-->
Bookmark

Gajendragad : ಪಟ್ಟಣದಲ್ಲಿ ರಾಜ್ಯವೇ ಬೆಚ್ಚಿ ಬೀಳಿಸುವ ಲವ್ ಜೀಹಾದ್ ಪ್ರಕರಣ...?

Gajendragad : ಪಟ್ಟಣದಲ್ಲಿ ರಾಜ್ಯವೇ ಬೆಚ್ಚಿ ಬೀಳಿಸುವ ಲವ್ ಜೀಹಾದ್ ಪ್ರಕರಣ...?
ಯುವತಿ ಆತ್ಮಹತ್ಯೆ: ಇಬ್ಬರ ಮೇಲೆ ಶಂಕೆ...?
ಲವ್ ಜೀಹಾದ್ ಪ್ರಕರಣ, ರಾಜ್ಯಾದ್ಯಂತ ಹೋರಾಟ : ಸಂಜಯ್ ಜೋಶಿ 
ಗಜೇಂದ್ರಗಡ : (Jan_16_2025)
ರಾಜ್ಯವೇ ಬೆಚ್ಚಿ ಬಿಳಿಸುವ ಪ್ರಕರಣ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದಿದೆ. ಶಿಕ್ಷಕಿ ಅನ್ನಪೂರ್ಣ ಅವರ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಲವ್ ಜೀಹಾದ್ ಪ್ರಕರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರತಿಷ್ಟಿತ ಜಗದಂಬಾ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಖುಷಿ ಲಕ್ಷ್ಮಣಸಾ ರಂಗ್ರೇಜ್ ಮತ್ತು ರೇಣುಕಾ ರಂಗ್ರೇಜ್ ಅವರ ಪುತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಜನವರಿ 6.30 ರಿಂದ 7 ಗಂಟೆ ಸಮಯದಲ್ಲಿ ಬಣಗಾರ್ ಓಣಿಯ ಶಂಕರಲಿಂಗ ದೇವಸ್ಥಾನದ ಬಳಿ ತಮ್ಮ ಮನೆಯ ಮಹಡಿಯಲ್ಲಿ‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌
ನಮ್ಮ ಮಗಳ ಸಾವು ಸಂಶಯಾಸ್ಪದವಾಗಿದ್ದು, ಇಬ್ಬರ ಮೇಲೆ ಅನುಮಾನ ಇದೆ ಎಂದು ಎಫ್.ಐ.ಆರ್. ದಾಖಲಾಗಿದೆ.‌ ಸಂಜೆ ಘಟನೆ ನಡೆಯುತ್ತಿದ್ದಂತೆ, ಹಿಂದೂಪರ ಸಂಘಟನೆಗಳು ಪೊಲೀಸ್ ಠಾಣೆಯ ಎದುರು ಕೆಲಕಾಲ ಜಮಾಯಿಸಿದ್ದರು. ಇದಾದ ಬಳಿಕ ಖುಷಿ ಪಾಲಕರಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು. ಇದು ಲವ್ ಜೀಹಾದ್ ಪ್ರಕರಣವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿದ್ದಾರೆ. ಖುಷಿ ತಂದೆ ಖಾಸಗಿ ಪತ್ರಿಕೆಯೊಂದರ ವರದಿಗಾರ ಎಂದು ತಿಳಿದು ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲೆಡೆ ಲವ್ ಜೀಹಾದ್ ಪ್ರಕರಣಗಳು ಹೆಚ್ಚಾಗಿವೆ. ಹಿಂದೂಪರ ಸಂಘಟನೆಗಳು ಬೀದಿಗಿಳಿದು ರಾಜ್ಯಾದ್ಯಂತ ಹೋರಾಟ ನಡೆಸುವ ಅಗತ್ಯ ವಿದೆ. ಹಿಂದೂ ಹೆಣ್ಣು ಮಕ್ಕಳ ಬಲಿ ಪಡೆಯುವ ಪರಂಪರೆಗೆ ಕೊನೆಯಾವಾಗ ಎಂದು ಹೋರಾಟಗಾರ ಸಂಜಯ್ ಜೋಶಿ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಲವ್ ಜೀಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಹೋರಾಟ ನಡೆಯಲಿದೆ. ಪೊಲೀಸರು ಆರೋಪಿಗಳನ್ನ ಬಂಧಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೆ ಹೋರಾಟ ಮಾಡುತ್ತೇವೆ ಎಂದು ಸಂಜಯ್ ಜೋಶಿ ಹೇಳಿದ್ದಾರೆ.
Post a Comment

Post a Comment