-->
Bookmark

Gajendragad : ಸಿ.ಬಿ.ಎಸ್.ಸಿ ಶಾಲೆಯ ಆಡಳಿತ ಮಂಡಳಿ ಶಾಲಾ ಸಿಬ್ಬಂದಿಗಳಿಂದ ಶ್ರದ್ಧಾಂಜಲಿ

Gajendragad : ಸಿ.ಬಿ.ಎಸ್.ಸಿ ಶಾಲೆಯ ಆಡಳಿತ ಮಂಡಳಿ ಶಾಲಾ ಸಿಬ್ಬಂದಿಗಳಿಂದ ಶ್ರದ್ಧಾಂಜಲಿ
ಗಜೇಂದ್ರಗಡ : (Jan_29_2025)
ತೋಂಟದಾರ್ಯ ಸಿ.ಬಿ.ಎಸ್.ಸಿ ಶಾಲೆಯ ವಿದ್ಯಾರ್ಥಿ ವೈಭವ್ ಮಠದ್ ಅವರಿಗೆ ಶಾಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಶಾಲೆಯಲ್ಲಿ ಅವರ ಭಾವಚಿತ್ರ ಹಾಕಿದ್ದು, ತೋಂಟದಾರ್ಯ ಕಾಲೇಜಿನ ಪ್ರಾಚಾರ್ಯರಾದ ಸಂಗಮೇಶ್ ಬಾಗೂರ್ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯ್ತು. 3 ನೇ ತರಗತಿಯಲ್ಲಿ ಓದುತ್ತಿದ್ದ ವೈಭವ್ ಅವರ ಕ್ಲಾಸಿನಲ್ಲೇ ಚುರುಕಾಗಿದ್ದ, ಹಾಗೂ ಓದಿನಲ್ಲಿ ಮುಂದೆ ಇದ್ದ ಎಂದು ಪ್ರಾಚಾರ್ಯರಾದ ಸಂಗಮೇಶ್ ಬಾಗೂರ್ ಸ್ಮರಿಸಿದರು. ಈ ದುರ್ಘಟನೆ ಅತೀವ ನೋವನ್ನುಂಟು ಮಾಡಿದೆ ಎಂದು ಗದ್ಗದಿತರಾದರು. 

ಮೌನಾಚರಣೆಯಲ್ಲಿ ಭಾಗವಹಿಸಿದ ಪ್ರಾ. ಸಂಗಮೇಶ್ ಬಾಗೂರ್, ಅಶೋಕ್ ಅಂಗಡಿ, ಬಸವರಾಜ್ ಗದ್ದಗೇರಿ, ಈರಣ್ಣ ಮಾಲಕಣ್ಣವರ್, ಶೃತಿ ನಾಡಕಟ್ಟಿನ್, ಪ್ರಶಾಂತ್ ಹಾರೋಗೇರಿ, ಅಭಿಲಾಶಾ ಗಂಜಿಹಾಳ, ಶ್ರೀದೇವಿ, ಮಾಧುರಿ ನಾಡಿಗೇರ್, ಪ್ರವೀಣ ಚಿತ್ರಗಾರ್, ಶರಣಪ್ಪ ಕುಂಬಾರ್ ಭೋದಕೇತರ ಸಿಬ್ಬಂದಿ ಮತ್ತು ಶಾಲಾ ಕಾಲೇಜು ಸಿಬ್ಬಂದಿಗಳು ಶ್ರದ್ದಾಂಜಲಿ ಸಲ್ಲಿಸಿದರು.

 ಮಲ್ಲಿಕಾರ್ಜುನ ಮಠದ್ ಮತ್ತು ಶ್ರೀದೇವಿ ಮಠದ ವೈಭವ್ ತಂದೆ, ತಾಯಿ ಯಾಗಿದ್ದಾರೆ. 
ಯಲಬುರ್ಗಾ ತಾಲೂಕಿನ ಹೊಸಳ್ಳಿ ಬಳಿ ನಡೆದ ಘಟನೆಯಲ್ಲಿ ವೈಭವ ಎಂಬ 9 ವರ್ಷದ ಮಗು ಪ್ರಾಣ ಕಳೆದುಕೊಂಡಿತ್ತು. ಅಪಘಾತದ ವೇಳೆ, ವೈಭವನ ಜೊತೆಗೆ ಅವರ ತಂದೆ ಜೊತೆಗಿದ್ದರು ಎನ್ನಲಾಗಿದೆ. ಅಲ್ಲದೇ, ಅವರಿಗೂ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ಮಾಹಿತಿ ಲಭ್ಯವಾಗಿದೆ. 
Post a Comment

Post a Comment