ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಕಿರಣ್ ಎಂಬುವವರು ಪ್ಯಾರಾ ಮೆಡಿಕಲ್ ಡಯಾಲಿಸೀಸ್ ಬ್ರ್ಯಾಂಚ್ ಸ್ಪೂರ್ತಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನಲ್ಲಿ ಕಲಿತಿದ್ದಾರೆ. ಮೂರು ವರ್ಷದ ಕೋರ್ಸ್ ನಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಿರಿಯ ಮಗನಾಗಿರುವ ಕಿರಣ್ ತಂದೆ, ತಾಯಿಯ ಹೆಸರು ಉಳಿಸಿದ್ದಾರೆ. ಅಲ್ಲದೇ, ಮುಗದಲ್ ಕುಟುಂಬದ ಕುಡಿಯಾಗಿರುವ ಕಿರಣ್ ತಮ್ಮ ಕುಟುಂಬದ ಕೀರ್ತಿ ಹೆಚ್ಚಿಸಿದ್ದಾರೆ. ಕುಮಾರಿ ಚೈತ್ರ ವಿಶ್ವಬ್ರಾಹ್ಮಣ ಅವರ ಸಹೋದರನಾಗಿರುವ ಕಿರಣ್ ಕುಟುಂಬದ ಜವಾಬ್ದಾರಿ ಹೊತ್ತಿದ್ದಾರೆ. ತಂದೆ ವೆಂಕಟೇಶ್ ಮತ್ತು ತಾಯಿ ಸುಜಾತಾ ಅವರು ಸಹ ತಮ್ಮ ಮಗನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಡತನದಲ್ಲಿ ಕಷ್ಟ ಪಟ್ಟು ಓದಿ ಪ್ರಥಮ ಸ್ಥಾನ ಪಡೆದಿದ್ದಾರೆ.
Post a Comment