-->
Bookmark

Gajendragad : ಮುಸ್ಲೀಂ ಸಮಾಜದ ಒಂದೇ ಕುಟುಂಬದ ಇಬ್ಬರು ಸಹೋದರಿಯರು ಡಾಕ್ಟರ್

Gajendragad : ಮುಸ್ಲೀಂ ಸಮಾಜದ ಒಂದೇ ಕುಟುಂಬದ ಇಬ್ಬರು ಸಹೋದರಿಯರು ಡಾಕ್ಟರ್ 

ಗಜೇಂದ್ರಗಡ : (Feb_07_2025)

ಬಡತನ ಎಲ್ಲವನ್ನ‌ ಕಲಿಸುತ್ತದೆ ಎಂಬುದಕ್ಕೆ ಡಾ. ಸನಾಆಫ್ರೀನ್ ಹುಸೇನಸಾಬ್ ಸಾಂಗ್ಲೀಕರ್ ಮತ್ತು ಡಾ. ಆಸ್ಮಾಬೇಗಂ ಅವರೇ ಸಾಕ್ಷಿ.

ಮುಸ್ಲೀಂ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಮನೆಯಿಂದ‌ ಹೊರ ಬಂದರೇ, ಮೂಗು ಮುರಿಯುವವರೇ ಜಾಸ್ತಿ. ಇಂತಹ ಪರಿಸ್ಥಿತಿಯಲ್ಲಿ ಗಜೇಂದ್ರಗಡ ಪಟ್ಟಣದ ಹುಸೇನಸಾಬ್ ಅವರಿಗೆ 6 ಜನ ಮಕ್ಕಳಲ್ಲಿ ಐವರು ಹೆಣ್ಣುಮಕ್ಕಳು. ಮೊದಲನೆ‌ ಮಗಳು ಸನಾ ಆಫ್ರೀನ್, ಎರಡನೇ ಮಗಳು ಆಸ್ಮಾಬೇಗಂ ಈ ಇಬ್ಬರೂ ಬಿ.ಎ.ಎಂ.ಎಸ್ ಮುಗಿಸಿದ್ದಾರೆ.

ಹುಸೇನಸಾಬ್ ಅವರು ಮಕ್ಕಳಿಗಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ. ಹುಸೇನಸಾಬ್ ಅವರ ಧರ್ಮ ಪತ್ನಿ ಶಬಿನಾಬೇಗಂ ಅವರು ಸಹ ಮಕ್ಕಳ ಭವಿಷ್ಯಕ್ಕಾಗಿ ಬಹಳ ಶ್ರಮ ವಹಿಸಿದ್ದಾರೆ. ಮುಸ್ಲೀಂ ಸಮಾಜದ ಕೀರ್ತಿ ಹಚ್ಚಿಸಿದ ಕೀರ್ತಿ ಇವರಿಬ್ಬರಿಗೆ ಸಲ್ಲುತ್ತದೆ. ಮುಸ್ಲೀಂ ಸಮಾಜದಲ್ಲಿ ಶಿಕ್ಷಣಕ್ಕೆ‌ ಹೊಸ ಭಾಷ್ಯ ಬರೆದಿದ್ದಾರೆ. 

ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಓದಲು ಪ್ರೇರೇಪಣೆಯಾಯ್ತು ಎನ್ನುತ್ತಾರೆ ಈ ಇಬ್ಬರು ಯುವ ವೈದ್ಯರು. 

ಮುಂಡರಗಿಯ ಎಸ್.ಬಿ.ಎಸ್. ಆಯುರ್ವೇದಿಕ್ ಕಾಲೇಜ್ ನಲ್ಲಿ ಬಿ.ಎ.ಎಂ.ಎಸ್. ಮುಗಿಸಿದ ಇವರು, ಒಂದ‌ ರಿಂದ ಐದನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ ನಾಲ್ಕರಲ್ಲಿ ಕಲಿತ ಇವರು, ಪ್ರತಿಭಾವಂತರಾಗಿದ್ದ ಈ ಇಬ್ಬರಿಗೂ ಕಾಲಕಾಲೇಶ್ವರ ವ್ಯಾಪ್ತಿಯ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೀಟ್ ಗಿಟ್ಟಿಸಿಕೊಂಡರು.‌ ಬೀದರ್ ನ ಶಾಹೀನ್ ನಲ್ಲಿ ಪಿಯು ಮುಗಿಸಿದರು. ಇದಾದ ಬಳಿಕ ಇವರಿಬ್ಬರೂ, ಒಂದರಿಂದ ಡಿಗ್ರಿ ವರೆಗೂ ಒಂದೆ ಶಾಲೆ, ಒಂದೆ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದು, ಮತ್ತೊಂದು ವಿಶೇಷ. 

ತಮ್ಮ ಶ್ರಮದ ಪ್ರತಿಫಲಕ್ಕಿಂತ ತಂದೆ, ತಾಯಿ ಶ್ರಮವೇ ನನಗೆ ಸ್ಪೂರ್ತಿ. ತಂದೆ, ಹುಸೇನಸಾಬ್ ಅವರು ನನ್ನ ಹಿರೋ ಎಂದು ಈ ಇಬ್ಬರು ಪುತ್ರಿಯರು ಕಿರಾ ನ್ಯೂಸ್ ಕನ್ನಡದ ಜೊತೆ ಮಾತನಾಡುವಾಗ ತಿಳಿಸಿದರು. ಮುಂಬರುವ ದಿನಗಳಲ್ಲಿ ಬಡವರಿಗಾಗಿ ಸೇವೆ ಸಲ್ಲಿಸುವ ಮಹದಾಸೆ ಇದೆ. ವೈದ್ಯೋ ನಾರಾಯಣ ಹರಿ ಎನ್ನುವ ಮಾತನ್ನ ಹೇಳುತ್ತಾರೆ. ಇದಕ್ಕೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇವೆ ಎಂದು ಇಬ್ಬರು ಹೇಳಿದರು.‌

ಇನ್ನೂ, ಹುಸೇನಸಾಬ್ ಸಾಂಗ್ಲೀಕರ್ ಅವರು, ನಾನು ಆಸ್ತಿ ಮಾಡಿಲ್ಲ. ಆಸ್ತಿ ಮಾಡಿದ್ದರೇ, ಕೋಟ್ಯಾಂತರ ರೂಪಾಯಿ ಆಸ್ತಿ  ಮಾಡಬಹುದಾಗಿತ್ತು. ಆದರೇ, ನಾನು ಸಹ ಡಿಗ್ರಿ ಮುಗಿಸಿದ್ದೇನೆ. ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಕಲಿಸುವುದು ಕಡಿಮೆ. ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿತ್ತು. ಸೈಟ್ ಮಾರಿದ್ದೇನೆ. ಮಕ್ಕಳೆ ನನಗೆ ಆಸ್ತಿ.‌ ಅವರು ಎಲ್ಲರಿಗೂ ಸ್ಪೂರ್ತಿಯಾಗಲಿ ಎನ್ನುವುದೇ ನನ್ನಾಸೆ ಎಂದು ಭಾವುಕರಾದರು.

ಅದೆನೇ ಇರಲಿ ಗಜೇಂದ್ರಗಡದ ಮುಸ್ಲೀಂ ಸಮಾಜದ ಕೀರ್ತಿ ಹೆಚ್ಚಿಸಿದ್ದು,  ಸಮಾಜದಲ್ಲಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇಂತಹ ಪ್ರತಿಭೆಗಳು ಹೆಚ್ಚಾಗಲಿ... ಬಡತನ ಶಿಕ್ಷಣಕ್ಕೆ ಮಾರಕವಾಗದಿರಲಿ ಎಂಬುದು ನಮ್ಮ ಆಶಯ...!!
Post a Comment

Post a Comment