ಪಿಎಸ್ಐ ಆದ ಕಿರಣ್ ರಾಠೋಡ್ ಗೆ ಸನ್ಮಾನ
ಗಜೇಂದ್ರಗಡ : (Feb_12_2025)
ಇನ್ನೇನು ಎಸ್.ಎಸ್.ಎಲ್.ಸಿ ಮತ್ತು ಪಿಯು ಪರೀಕ್ಷೆ ಆರಂಭಾಗುವ ಸಮಯ.. ಹೀಗಾಗಿ, ಫಲಿತಾಂಶ ಸುಧಾರಣೆಗಾಗಿ ಕೈಗೊಳ್ಳಲಾದ "ಓಣಿಗೊಂದು ಪಾಲಕರ ಸಭೆ" ಕಾರ್ಯಕ್ರಮವು ಲಂಬಾಣಿ ಓಣಿಯ ಮೌನೇಶ್ವರ ದೇವಸ್ಥಾನದಲ್ಲಿ ನಡೆಯಿತು. 8.9.10 ನೇ ತರಗತಿಯ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಪಾಲಕರು, ಪೋಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಕ್ಕಳ ಕಲಿಕೆಯ ಬಗ್ಗೆ ಸಂವಾದ ನಡೆಸಲಾಯಿತು. ವಿಶೇಷವೆಂದರೆ ಇತ್ತೀಚಿಗೆ PSI ಹುದ್ದೆಗೆ ಆಯ್ಕೆಯಾದ ಗಜೇಂದ್ರಗಡದ ಹೆಮ್ಮೆಯ ಪುತ್ರ ಕಿರಣ ದ್ಯಾವಲೆಪ್ಪ ರಾಠೋಡ ಅವರನ್ನ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕಿರಣ ರಾಠೋಡ್ ವಿದ್ಯಾರ್ಥಿಗಳು ತಂದೆ, ತಾಯಿಯ ಮತ್ತು ಗುರುಗಳ ಕೀರ್ತಿಯನ್ನು ಬೆಳಗುವಂತವರಾಗಬೇಕೆಂದು ಹೇಳಿದರು. ವಕೀಲರಾದ ಪೀರು ರಾಠೋಡ್ ಮಾತನಾಡಿ, ಕೆಳ ಸ್ಥರದ ಸಮುದಾಯದ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿರುವುದು ಅತೀವ ಸಂತಸ. ಕಷ್ಟಪಟ್ಟು ಶ್ರಮ ವಹಿಸಿದರೇ, ಗುರಿ ಸಾಧಿಸಬಹುದು ಎಂದು ಹೇಳಿದರು.
ಶಿಕ್ಷಕರಾದ ಬಿ.ಬಿ. ಕಡಬಿನ್ ಸಹ ತಮ್ಮ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಎಸ್ ಡಿ ಕುರಿ, ಎ.ಜಿ ಬೂದಿಹಾಳ್, ಸುರೇಶ್ ಮಹೇಂದ್ರಕರ್, ಸೋಮಶೇಖರ್ ಸಿ ಡಿ, ಆರ್. ಮ್ಯಾಗೇರಿ, ಎ.ಎನ್ ರೋಣದ್, ಹೆಚ್ ಆರ್ ಭಜಂತ್ರಿ, ಹಾಗೂ ತಾಂಡಾದ ಶಿಕ್ಷಣ ಪ್ರೇಮಿಗಳಾದ ವೀರೇಶ್ ರಾಠೋಡ್, ರೂಪೇಶ್ ರಾಠೋಡ್, ಸೇರಿದಂತೆ ಅನೇಕರು ಭಾಗವಹಿಸಿದ್ದರು.
Post a Comment