-->
Bookmark

Yelburga : ಭೀಕರ ಅಪಘಾತ : ಗಜೇಂದ್ರಗಡದ ಮೂರನೇ ತರಗತಿ ವಿದ್ಯಾರ್ಥಿ ಸಾವು

Yelburga : ಭೀಕರ ಅಪಘಾತ : ಗಜೇಂದ್ರಗಡದ ಮೂರನೇ ತರಗತಿ ವಿದ್ಯಾರ್ಥಿ ಸಾವು 
ಯಲಬುರ್ಗಾ : (Jan_29_2025)
ಕೊಪ್ಬಳ ಜಿಲ್ಲೆ ಯಲಬುರ್ಗಾ ಬಳಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಭೀಕರ ಅಪಘಾತ ಸಂಭವಿಸಿದ್ದು, 
ಅಪಘಾತದಲ್ಲಿ ಗಜೇಂದ್ರಗಡದ ತೋಂಟದಾರ್ಯ ಸಿ.ಬಿ.ಎಸ್.ಸಿ ಶಾಲೆಯ ಮೂರನೆ ತರಗತಿ ವಿದ್ಯಾರ್ಥಿ ವೈಭವ್ ಮಠದ್ ಕೊನೆಯುಸಿರೆಳೆದಿದ್ದಾರೆ.‌ ಇನ್ನೂ, ಹಲವರಿಗೆ ಗಾಯಗಳಾಗಿವೆ.‌ ಗಾಯಾಳುಗಳನ್ನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಸ್ ಯಲಬುರ್ಗಾದಿಂದ ಗಜೇಂದ್ರಗಡಕ್ಕೆ ಆಗಮಿಸುತ್ತಿತ್ತು ಎಂದು ಮಾಹಿತಿ ಲಭ್ಯವಾಗಿದೆ. 
ಖಾಸಗಿ ಬಸ್ ಇದಾಗಿದ್ದು, ಬಸ್ ಮೇಲೆ ಸಾಯಿ ಬಾಲಾಜಿ ಎಂದು ಬರೆಯಲಾಗಿದೆ. ಬಸ್ ನಂಬರ್ AR 02 4204 ಎಂದು ತಿಳಿದು ಬಂದಿದೆ. ಕೊಪ್ಪಳ ಜಿಲ್ಲಾ ಯಲಬುರ್ಗಾ ತಾಲೂಕಿನ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದ್ದು, ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ. ಜನವರಿ 29 ಬೆಳಗ್ಗೆ ಘಟನೆ ನಡೆದಿದ್ದು, ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. 
Post a Comment

Post a Comment