-->
Bookmark

Dharwad : ಸಂತ ಸೇವಾಲಾಲ್ & ಮಾರಿಕಾಂಬ ದೇವಸ್ಥಾನ - ಧಾರವಾಡದಲ್ಲಿ ಬಂಜಾರ ಸಂಸ್ಕೃತಿ ಅನಾವರಣ

ಸಂತ ಸೇವಾಲಾಲ್ & ಮಾರಿಕಾಂಬ ದೇವಸ್ಥಾನ - ಧಾರವಾಡದಲ್ಲಿ ಬಂಜಾರ ಸಂಸ್ಕೃತಿ ಅನಾವರಣ 

ಧಾರವಾಡ : (Feb_23_2025)

ಶಿಕ್ಷಿತರಿಂದ ಸಂಸ್ಕೃತಿ ಹಾಳಾಗುತ್ತದೆ ಎಂಬ ಮಾತಿದೆ. ಆದ್ರೆ, ಅದಿಕ್ಕೆ ವ್ಯತಿರಿಕ್ತ ಎಂಬಂತೆ ಧಾರವಾಡದಲ್ಲಿ ನೆಲೆಸಿರುವ ಬಂಜಾರ ಸಮುದಾಯದ ಬಾಂಧವರು, ಸಂತ ಸೇವಾಲಾಲ್ ಮತ್ತು ತಾಯಿ ಮಾರಿಕಾಂಬಾ ದೇವಿ ದೇವಸ್ಥಾನ ನಿರ್ಮಿಸಿದ್ದಾರೆ. ಕಳೆದ 15_20 ವರ್ಷದಿಂದ ಕೆಲಸ ಅರಸಿ, ರಾಜ್ಯದ ವಿವಿಧೆಡೆಯಿಂದ ಬಂದು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ಧಾರವಾಡ ಬಂಜಾರ ಸೇವಾ ಸಂಘದಿಂದ ಈ ದೇವಸ್ಥಾನ ನಿರ್ಮಾಣವಾಗಿದೆ.‌ ಫೆಬ್ರವರಿ 25 ಮತ್ತು 26 ರಂದು ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾನ ಮಾಡಲಿದ್ದೇವೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಬೊಮ್ಮನಪಾಡ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದರು. 

ಸಂಘದ ಹಾಲಿ ಅಧ್ಯಕ್ಷರಾದ ಡಾ. ಕುಬೇರ್ ನಾಯಕ್ ಮಾತನಾಡಿ, ಈ ದೇವಸ್ಥಾನ ನಿರ್ಮಿಸಲು ಹಲವು ಅಡೆ ತಡೆಗಳಿದ್ವು. ಅವುಗಳನ್ನೆಲ್ಲ ಪರಿಹರಿಸಿದ್ದೇವೆ. ಕೇವಲ ಮೂರು ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿ, ದೇವಸ್ಥಾನ ನಿರ್ಮಿಸಿದ್ದೇವೆ ಎಂದು ಹೇಳಿದರು. 

ಇದೇ ವೇಳೆ, ದೇವಸ್ಥಾನ ಉತ್ಸವ ಸಮಿತಿ ಉಪಾಧ್ಯಕ್ಷರಾದ ಸೀತಾರಾಮ್ ಕೆ‌ ಪವಾರ್ ಮಾತನಾಡಿ, ಕೇವಲ ದೇವಸ್ಥಾನ ಮಾತ್ರವಲ್ಲ ಬಡವರ ಏಳಿಗೆಗಾಗಿ ಬ್ಯಾಂಕ್ ಸ್ಥಾಪಿಸಿದ್ದೇವೆ.‌ ಕಳೆದ ಐದಾರು ವರ್ಷದಿಂದ ಇಲ್ಲಿ ನೆಲೆಸಿರುವ ಬಡವರಿಗಾಗಿ ಶ್ರಮವಹಿಸುತ್ತಿದ್ದೇವೆ ಎಂದು ಸೀತಾರಾಮ್ ಕೆ ಪವಾರ್ ಮಾಹಿತಿ ನೀಡಿದರು.‌ ಜೊತೆಗೆ, ದೇವಸ್ಥಾನ ಉದ್ಘಾಟನೆಗೆ ಸಕಲ ಸಿದ್ಧತೆಯೂ ಪೂರ್ಣಗೊಂಡಿದೆ.‌ ಹಲವಾರು ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ತಿಳಿಸಿದರು.   


ಧಾರವಾಡ ಬಂಜಾರ ಸೇವಾ ಸಂಘದ ಗೌರವಾಧ್ಯಕ್ಷರಾದ  ಪಿ.ಎಸ್. ರಜಪೂತ್, ಅಧ್ಯಕ್ಷರಾದ ಡಾ. ಕುಬೇರ್ ಹೆಚ್.‌ನಾಯಕ್, ಕಾರ್ಯಾಧ್ಯಕ್ಷರಾದ ವಿ.ಸಿ ನಾಯಕ್, ಆರ್ ರಾಮಾನಾಯಕ್, ಉಪಾಧ್ಯಕ್ಷ ಕೆ.ಎಫ್ ಪವಾರ್, ಕೆ.ಎಲ್.‌ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ರಾಜು ಜಿ ನಾಯಕ್, ಕಾರ್ಯದರ್ಶಿ ಅಶೋಕ್ ಬಿ ಲಮಾಣಿ, ಸಹ ಕಾರ್ಯದರ್ಶಿ ವೆಂಕಟೇಶ್ ನಾಯ್ಕ್, ಶ್ರಮಣಕುಮಾರ್ ಹೆಚ್. ರಾಠೋಡ್, ಖಜಾಂಚಿ, ಡಾ. ಚವಂದ್ರಶೇಖರ್ ಲಮಾಣಿ, ಸಹ ಖಜಾಂಚಿ, ಡಾ. ಬಿ.ಎಲ್. ಗುಂಡೂರ್, ಸಂಘಟನೆ ಡಾ. ಬಿ. ಆರ್ ರಾಠೋಡ್, ಡಾ. ಚಂದ್ರಪ್ಪ ಆರ್ ಲಮಾಣಿ, ಕಾರ್ಯದರ್ಶಿಗಳಾದ ಡಾ. ಮಂಜುನಾಥ್ ಲಮಾಣಿ, ಪಿ.ಎಂ ದೊಡಮನಿ, ಡಿ.ಎಸ್ ಬಣಕಾರ್, ಆರ್.‌ಬಿ ಚವ್ಹಾಣ್, ಮತ್ತು ಮಹಿಳಾ‌ ಪ್ರತಿನಿಧಿಗಳು ಶ್ರೀಮತಿ ರೇಖಾ ಪಿ ರಾಠೋಡ್, ಶ್ರೀಮತಿ ಪೂರ್ಣಿಮಾ ಬಿ ಗುಂಡೂರ್, ಮತ್ತು ಗೌರವ ಸಲಹೆಗಾರರಾದ ಹೊನ್ನಪ್ಪ ಎಸ್ ಲಮಾಣಿ, ಹೆಚ್.ಕೆ ಲಮಾಣಿ, ಎಸ್.ಎನ್ ಚವ್ಹಾಣ್, ಕೆ.ಎಲ್. ನಾಯಕ್, ಪಿ.ಎಲ್ ಕೂಡಗಿ, ಸುಭಾಷ್ ಕೆ ಚವ್ಹಾಣ್, ಧರ್ಮರಾಜ್ ಜೆ ಲಮಾಣಿ, ಕುಬೇರ್ ಎನ್ ಲಮಾಣಿ, ತುಕಾರಾಮ್ ಚವ್ಹಾಣ್, ಪ್ರಕಾಶ್ ಎನ್ ರಾಠೋಡ್, ಡಾ. ಮೋತಿಲಾಲ್ ಪವಾರ್, ಓಬಾ ನಾಯಕ್, ಪ್ರಕಾಶ್ ಚವ್ಹಾಣ್, ನಾಗರಾಜ್ ಸೇರಿದಂತೆ ಬಂಜಾರ ಸಮುದಾಯದ ಸಕಲ ಗುರು ಹಿರಿಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
Post a Comment

Post a Comment