-->
Bookmark

ಜಿಲ್ಲಾಸ್ಪತ್ರೆಯಲ್ಲಿ ಕನ್ನಡಕ್ಕಿಲ್ಲ ಕಿಮ್ಮತ್ತು

Bagalakote :   ಜಿಲ್ಲಾಸ್ಪತ್ರೆಯಲ್ಲಿ ಕನ್ನಡಕ್ಕೆ ಅವಮಾನ 
ಹೋರಾಟ ಅನಿವಾರ್ಯ : ಕನ್ನಡಪರ ಸಂಘಟನೆ 
ಬಾಗಲಕೋಟೆ : ( Feb_05_2025)
ಬಾಗಲಕೋಟೆಯಲ್ಲಿರುವ ಸರ್ಕಾರಿ ಜಿಲ್ಲಾ ಸ್ಪತ್ರೆಯಲ್ಲಿ ಕನ್ನಡಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬಂತಾಗಿದೆ. ಬೇರೆ ರಾಜ್ಯದಿಂದ ಬಂದವರಿಗೆ ಕನ್ನಡದ ಕಲಿರಿ ಎಂದು ಹೇಳುವ ಕನ್ನಡಾಭಿಮಾನಿಗಳಿಗೆ ಇದು ನುಂಗಲಾರದ ತುತ್ತಾಗಿದೆ. 
ಬೇರೆ ಬೇರೆ ರಾಜ್ಯದಿಂದ ಬಂದು ಇಲ್ಲಿ ಹಿಂದಿ ಮಾತನಾಡುವವರಿಗೆ ಕನ್ನಡ ಕಲಿಸುವ ಕಲಿಗಳಿಗೆ ಕನ್ನಡ ಬರೆದಿದ್ದು ಕಾಣಲಿಲ್ಲ ಎನ್ನುವುದು ಮಾತ್ರ ನುಂಗಲಾರದ ತುತ್ತಾಗಿದೆ ಎಂದು ಕನ್ನಡಪರ ಸಂಘಟನೆಗಳು ಆರೋಪಿಸಿವೆ. 
ಪ್ರತಿನಿತ್ಯ ನೂರಾರು ಜನ ಆರೋಗ್ಯ ತಪಾಸಣೆಗೆ ಬರುವವರಿಗೆ ಕನ್ನಡದಲ್ಲೆ ಮಾತಮಾಡುವ ಇವರಿಗೆ ಕನ್ನಡದ ಬಗ್ಗೆ ಇರುವ ಅಭಿಮಾನ ತಿಳಿಯುತ್ತದೆ. ಡಾಕ್ಟರ್ ಗಳಾದವರಿಗೆ ಕನ್ನಡದ ಮೇಲಿರುವ ಅಭಿಮಾನ ಎಷ್ಟಿದೆ ಎಂದು ಇದರಿಂದಲೇ ತಿಳಿಯುತ್ತದೆ. 

ಬಾಗಲಕೋಟೆಯ ಜಿಲ್ಲಾಸ್ಪತ್ರೆಯಲ್ಲಿನ ಹಿರಿಯ ವೈದ್ಯರಿಗೀಗ ಕನ್ನಡದ ಪಾಠ ಮಾಡಬೇಕಿದೆ.‌ ಕನ್ನಡಕಲಿಸುವವರು ಯಾರು ಇಲ್ಲದಂತಾಗಿದೆ. ಇವರಿಗೆ ಕನ್ನಡ ಶಾಲೆಯ ನಲಿಕಲಿ ಪಾಠದ ಮೂಲಕ ಕನ್ನಡ ಅಭ್ಯಾಸ ಮಾಡಿಸಬೇಕಿದೆ ಎಂದು ಸಾರ್ವಜನಿಕರು ಚರ್ಚಿಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಜಿಲ್ಲಾಸ್ಪತ್ರೆ ವೈದ್ಯರಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂಬುದು ವಿರ್ಯಾಸ... 

ಇಂಗ್ಲೀಷ್ ವ್ಯಾಮೋಹಕ್ಕೆ ಬಲಿಯಾಗಿರುವ ವೈದ್ಯರಿಂದ ಕನ್ನಡಕ್ಕೆ ಅವಮಾನವಾಗುತ್ತಿದೆ. ಇದೆಲ್ಲದಕ್ಕೂ ಹೋರಟದ ಮಾರ್ಗ ಅನುಸರಿಸುವುದು ಅನಿವಾರ್ಯವಾಗಲಿದೆ.
Post a Comment

Post a Comment