸಿದ್ದಾರೆ. ರಾಜೂರು ಗ್ರಾಮ ಪಂಚಾಯತ್ ಸದಸ್ಯರು ಮತ್ತು ವಿರೇಶ್ ಸೋಮಪ್ಪ ರಾಠೋಡ್ ಶುಭ ಕೋರಿದ್ದಾರೆ. ಈ ವೇಳೆ ಮಾತನಾಡಿದ ಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ನೂತನ SDMC ಅಧ್ಯಕ್ಷರಾದ ರುದ್ರಪ್ಪ ಚವ್ಹಾಣ್ ಮಾತನಾಡಿ, ಶಾಲೆಯ ಉನ್ನತಿಗೆ ಶ್ರಮಿಸುತ್ತೇನೆ. ಮಕ್ಕಳ ಸಂಖ್ಯೆ ಹೆಚ್ಚಲು ಹಾಗೂ ಶಾಲೆಯ ಅಭಿವೃದ್ಧಿಗೆ ಬದ್ಧ ಎಂದು ಹೇಳಿದ್ದಾರೆ.
ಅಲ್ಲದೇ, ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಶಾಲಾ ಮಕ್ಕಳಿಗೆ ಸಿಹಿ, ನೋಟ್ ಬುಲ್ ಮತ್ತು ಪೆನ್ ವಿತರಿಸಿ, ಕಲಿಕಾ ಮಟ್ಟ ಸುಧಾರಣೆಗೆ ತನು, ಮನ, ಧನದಿಂದ ಸಹಾಯ ಮಾಡುವ ಇಂಗಿತ ವ್ತಕ್ತಪಡಿಸಿದ್ದಾರೆ.
Post a Comment