-->
Bookmark

Gajendragad : ರೈತ ಆತ್ಮಹತ್ಯೆ ವಿಧವಾ ವೇತನಕ್ಕೆ ಬ್ರೇಕ್ : ಲಕ್ಷ್ಮವ್ವ ಚವ್ಹಾಣ್ ಆರೋಪ

Gajendragad : ರೈತ ಆತ್ಮಹತ್ಯೆ ವಿಧವಾ ವೇತನಕ್ಕೆ ಬ್ರೇಕ್ : ಲಕ್ಷ್ಮವ್ವ ಚವ್ಹಾಣ್ ಆರೋಪ 

ತಹಶೀಲ್ದಾರ್ ಸಿಬ್ಬಂದಿಗಳ‌ ಹಾರಿಕೆ ಉತ್ತರಕ್ಕೆ ಬೇಸತ್ತ ಫಲಾನುಭವಿ 

ಸಮಸ್ಯೆ ಬಗೆಹರಿಸಲು ತಹಶೀಲ್ದಾರ್ ಕಿರಣಕುಮಾರ್ ಅವರಿಗೆ ಕಿರಾ ನ್ಯೂಸ್ ಕನ್ನಡದ ಮೂಲಕ ಮನವಿ 

ಪಿಂಚಣಿ ನೀಡುವಂತೆ ಎಸ್.ಎಫ್.ಐ ಮುಖಂಡ ಚಂದ್ರು ರಾಠೋಡ್ ಒತ್ತಾಯ

ಗಜೇಂದ್ರಗಡ : (Jan_09_2025)

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೆಣಚಮಟ್ಟಿ ಗ್ರಾಮದ ಶ್ರೀಮತಿ ಲಕ್ಷ್ಮವ್ವ ಸೋಮಶೇಖರ ಚವ್ಹಾಣ ಎಂಬುವವರ ರೈತ ಆತ್ಮಹತ್ಯೆ ನಿರ್ಗತಿಕ ವಿಧವಾ ವೇತನ ಸ್ಥಗಿತವಾಗಿದೆ. ರೈತ ಆತ್ಮಹತ್ಯೆ ನಿರ್ಗತಿಕ ವಿಧವಾ ವೇತನವನ್ನ ನಿಲ್ಲಿಸಿ, ಈಗ ವಿಧವಾ ವೇತನ ಮಾತ್ರ ಮಂಜೂರಾತಿ ಮಾಡುತ್ತೇವೆ ಎನ್ನುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನೂ, 2019 ರಲ್ಲೆ ಪತಿ ಮರಣ ಹೊಂದಿದ್ದಾರೆ. 19 ಡಿಸೆಂಬರ್ 2024 ರಲ್ಲಿ ಅರ್ಜಿಯೂ ಸಲ್ಲಿಸಲಾಗಿದೆ. ಈಗ ತಹಶೀಲ್ದಾರ್ ಕಚೇರಿಗೆ ತೆರಳಿ ಕೇಳಿದರೆ ಗಿರಿಜಾ ಡಾಣಕಶೀರೂರ್ ಎಂಬುವವರು ರಜೆಯ ಮೇಲೆ ತೆರಳಿದ್ದಾರೆ. ಇವರ ಕೆಲಸವನ್ನ ಅಲ್ಲಿನ ಸಿಬ್ಬಂದಿಯಾದ ಸೌಮ್ಯಾ ಎಂಬುವವರಿಗೆ ಹೇಳಿ ತೆರಳಿದ್ದಾರೆ. ಆದ್ರೆ, ಸೌಮ್ಯಾ ಎಂಬ ಸಿಬ್ಬಂದಿಗೆ application ಹಾಕಲು ಬರುವುದಿಲ್ಲ.‌ ಅವರಿಗೆ ಕೆಲಸ ಗೊತ್ತಿಲ್ಲ ಎಂದು ಫಲಾನುಭವಿಗೆ ಹೇಳಿದ್ದಾರೆ. ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಕಚೇರಿಯಲ್ಲಿ ಕಾಲ ಹರಣ ಮಾಡುತ್ತಾರೆ. ಜೊತೆಗೆ ನೆಪ ಹೇಳಿ ಬಡವರೊಂದಿಗೆ ಚಲ್ಲಾಟವಾಡುತ್ತಾರೆ ಎಂಬ ಆರೋಪವೂ ಕೇಳಿ ಬಂದಿದೆ. ಇದೆಲ್ಲವೂ ತಹಶೀಲ್ದಾರ್ ಕಿರಣಕುಮಾರ್ ಅವರ ಗಮನಕ್ಕೆ ತಂದು ಸಮಸ್ಯೆಯನ್ನ ಶೀಘ್ರವಾಗಿ ಪರಿಹರಿಸಬೇಕೆಂದು ಫಲಾನುಭವಿ ಲಕ್ಷ್ಮವ್ವ ಚವ್ಹಾಣ್ ಕಿರಾ ನ್ಯೂಸ್ ಕನ್ನಡದ ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಎಸ್.ಎಫ್.ಐ ಮುಂಖಡ ಚಂದ್ರು ರಾಠೋಡ್ ಸಹ ಮಹಿಳೆಗೆ ವಿಧವಾ ವೇತನ ನೀಡುವಂತೆ ಒತ್ತಾಯಿಸಿದ್ದಾರೆ. 
Post a Comment

Post a Comment