-->
Bookmark

Gajendragad : ಪಟ್ಟಣದಲ್ಲಿ ಬೇಂದ್ರೆ ಜನ್ಮದಿನ : ಅಜ್ಜನ ಹಾಡುಹಾಡಿ ನಮನ

Gajendragad : ಪಟ್ಟಣದಲ್ಲಿ ಬೇಂದ್ರೆ ಜನ್ಮದಿನ : ಅಜ್ಜನ ಹಾಡುಹಾಡಿ ನಮನ 

ಗಜೇಂದ್ರಗಡ : (01_Feb_2025)

ವರಕವಿ ದ.ರಾ.ಬೇಂದ್ರೆಯವರ ಜನ್ಮದಿನವನ್ನ ಪಟ್ಟಣದ ಸಾಹಿತಿ, ಗಜೇಂದ್ರಗಡದ ಬೇಂದ್ರೆ ಎಂದೆ ಕರೆಯಲ್ಪಡುವ ಶರಣಪ್ಪ ಬೇವಿನಕಟ್ಟಿ ಅವರ ನಿವಾಸದಲ್ಲಿ ಜನವರಿ 31 ರಂದು ಆಚರಿಸಲಾಯಿತು. 
ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ ತಾಲೂಕ ಘಟಕ ಗಜೇಂದ್ರಗಡ ಇವರ ನೇತೃತ್ವದಲ್ಲಿ ನಡೆಯಿತು. ಉಪನ್ಯಾಸಕರಾದ ಸುರೇಶ್ ಪತ್ತಾರ್ ಅವರು, ಬೇಂದ್ರೆ ಅಜ್ಜನವರ ಜೀವನ ಚರಿತ್ರೆ ಅನಾವರಣಗೊಳಿಸಿದರು. ಜೊತೆಗೆ ರಮೇಶ್ ನಾಯ್ಕರ್ ಸಹ ಉಪನ್ಯಾಸ ನೀಡಿದರು. 

ಸುರೇಸ್ ಮಹೇಂದ್ರಕರ್ 
ಬೇಂದ್ರೆ ರಚಿತ ಹಾಡುಗಳನ್ನ ಹಾಡಿ ದರಾ ಬೇಂದ್ರೆ ಅವರನ್ನ ನೆನೆದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹನಮಂತ ಭಜಂತ್ರಿ ಯಾವ ಯಾವ ಸಂಧರ್ಭದಲ್ಲಿ ಬೇಂದ್ರೆ ಹಾಡು ರಚಿಸಿದರು ಎಂಬುದನ್ನ ತಿಳಿಸುವ ಪ್ರಯತ್ನ ಮಾಡಿದರು. 

ಬಿ.ವಿ ಮುನವಳ್ಳಿ, ಕೆ.ನಿ ಸಂಗಟಿ ಸಹ ಮಾತನಾಡಿದರು. ಡಾ. ಮಹಾಂತೇಶ್ ಅಂಗಡಿ, ಕಾರ್ಯಕ್ರಮ ನಿರುಪಿಸಿದ್ರೆ,  ಸೋಮಶೇಖರ್ ಸಿ ಒಂದನಾರ್ಪಣೆ ಮಾಡಿದರು. 

ಕಾರ್ಯಕ್ರಮದಲ್ಲಿ ಶಂಕರ್ ಕಲ್ಲಿಗನೂರ್ .ಕೆ ಜಿ ಸಂಗಟಿ, ಎ.ಜಿ.ಬೂದಿಹಾಳ್, ಸೋಮಶೇಖರ್.ಸಿ, ಎಸ್ ಎಸ್ ನರೇಗಲ್, ಶರಣಪ್ಪ ಬೇವಿನಕಟ್ಟಿ,  ಡಾ.ಮಹಾಂತೇಶ ಅಂಗಡಿ, ಹನ‌ಮಂತ್ ಭಜಂತ್ರಿ,  ಉಪಸ್ಥಿತರಿದ್ದರು.
Post a Comment

Post a Comment