-->
Bookmark

Gajendragad : ಕಾಟಾಚಾರಕ್ಕೆ ಜಿಲ್ಲಾ ಸಮ್ಮೇಳನ : ಗಣೇಶ್ ಗುಗಲೋತ್ತರ್ ಆರೋಪ

Gajendragad : ಕಾಟಾಚಾರಕ್ಕೆ ಜಿಲ್ಲಾ ಸಮ್ಮೇಳನ : ಗಣೇಶ್ ಗುಗಲೋತ್ತರ್ ಆರೋಪ 

ಸಂಘಟನೆಗಳಿಗೆ, ಸಾಹಿತ್ಯಾಸಕ್ತರಿಗೆ ಆಹ್ವಾನಿಸದಿರುವುದು ತಪ್ಪು

ತಾಲೂಕು ಸಮಿತಿ ರಚಿಸದೆ ಸಮ್ಮೇಳನಕ್ಕೆ ತಯಾರಿ 

ಗಜೇಂದ್ರಗಡ : (Jan_08_2025)

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮ್ಮೇಳನಕ್ಕೆ ಆಹ್ವಾನಿಸಿಲ್ಲ. ಕನ್ನಡ ಪರ ಸಂಘಟನೆಗಳಿಗೆ, ಸಾಹಿತ್ಯಾಸಕ್ತರಿಗೆ, ಹೋರಾಟಗಾರಿಗೆ ಕಸಾಪ ಪೂರ್ವ ಭಾವಿ ಸಭೆಗೆ ಆಹ್ವಾನಿಸದೇ ಇರುವುದನ್ನ ಕರ್ನಾಟಕ ಜನಪರ ಸೇವಾ ಸಮಿತಿ ರಾಜ್ಯಾಧ್ಯಕ್ಷ ಗಣೇಶ್ ಗುಗಲೋತ್ತರ್ ವಿರೋಧ ವ್ಯಕ್ತಪಡಿಸಿದ್ದಾರೆ. ಕಿರಾ ನ್ಯೂಸ್ ಕನ್ನಡ ಸಂಪಾದಕರಾದ ಕೃಷ್ಣ ರಾಠೋಡ್ ಅವರೊಂದಿಗೆ ಮಾತನಾಡಿದ ಅವರು, ಕೇವಲ ಸಂಘಟನೆಗಳಿಗೆ ಮಾತ್ರವಲ್ಲ. ಸಾಹಿತ್ಯಾಸಕ್ತರಿಗೆ, ಹೋರಾಟಗಾರರಿಗೆ ಮಾಡಿದ ಅವಮಾನ ಎಂದು ಹೇಳಿದರು. ಇದು ಮೊದಲೆನಲ್ಲ. ಬದಲಾಗಿ ಈ ಹಿಂದೆಯೂ ಸಹ ಅವರಿಗೆ ಬೇಕಾದವರಿಗೆ ಆಹ್ವಾನಿಸುತ್ತಾರೆ. ಉಳಿದವರಿಗೆ ಕಡೆಗಣಿಸುತ್ತಾರೆ. ಆಹ್ವಾನಿಸಿಯೂ, ಸಭೆಗೆ ಹೋಗದಿದ್ದರೇ, ಅದು ತಪ್ಪು. ಆದ್ರೆ, ಆಹ್ವಾನವೇ ಬಂದಿಲ್ಲ. ಈ ಪ್ರವೃತ್ತಿ ಬದಲಾಗಬೇಕು ಎಂದು ಗಣೇಶ್ ಗುಗಲೋತ್ತರ್ ತಿಳಿಸಿದರು. 

ಪಟ್ಟಣದಲ್ಲಿ ಜನವರಿ 19 ರಿಂದ 21ರವರೆಗೆ ಜರಗುವ ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಜರುಗಲು ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಪರ ಸಂಘಟನೆಗಳ ಹೋರಾಟಗಾರರು, ಕಾರಣರು. ಆದ್ರೆ, ಪೂರ್ವಭಾವಿ ಸಭೆಗಳು ಅತ್ಯಂತ ನಿರಸವಾಗಿ ಜರುಗಿದೆ. ನಿರಸವಾಗಿ ನಡೆದ ಸಭೆಗಳನ್ನ ನೋಡಿದಾಗ ಕೆಲವರ ಹಿಡಿತದಲ್ಲಿರುವ ಈ ಕಸಾಪ ತಾಲೂಕು ಮತ್ತು ಜಿಲ್ಲಾ ಘಟಕಗಳು ತಮಗೆ ಬೇಕಾದವರೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಹಲವಾರು ಕನ್ನಡಪರ ಸಂಘಟನೆಗಳ ಹೋರಾಟಗಾರರು ಸಾಹಿತಿಗಳು ಆಕ್ರೋಶ ಹೊರಹಾಕಿದ್ದಾರೆ.‌ ಸಾಹಿತ್ಯ ಸಮ್ಮೇಳನ ಕುರಿತು ಕೇವಲ ರಾಜಕೀಯ ವ್ಯಕ್ತಿಗಳ ಹೇಳಿಕೆಗಳು ಪತ್ರಿಕೆಯಲ್ಲಿ ಬರುವುದನ್ನು ಕಾಣುತ್ತಿದ್ದೇವೆ.
ಸಾಹಿತ್ಯ ಸಮ್ಮೇಳನ ಸಿದ್ಧತೆ ಕುರಿತು ಸಾಹಿತಿಗಳು, ಲೇಖಕರು, ಸಾಹಿತ್ಯಾಸಕ್ತರು, ಸಂಘಟನೆಕಾರರು, ಕನ್ನಡಪರ ಹೋರಾಟಗಾರರ ಹೇಳಿಕೆಗಳು ಬಂದಿಲ್ಲ. ಕನ್ನಡ ಉಳಿಸಿ, ಬೆಳೆಸುವಲ್ಲಿ ಗಜೇಂದ್ರಗಡದ ಹಲವಾರು ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿವೆ. ಕನ್ನಡಕ್ಕೆ ಅನ್ಯಾಯವಾದಾಗ ಹೋರಾಟಗಾರರು ಒಂದಾಗಿದ್ದರು. ಕನ್ನಡ ಉಳಿವಿಗಾಗಿ ಶ್ರಮಿಸಿದವರನ್ನ ಗಡೆಗಣನೆ ಮಾಡಿದ್ದಾರೆ ಎಂಬುದು ಕೇವಲ ಆರೋಪವಲ್ಲ. ಬದಲಾಗಿ ಕಣ್ಮುಂದೆ ಕಾಣುತ್ತಿರುವ ನಿಜ ಸಂಗತಿಯಾಗಿದೆ. ಹಲವಾರು ಸಂಘಟನೆಗಳಿದ್ದು, ಅವರನ್ನ ಆಹ್ವಾನಿಸದಿರುವುದು ತಾಲೂಕಾಧ್ಯಕ್ಷರಿಗೆ ಶೋಭೆ ತರುವುದಿಲ್ಲ. ಅಲ್ಲದೇ, ಜಿಲ್ಲಾಧ್ಯಕ್ಷರು ಸಹ ಸಂಘಟನೆಗಳನ್ನ ಕಡೆಗಣನೆ ಮಾಡಿದ್ದಾರೆ. ತಾಲೂಕಾಧ್ಯಕ್ಷರಿಗಂತು ಜವಾಬ್ದಾರಿ ಇಲ್ಲ. ಜಿಲ್ಲಾಧ್ಯಕ್ಷರು ಸಹ ಅದೇ ಸಾಲಿಗೆ ಸೇರಿದ್ದಾರೆ ಎಂಬ ಆರೋಪವೂ ಇದೆ. 

ಇದೆಲ್ಲ ಒಂದೆಡೆಯಾದ್ರೆ, ಮತ್ತೊಂದೆಡೆ, ಜಿಲ್ಲಾ ಸಮ್ಮೇಳನಕ್ಕೆ ತಾಲೂಕು ಸಮಿತಿಗಳನ್ನ ರಚಿಸಿಲ್ಲ. ಪೂರ್ವ ಭಾವಿ ಸಭೆ ಬಗ್ಗೆ ಆಜೀವ ಸದಸ್ಯರಿಗೆ ಮಾಹಿತಿ ಇಲ್ಲ ಎಂದು ಕಿರಾ ನ್ಯೂಸ್ ಕನ್ನಡಕ್ಕೆ ಆಜೀವ ಸದಸ್ಯರು ಮಾಹಿತಿ ನೀಡಿದ್ದಾರೆ. 

ಜಿಲ್ಲಾ ಸಮ್ಮೇಳನ ಮಾಡಬೇಕಾಗಿದೆ ಹೀಗಾಗಿ ಮಾಡುತ್ತಿದ್ದಾರೆ. ಜಿಲ್ಲಾ ಸಮ್ಮೇಳನ ಯಶಸ್ವಿಯಾಗುವುದು ಇವರಿಗೆ ಬೇಡವಾಗಿದೆ. ಕಾಟಾಚಾರಕ್ಕೆ ಜಿಲ್ಲಾ ಸಮ್ಮೇಳನ ಮಾಡುತ್ತಿರುವುದು ನೋವಿನ ಸಂಗತಿ ಎನ್ನುತ್ತಾರೆ ಸಂಘಟನೆ ಅಧ್ಯಕ್ಷರು, ಕನ್ನಡಪರ ಹೋರಾಟಗಾರರು, ಸಾಹಿತ್ಯಾಸಕ್ತರು. ಜೊತೆಗೆ ಕೆಲ ಪತ್ರಕರ್ತರಿಗೂ ಆಹ್ವಾನಿಸಿಲ್ಲ. ಪತ್ರಲರ್ತರಿಗೂ watsupನಲ್ಲೆ ಆಹ್ವಾನ ನೀಡಿದ್ದಾರೆ. ಇದೆಲ್ಲವನ್ನ ನೋಡಿದರೇ, ಜಿಲ್ಲಾ ಸಮ್ಮೇಳನ ಯಶಸ್ವಿಯಾಗುವುದಾದರು ಹೇಗೆ ಎಂಬುದೆ ಯಕ್ಷ ಪ್ರಶ್ನೆಯಾಗಿದೆ.
Post a Comment

Post a Comment