-->
Bookmark

Gajendragad : ಸಾಧಕರಿಗೆ ಸನ್ಮಾನಿಸಿ ಜನಮನಗೆದ್ದ ಮಂಜುನಾಥ್ ರಾಠೋಡ್

Gajendragad : ಸಾಧಕರಿಗೆ ಸನ್ಮಾನಿಸಿ ಜನಮನಗೆದ್ದ ಮಂಜುನಾಥ್ ರಾಠೋಡ್

ಗಜೇಂದ್ರಗಡ : (Jan_14_2025)
ಹೆಮ್ಮೆಯ ಸಾಧಕರಿಗೆ ಗೌರವಪೂರ್ವಕ ಸತ್ಕಾರ

ನಿಮ್ಮ ನೆಚ್ಚಿನ 'ಗದಗವಾಣಿ ದಿನಪತ್ರಿಕೆ ಮತ್ತು ಟಿವಿಚಾನಲ್"  ಮಾಧ್ಯಮರಂಗದಲ್ಲಿ ತನ್ನ ಪ್ರಯಾಣದ ಮೂರನೇ ವರ್ಷ ಪೂರ್ತಿಗೊಳಿಸಿ ನಾಲ್ಕನೇಯ ವರ್ಷದಡಿಗೆ ದಾಪುಗಾಲು ಇಟ್ಟಿದೆ. ಅಪಾರ ಸಂಭ್ರಮದ ಈ ಸಂದರ್ಭದಲ್ಲಿ 'ಗದಗವಾಣಿ' ತಂಡದ ಪರವಾಗಿ ಜಗತ್ತಿನೆಲ್ಲೆಡೆಯ ನಮ್ಮ ಸಮಸ್ತ ಓದುಗ ಬಳಗಕ್ಕೆ ನಮ್ಮನ್ನು ಪರೋಕ್ಷ ಮತ್ತು ಅಪರೋಕ್ಷವಾಗಿ ಬೆಂಬಲಿಸುತ್ತಿರುವ ನಮ್ಮೆಲ್ಲ ಹಿತೈಷಿಗಳಿಗೆ ಮತ್ತು ವಿಶೇಷವಾಗಿ ಗದಗವಾಣಿ ಜೊತೆ ವಿಶೇಷ ಪ್ರೀತಿ, ವಿಶ್ವಾಸ ಮತ್ತು ಅಭಿಮಾನದ ಭಾವನಾತ್ಮಕ ನಂಟು ಬೆಸೆದುಕೊಂಡಿರುವ ಅಪಾರ ಸಂಖ್ಯೆಯ ನಮ್ಮ ಸಕ್ರಿಯ ಜಾಹಿರಾತುದಾರರಿಗೆ ಬೆಂಬಲಿಗರು ಹಾಗೂ ಅಭಿಮಾನಿ ಬಳಗಕ್ಕೆ, ಮನದಾಳದ ಅಭಿನಂದನೆಗಳು.

ಗದಗ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ಜಿಲ್ಲೆಯಾಗಿದೆ. ಇಲ್ಲಿ ಸಂಗೀತದ ನಿನಾದ, ಸಾಹಿತ್ಯದ ಸೌರಭ, ಕಲೆಯ ಕಲರವ, ಜನಪದದ ಜೀವಂತಿಕೆ, ಸಾಮರಸ್ಯದ ಸೌಹಾರ್ದತೆ ಸಂಸ್ಕೃತಿ ಸಂಗಮವನ್ನು ಮೈಗೂಡಿಸಿಕೊಂಡು ತನ್ನ ವಿಶಿಷ್ಟತೆಯನ್ನು ಮೆರೆದಿದೆ . "ಗದಗವಾಣಿ" ಹಲವು ವಿಶೇಷತೆಗಳ ಪೈಕಿ ಅದರ ಓದುಗರು ಪದೇ ಪದೇ ಗುರುತಿಸಿ ಪ್ರಶಂಸಿಸಿರುವ ವಿಶೇಷತೆಯೇನೆಂದರೆ  ಇದು ಯಾವುದೇ ಖಾಸಗಿ ಉದ್ಯಮಿ ಕುಟುಂಬದ ಪತ್ರಿಕೆಯಲ್ಲಿ ಯಾವುದೇ ನಿರ್ದಿಷ್ಟ ಜಾತಿ, ಧರ್ಮ, ಪಂಥ, ಪಕ್ಷ ಅಥವಾ ಸಂಘಟನೆಯ ಮುಖವಾಣಿಯಲ್ಲ, ವೃತ್ತಿ ನಿರತ ಪತ್ರಕರ್ತರು ಸೇರಿ ಕಟ್ಟಿದ ಸುದ್ದಿ ಸೌರಭದ ಕಣಜ ಗದಗವಾಣಿ.  ವಿಶ್ವಗುರು ಬಸವಣ್ಣನವರ ವಿಚಾರಧಾರೆಯಿಂದ ಪ್ರೇರಣೆಗೊಂಡು, ಸಮಾನತೆಯ ಸಮಾಜ ಕಟ್ಟುವ ಉದ್ದೇಶದಿಂದ, ಕೋಮು ಸಾಮರಸ್ಯ ನೆಲೆಗೊಆಸುವ ನಿಟ್ಟಿನಲ್ಲಿ, ಭವ್ಯ ಸಂಸ್ಕೃತಿಯನ್ನು ಉತ್ತರಿಸಲು ಸಮಾನ ಮನಸ್ಕರುಗಳು ನಡೆಸುವ ಎಲ್ಲ ಪ್ರಯತ್ನಗಳಿಗೆ ಪೂರಕವಾಗಿ "ಗದಗವಾಣಿ" ಮಾಧ್ಯಮ ಸಂಸ್ಥೆ ಸ್ಥಾಪಿಸಲಾಗಿದೆ.  ಸತ್ಯನಿಷ್ಠ ನ್ಯಾಯವಿಷ್ಯ. ಜನಪರ, ಸ್ವತಂತ್ರ ಮತ್ತು ನಿಷ್ಪಕ್ಷ ಪತ್ರಿಕೋದ್ಯಮದ ಕನಸುಹೊತ್ತು ರಂಗಕ್ಕೆ ಬಂದ ಈ ಪತ್ರಿಕ ಇದೀಗ ತನ್ನ ಮೂರನೇ ವರ್ಷದಲ್ಲೂ ಆ ತನ್ನ ಬದ್ಧತೆಯನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ. ಅಷ್ಟೇ ಅಲ್ಲ ತಾನು ನೆಚ್ಚಿಕೊಂಡಿರುವ ದಿಕ್ಕು, ಮತ್ತು ದಾರಿಯಲ್ಲೇ ಬೆಳೆಯುತ್ತಾ, ಬಲಗೊಳ್ಳುತ್ತಾ ಮುನ್ನಡೆಯುತ್ತಿದೆ, ಸಮಾಜದ ಒಂದು ಗಣ್ಯ ಭಾಗವನ್ನು ಆ ದಿಕ್ಕಿನಲ್ಲಿ ಮುನ್ನಡೆಸುತ್ತಿದೆ.

ಹಾಗೆಯೇ  ಸದಾ ಹೊಸತನಕ್ಕೆ ತುಡಿಯುವ "ಗದಗವಾಣಿ" ನಿರಂತರ ಪ್ರಯೋಗಶೀಲತೆ ಜೀವಂತಿಕೆಯ ಲಕ್ಷಣ ಎಂಬ ನಂಬಿಕೆಯAತೆ ತನ್ನ ಮೂರನೇ ವರ್ಷ ವಾರ್ಷಿಕೋತ್ಸವದಲ್ಲಿ ಕನ್ನಡ ದೈನಿಕ ಗದಗವಾಣಿ ಮತ್ತು ಗದಗವಾಣಿ ೨೪*೭ ಕನ್ನಡ ನ್ಯೂಸ್ ಚಾನೆಲ್ ಅನ್ನು ಹೊಂದಿರುವ ಮಾಧ್ಯಮ ಸಮೂಹವು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವವರಿಗೆ " ಕರುನಾಡು ಕಾಯಕ ಸಮ್ಮಾನ್" ಗದಗವಾಣಿ ಮಾಧ್ಯಮರತ್ನ, ಕರುನಾಡ ಕಣ್ಮಣಿ, ಕ್ರಾಂತಿಸೂರ್ಯ ಸೇವಾರತ್ನ ಎಂಬ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಪ್ರಶಸ್ತಿಯನ್ನು ಭಾಷೆ, ಶಿಕ್ಷಣ, ಕ್ರೀಡೆ, ಸಹಕಾರಿ, ಕಲೆ ಮತ್ತು ಸಂಸ್ಕೃತಿ, ಜಾನಪದ, ಸಮಾಜಕಾರ್ಯ ಮತ್ತು ಸಮಾಜದ ಬಡವರು, ದೀನದಲಿತರು ಮತ್ತು ಇತರ ದುರ್ಬಲ ವರ್ಗಗಳ ಮೇಲೆತ್ತುವಲ್ಲಿ ಕೊಡುಗೆ ನೀಡುವಂತಹ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಸಾಧಕರು ಮತ್ತು ಸಂಸ್ಥೆಗಳಿಗೆ ನೀಡಲಾಗುತ್ತದೆ. ವಿವಿಧ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದವರು ಮತ್ತು ಸಾಧಕರನ್ನು ಗುರುತಿಸುವುದು ಪ್ರಶಸ್ತಿಯ ಮೌಲ್ಯವಾಗಿದೆ.

ಗದಗವಾಣಿ ಅಂತಹ ನಿಸ್ವಾರ್ಥ ವ್ಯಕ್ತಿಗಳನ್ನು ಗುರುತಿಸಲು ಪ್ರಯತ್ನಿಸುತ್ತದೆ, ಯಾವುದೇ ಮನ್ನಣೆ ಅಥವಾ ಪುರಸ್ಕಾರಗಳ ನಿರೀಕ್ಷೆಯಿಲ್ಲದೆ ಮತ್ತು ಆಯಾ ಕ್ಷೇತ್ರಗಳಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರುವ ಮೂಲಕ ಅವರು ತೊಡಗಿಸಿಕೊಂಡಿರುವ ಕ್ಷೇತ್ರಗಳ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಕೆಲಸದ ಪ್ರದೇಶ. ಜವಾಬ್ದಾರಿಯುತ ಮಾಧ್ಯಮ ಸಮೂಹವಾಗಿ, ಈ ಉದಾತ್ತ ವ್ಯಕ್ತಿಗಳ ಸಾಧನೆಯನ್ನು ಗುರುತಿಸುವುದು, ಪಾಲಿಸುವುದು ಮತ್ತು ಪ್ರಚಾರ ಮಾಡುವುದು ನಮ್ಮ ಕರ್ತವ್ಯ ಎಂದು ನಾವು ಭಾವಿಸಿದ್ದೇವೆ. ಈ ಚಿಂತನೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ಈ ಪ್ರಶಸ್ತಿಗಳನ್ನು ಸ್ಥಾಪಿಸಿದ್ದೇವೆ. ಆ ಸಾಧಕರ ಸಾಧನೆಯನ್ನು ಈ ವಿಶೇಷಾಂಕದಲ್ಲಿ ವಿಸ್ತçೃತವಾಗಿ ಸೆರೆಹಿಡಿಯಲಾಗಿದೆ.

"ಆಧುನಿಕ ಭಾರತದ ಹಲವು ಬದಲಾವಣೆಗಳಿಗೆ ಹಾಗೂ ಪ್ರಗತಿಗೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕವೇ ಸಾಕ್ಷಿಯಾಗಿದೆ. ಈ ಸಾಧನೆಯ ಹಾದಿಯಲ್ಲಿನ ಆ ಭಾಗದ ದಾಪುಗಾಲಿಗೆ ಜನರೂ ಕಾರಣಕರ್ತರಾಗಿದ್ದಾರೆ. ಇತಹ ಜನರ ರಕ್ತದಲ್ಲಿಯೇ ಸ್ನೇಹಪರ ಹಾಗೂ ಸಾಹಸ ಪ್ರವೃತ್ತಿ ಇದೆ.  ಈ ಸಾಹಸ ಪ್ರವೃತ್ತಿಯಿಂದಲೇ ಇಲ್ಲಿನ ಹಲವರು ಸಾಧನೆಯ ಶಿಖರವೇರಿದ್ದಾರೆ. ಕಷ್ಟಕಾರ್ಪಣ್ಯಗಳ ಹಿನ್ನೆಲೆಯಿಂದ ಬಂದರೂ ಇಂದು ಸಾಧನೆಯ ಶಿಖರವೇರಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಆದರೂ ಇವರಲ್ಲಿ ಹಲವರು ಇನ್ನೂ ಎಲೆಮರೆಯ ಹೂಗಳು, ಕಾಯಿಗಳು. ಇವರನ್ನು ನಾಡಿಗೆ ಪರಿಚಯಿಸುವ ಈ ಹೊತ್ತಗೆಯನ್ನು ಸಂತೋಷದಿAದ ನಿಮ್ಮ ಕೈಗಿಡುತ್ತಿದ್ದೇವೆ. ಇವರ ಸಾಧನೆ ಓದುಗರಿಗೆ ಸ್ಫೂರ್ತಿಯ ಸೆಲೆಯಾದರೆ ನಮ್ಮ ಶ್ರಮ ಸಾರ್ಥಕ..!

ನಾಡಿನ ಎಲ್ಲಾ ಓದುಗರಿಗೂ-ವೀಕ್ಷಕರಿಗೂ ಹಾಗೂ ಜಾಹಿರಾತುದಾರರಿಗೆ ೨೦೨೫ ಹೊಸವರ್ಷ ಹಾಗೂ ಮಕರ ಸಂಕ್ರಾAತಿಯ  ಹಾರ್ದಿಕ ಶುಭಾಶಯಗಳು

- ವೀರಣ್ಣ ಈಶಪ್ಪ ಸಂಗಳದಸಹ ಸಂಪಾದಕರು, ಗದಗವಾಣಿ

Post a Comment

Post a Comment