ವೈದ್ಯ, ಪತ್ರಕರ್ತ, ವೇದ, ಶಾಸ್ತ್ರಾಧ್ಯಯನ - ಆಧುನಿಕ ಸೀತಾ"ರಾಮ" - ಇಂದು ಅಶ್ವತ್ಥನಾರಾಯಣ, ಲಲಿತಾ ವಿವಾಹ ವಾರ್ಷಿಕೋತ್ಸವ
ಗಜೇಂದ್ರಗಡ : (Feb_12_2025)
ಸೀತಾರಾಮ ಈ ಹೆಸರಿಗೆ ಸರಿಸಾಟಿ ಮತ್ತೊಂದಿಲ್ಲ. ಹಾಗೇ, ಲಲಿತಾ ಅಶ್ವತ್ಥನಾರಾಯಣ ಅನ್ನುವುದು ಬರಿ ಹೆಸರಲ್ಲ. ಅದು ಒಂದು ದಿವ್ಯ ಶಕ್ತಿ...
ಈ ಜೋಡಿ ಹಸೆಮಣೆ ಏರಿದ ದಿನ. ನಮಗೆ ಸೃಷ್ಟಿಸಿದ ಸೃಷ್ಟಿಕರ್ತರು. ಚೈತ್ರ, ಮೌನೇಶ್ "ಭೂವಿ"ಗೆ ಬರಲು ಈ ಇಬ್ಬರು ಒಂದಾದ ದಿನ. ಹಸೆಮಣೆ ಏರಿ, ಮುದಗಲ್ ಮನೆಬೆಳಗಿದ ದೀಪ ಲಲಿತಾ.. ಆ ದೀಪಕ್ಕೆ ಎಣ್ಣೆಯಂತೆ ಜೊತೆಯಾದ ಅಶ್ವತ್ಥನಾರಾಯಣನ ಜೊಡಿಯಾಗಿ ಇಂದಿಗೆ ಸುಮಾರು 27 ಮರ್ಷಗಳು ಗತಿಸಿವೆ.
ಲಲಿತಾ ಮತ್ತು ಅಶ್ವತ್ಥನಾರಾಯಣ ಇಬ್ಬರೂ ಸೀರಾ" ರಾಮನಂತೆ, ರಾಧಾ ಕೃಷ್ಣನಂತೆ... ಅವರ ಪ್ರೀತಿ ಎಂದು ಅಜರಾಮರ...
ಅಶ್ವತ್ಥನಾರಾಯಣ ಹುಟ್ಟಿದ್ದು, ಮುದಗಲ್ ನ ಒಂದು ಮಸೀದಿಯಲ್ಲಿ. ಗಜೇಂದ್ರಗಡದ ಎಲ್ಲ ಸಮಾಜ ಬಾಂಧವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಅಪ್ಪಾಜಿ... ರಾಜಕಾರಣವನ್ನ ಹತ್ತಿರದಿಂದ ಕಂಡವರು... ಆಧ್ಯಾತ್ಮಿಕದಲ್ಲೂ ತಮ್ಮನ್ನ ತಾವು ತೋಡಗಿಸಿಕೊಂಡವರು... ಪತ್ರಿಕೆಯಲ್ಲಿ ಬರೆದು, ಪತ್ರಕರ್ತರಿಗೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟವರು. ವೈದ್ಯರಾಗಿಯೂ ಬಡವರ ಸೇವೆ ಮಾಡಿದ್ದಾರೆ. ಹೀಗೆ ಹತ್ತಾರು ಮಜಲು ಕಂಡ ಅಪರೂಪದ, ಸಕಲ ಕಲೆಯನ್ನು ಬಲ್ಲವರೂ ಆಗಿದ್ದರೂ... ಕೆಲವೊಮ್ಮ ಜನರು ಸಮಸ್ಯೆ ಎಂದು ಕೇಳಿ ಬಂದವರಿಗೆ ದಾರಿ ತೋರಿಸಿ ಕೊಟ್ಟ ಉದಾಹರಣೆಗಳು ಸಾವಿರಾರು... ಹೀಗೆ ಅಪ್ಪನ ಬಗ್ಗೆ ಹೇಳ ತೀರದು...!!!
ಅಪ್ಪ ಅಂದ್ರೆ ಆಕಾಶ... ಅಪ್ಪನಿಗೆ ಸರಿಸಾಟಿ ಮತ್ತೊಬ್ಬರಿಲ್ಲ. ಸಾಕಿ ಸಲುಹಲು ಹರಕಲು ಬಟ್ಟೆ ಧರಿಸಿದರು. ಅದನ್ನ ಮಕ್ಕಳಿಗೆ ಕಾಣದಿರಲಿ ಎಂದು ಪ್ರೀತಿ ತೋರಿ ಸಲುಹಿದ ಹೆಮ್ಮರ...
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಮ್ಮ, ಅಪ್ಪ... ನೀವೂ ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರು, ಯಾವುದನ್ನ ತೋರಿಕೆಗಾಗಿ ಮಾಡಲಿಲ್ಲ. ತೋರಿಕೆಗಾಗಿ ಮಾಡುವ ಕೆಲಸ ಶಾಶ್ವತ ಅಲ್ಲ ಎಂದು ನಂಬಿದ್ದ ಕಾಲವದು. ಅವರು ಸಾಧಿಸಿದ, ಮಾಡಿದ ಕೆಲಸ ನಾವು ಸದಾ ನೆನೆಯುತ್ತೇವೆ...
ಹಣ್ಣಿನ ವ್ಯಪಾರವನ್ನೂ ಮಾಡಿ, ಕಷ್ಟ ಪಟ್ಟು ದುಡಿದಿದ್ದು ಮಾತ್ರ ಉಳಿಯಲಿದೆ. ಹೀಗೆ ಬಂದದ್ದು, ಹಾಗೆ ಹೊರಟು ಹೋಗುತ್ತದೆ ಎಂದು ಹೇಳುತ್ತಿದ್ದ ಶಬ್ದಗಳು ಇನ್ನೂ ಕಿವಿಗಳಲ್ಲಿ ಗುನುಗುಡುತ್ತಿದೆ...
ವೈದ್ಯರಾಗಿ, ಪತ್ರಕರ್ತರಾಗಿ, ಶಾಸ್ತ್ರಾಧ್ಯಯನ ಮಾಡಿ ಪಂಚೆಂದ್ರಿಯಗಳನ್ನ ಗೆದ್ದು, ಸಮಾಜದ ಅಂಕು, ಡೊಂಕುಗಳನ್ನ ತಿದ್ದುವ, ಸಮಾಜ ಸುಧಾರಣೆ, ಪರೋಪಕಾರಕ್ಕೆ ಮತ್ತೊಂದು ಹೆಸರೆ ಅಶ್ವತ್ಥನಾರಾಯಣ. ಅವರಿಗೆ ಬೆಂಬಲಿಸಿದ್ದು, ಸೀತಾಮಾತೆಯ ಪ್ರತಿರೂಪ ಲಲಿತಾ...
ಲೇಖನ : ಚೈತ್ರಾ, ಮೌನೇಶ್ ವಿಶ್ವಬ್ರಾಹ್ಮಣ, ಗಜೇಂದ್ರಗಡ
Post a Comment