ಗಜೇಂದ್ರಗಡ : (Jan_30_2025)
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಗಿಡ್ನಂದಿ ಇನ್ನಿಲ್ಲ. ಗುರುವಾರ ಬೆಳಗ್ಗೆ ಅವರು ಇಹ ಲೋಕ ತ್ಯಜಿಸಿದ್ದಾರೆ. ಶಿವಾನಂದ್ ಗಿಡ್ನಂದಿ ಸಾವು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾಗದ ನಷ್ಟ. ಶಿವಾನಂದ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕಾಲಕಾಲೇಶ್ವರ ಕರುಣಿಸಲಿ ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರಯ್ಯ ಸೋಮನಕಟ್ಟಿಮಠ ಹೇಳಿದರು. ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ್, ತಾಲೂಕಾಧ್ಯಕ್ಷ ಎಪಿಗಾಣಗೇರ್, ಮುಖಂಡರಾದ ಸಿದ್ದಪ್ಪ ಬಂಡಿ, ಪ್ರಶಾಂತ್ ರಾಠೋಡ್, ಮಂಜುಳಾ ರೇವಡಿ ಸಂತಾಪ ಸೂಚಿಸಿದ್ದಾರೆ.
1 comment