-->
Bookmark

Sindhanur : ಹಾಡಹಗಲೇ ಕತ್ತುಕೊಯ್ದು ವಿದ್ಯಾರ್ಥಿನಿ ಕೊಲೆ

Sindhanur : ಹಾಡಹಗಲೇ ಕತ್ತುಕೊಯ್ದು ವಿದ್ಯಾರ್ಥಿನಿ ಕೊಲೆ

Sindhanur : Student strangled to death in broad daylight

ಸಿಂಧನೂರು : (Jan_30_2025)

ಲಿಂಗಸುಗೂರು ಪಟ್ಟಣದ ಶಿಫಾ ಅಬ್ದುಲ್ ವಾಹೀದ್ (24) ಹತ್ಯೆಯಾದ ವಿದ್ಯಾರ್ಥಿನಿ. ಲಿಂಗಸುಗೂರು ಮೂಲದ ಟೈಲ್ಸ್ ಅಳವಡಿಸುವ ಕೆಲಸ ಮಾಡುತ್ತಿದ್ದ ಕಾರ್ಮಿಕ ಮುಬಿನ್ ಯುವತಿಯ ಕೊಲೆ ಮಾಡಿದ್ದಾನೆ.

ಶಿಫಾ, ಗುರುವಾರ ಬೆಳಿಗ್ಗೆ 9 ಗಂಟೆಗೆ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಲಿಂಗಸುಗೂರಿನಿಂದ ಸಿಂಧನೂರಿಗೆ ಕಾಲೇಜಿಗೆ ಬಂದಿದ್ದಳು. ಆರೋಪಿ ಬೈಕ್ ಮೇಲೆ ಶಿಫಾಳನ್ನು ಹಿಂಬಾಲಿಸಿಕೊಂಡು ಬಂದಿದ್ದ. ಆರೋಪಿಯು ನಿನ್ನ ಹತ್ತಿರ ಮಹತ್ವದ ವಿಷಯ ಮಾತನಾಡುವುದಿದೆ ಎಂದು ಕರೆದುಕೊಂಡು ಕಾಲೇಜು ಹತ್ತಿರದ ಗೌತಮ ಲೇಔಟ್‌ಗೆ ಹೋಗಿದ್ದಾನೆ. ಇಬ್ಬರ ನಡೆಯುವೆಯೂ ಮಾತುಕತೆ ನಡೆದ ನಂತರ ಕುಪಿತಗೊಂಡ ಯುವಕ ತನ್ನೊಂದಿಗೆ ತಂದಿದ್ದ ಚಾಕುವಿನಿಂದ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಡಿವೈಎಸ್‌ಪಿ ಬಿ.ಎಸ್‌. ತಳವಾರ, ಗ್ರಾಮೀಣ ಠಾಣೆಯ ಸಿಪಿಐ ವೀರಾರೆಡ್ಡಿ, ಬಳಗಾನೂರು ಪಿಎಸ್‌ಐ ಯರಿಯಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿ ಯುವತಿ ಕೊಲೆ ಮಾಡಿದ ನಂತರ ಲಿಂಗಸುಗೂರು ಠಾಣೆಗೆ ತೆರಳಿ ಶರಣಾಗಿದ್ದಾನೆ.

ಯುವತಿಯ ಪಾಲಕರು, ಸಂಬಂಧಿಕರು ಸ್ಥಳಕ್ಕೆ ಬಂದು ಶವ ನೋಡಿ ಕಣ್ಣೀರಿಟ್ಟರು. ನಂತರ ಶವವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
Post a Comment

Post a Comment