-->
Bookmark

Gajendragad : ಎಸ್.ಎಂ.ಸೈಯದ್ ನಿಸ್ವಾರ್ಥ ಸೇವೆಗೆ ಜಿಲ್ಲಾಡಳಿತದಿಂದ‌ ಸನ್ಮಾನ

Gajendragad : ಎಸ್.ಎಂ.ಸೈಯದ್ ನಿಸ್ವಾರ್ಥ ಸೇವೆಗೆ ಜಿಲ್ಲಾಡಳಿತದಿಂದ‌ ಸನ್ಮಾನ

ಗಜೇಂದ್ರಗಡ : (Jan_25_2025)

ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಟ್ಟಣದ ವರದಿಗಾರ ಕಾನಿಪ‌ ನಿಕಟಪೂರ್ವ ಅಧ್ಯಕ್ಷ ಎಸ್.ಎಂ.ಸೈಯದ್ ಅವರಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಗುವುದು ಎಂದು ಜಿಲ್ಲಾ  ವಾರ್ತಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 

ಸೈಯದ್ ಅವರ ಬರವಣಿಗೆ ಚುರುಕಾಗಿದೆ. ಸಮಾಜ ಕಟ್ಟುವ ಕೆಲಸ ಮಾಡುವ ಇವರ ನಿಸ್ವಾರ್ಥ ಸೇವೆಯನ್ನ ಜಿಲ್ಲಾಡಳಿತದಿಂದ ಸನ್ಮಾನಿಸುತ್ತಿರುವುದು ಎಲ್ಲರಿಗೂ ಸಂತಸದ ವಿಷಯ. ಯುವ ಪತ್ರಕರ್ತರಿಗೆ ಮಾರ್ಗದರ್ಶನವಾಗಿರುವ ಸೈಯದ್ ಅವರ ಬರವಣಿಗೆ ಮೆಚ್ಚುವಂತದ್ದೆ.‌ ಇನ್ನೂ, ಸೈಯದ್ ಅವರಿಗೆ ಸನ್ಮಾನಿಸುತ್ತಿರುವುದನ್ನ ಹಲವು ಪತ್ರಕರ್ತರು ಶುಭಾಶಯ ತಿಳಿಸಿದ್ದಾರೆ. ಸೈಯದ್ ಅವರಿಗೆ ಕಿರಾ ನ್ಯೂಸ್ ಕನ್ನಡ ಸಂಪಾದಕರಿಂದಲೂ ಅಭಿನಂದನೆಗಳು. 
Post a Comment

Post a Comment