-->
Bookmark

ಗೋವಾದಲ್ಲಿ ಬಂಜಾರ ಸಂಸ್ಕೃತಿ ಉಳಿಸುತ್ತಿರುವ ಕಾಲಕಾಲೇಶ್ವರ ಕುವರ

ಗೋವಾದಲ್ಲಿ ಬಂಜಾರ ಸಂಸ್ಕೃತಿ ಉಳಿಸುತ್ತಿರುವ 
ಕಾಲಕಾಲೇಶ್ವರ ಕುವರ 

ಮಾಪ್ಸಾ :(ಗೋವಾ )(Feb_16_2025)

ಉತ್ತರ ಗೋವಾ ಮಾಪ್ಸಾ ಜಿಲ್ಲೆಯ ಉಕ್ಕಸಾಯಿ ಎಂಬಲ್ಲಿ ಆಚರಿಸಲಾದ ಶ್ರೀ ಸಂತ ಸೇವಾಲಾಲ್ ಜಯಂತಿಯಲ್ಲಿ ಕಾಲಕಾಲೇಶ್ವರದ ಸೋಮಪ್ಪ ರಾಠೋಡ್ ಅವರ ಮಗ, ಹನುಮಂತ್ ರಾಠೋಡ್ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರದಿಂದ ಬರಿಗೈಲಿ ಗೂಳೆ ಹೋದವರು. ಪ್ರಾರಂಭದಲ್ಲಿ ಹಲವು ಅಡೆತಡೆಗಳನ್ನ ಎದುರಿಸಿದರು. ಬಳಿಕ ತಮ್ಮನ್ನ ತಾವು ಗುರುತಿಸಿಕೊಳ್ಳಲು ಹಗಲಿರುಳು ಶ್ರಮ ವಹಿಸಿದ್ದಾರೆ. ಗೋವಾದಲ್ಲಿ
ಬಂಜಾರ ಸಮುದಾಯದ ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ.‌ ಆದ್ರೂ, ಗಜೇಂದ್ರಗಡದಿಂದ ಕೂಗಳತೆ ದೂರದಲ್ಲಿನ ಕಣವಿ ಮತ್ತು ಕಾಲಕಾಲೇಶ್ವರಕ್ಕೆ ಹಬ್ಬ ಹರಿದಿನಗಳಂದು ಬಂದು ಕುಟುಂಬದಲ್ಲಿ ಬಂಜಾರ ಸಮುದಾಯದ ಬಗೆಗಿನ ಕಳಕಳಿ ಬಿಚ್ಚಿಡುತ್ತಾರೆ. ನಾವು ನಮ್ಮ ಸಂಸ್ಕೃತಿ ಬೆಳೆಸದಿದ್ದರೇ, ಹೇಗೆ ಎಂದು ಕೆಲವು ಸಲ ಮಾತಿಗಿಳಿದಾಗ ಹೇಳಿದ್ದುಂಟು. 

ಇನ್ನೂ, ನಮ್ಮ ತಾಂಡಾದಲ್ಲೆ ಸಂಸ್ಕೃತಿ ಪರಂಪರೆ ಉಳಿಸಲು ಸರ್ಕಾರದ ಯೋಜನೆಗಳನ್ನ ತರಬೇಕಿದೆ. ಮುಂಬರುವ ಪೀಳಿಗೆಗೂ ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ, ಬೆಳೆಸುವ ಕಾಯಕ ಮಾಡಬೇಕಿದೆ ಎಂದು ಹನುಮಂತ್ ರಾಠೋಡ್ ಹೇಳಿದ್ದಾರೆ.‌

ಕಾಲಕಾಲೇಶ್ವರದ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು ಗೋವಾದಲ್ಲಿ ಸಂಸ್ಕೃತಿ ‌ಪರಂಪರೆಗೆ ಮತ್ತೊಂದು ಮೈಲಿಗಲ್ಲಾಗಿದ್ದಾರೆ. ಹೀಗೆ ಸಂಸ್ಕೃತಿ ಪರಂಪರೆಯ ಬಗ್ಗೆ ಮಾತಮಾಡುತ್ತ, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಹನುಮಂತ್ ಇಂದಿಗೂ ತಮ್ಮ‌ ಮಕ್ಕಳಿಗೆ ಮನೆಯಲ್ಲಿ ಲಂಬಾಣಿ ಭಾಷೆಯನ್ನ ಉಣಬಡಿಸುತ್ತಿದ್ದಾರೆ. ಪರ ರಾಜ್ಯಕ್ಕೆ ತೆರಳಿ ನಮ್ಮ‌ ಭಾಷೆಯನ್ನ ಮರೆಯಲಾದಿತೇ ಎಂದು ಸಹ ಹೇಳಿದ್ದಾರೆ ಹನುಮಂತ್ ರಾಠೋಡ್. 

ಈಗ ಗೋವಾದಲ್ಲಿ ಆಚರಿಸಲಾದ ಶ್ರೀ ಸಂತಸೇವಾಲಾಲ್ ಮಹಾರಾಜರ 286ನೇ ಜಯಂತಿಯಂದು ನಮ್ಮ ಸಂಸ್ಕೃತಿ ಪರಂಪರೆಯನ್ನ ಮಕ್ಕಳಿಗೆ ಕಲಿಸುತ್ತಿದ್ದೆನೆ ಎಂದು ಹೇಳಿದ್ದಲ್ಲದೇ, ಬಂಜಾರ ಸಮುದಾಯ ಒಂದು ಭಾವನೆ.‌ ಒಂದು ಶಕ್ತಿ ಎಂದು ತಿಳಿಸಿದ್ದಾರೆ. ಹೀಗೆ ಬಂಜಾರ ಸಮುದಾಯದ ಕೀರ್ತಿಯನ್ನ ಬೇರೆ ರಾಜ್ಯ, ಬೇರೆ ದೇಶದ ಪ್ರಜೆಗಳಿಗೆ ಕಲಿಸುತ್ತಿರುವ ನಮ್ಮ ಗಜೇಂದ್ರಗಡ ತಾಲೂಕಿನ ಕುವರ ಹನುಮಂತ್ ಅವರ ಕಾರ್ಯ ಜನ ಮೆಚ್ಚುವಂತದ್ದು... ಇಂತಹ ನೂರಾರು ಸಾಮಾಜಿಕ ಕಾರ್ಯ ಮಾಡಲಿ... ಎಲ್ಲರಿಗೂ ಮಾದರಿಯಾಗುತ್ತಿರಲಿ ಎಂದು ಹಾರೈಸೋಣ...!!!
Post a Comment

Post a Comment