Gajendragad : ಶೋಷಿತ ವರ್ಗದ ಜನರ ಹಕ್ಕುಗಳ ರಕ್ಷಣೆಗೆ ಸಂವಿಧಾನ ಪೀಠಿಕೆ & ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ
ಗಜೇಂದ್ರಗಡ : (Jan_26_2025)
ಗಜೇಂದ್ರಗಡದಲ್ಲಿ ಒಂದೆಡೆ ಎಲ್ಲರೂ ಬಿಳುಪಿನ ಬಟ್ಟೆ ಧರಿಸಿ, ಪ್ರಮುಖ ಬೀದಿಗಳಲ್ಲಿ, ಶಾಲಾ ಕಾಲೇಜು ಆವರಣದಲ್ಲಿ ಎಲ್ಲರೂ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಆಚರಿಸಿದರೇ, ಸಿಐಟಿಯೂ ಸಂಯೋಜಿತ ಬೀದಿಬದಿ ವ್ಯಾಪಾರಸ್ಥರ ಸಂಘ ಸಂವಿಧಾನ ಪೀಠಿಕೆ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ಮಾಡಿದರು. ದುಡಿಯುವ ಜನರ ಪರವಾದ ಭಾರತ ಸಂವಿಧಾನ ರಕ್ಷಣೆ ಆಗಬೇಕು ಅದೇ ನಿಜವಾದ ಪ್ರಜಾಪ್ರಭುತ್ವ ಎಂದು ಘೋಷಣೆ ಕೂಗಿದರು.
ನಂತರ ಕೆ ಕೆ ಸರ್ಕಲ್ ನಲ್ಲಿ ಬಹಿರಂಗ ಸಭೆ ಮಾಡಿ ತಾಲ್ಲೂಕು ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರ ಹಕ್ಕುಗಳು ರಕ್ಷಣೆ ಆಗಬೇಕೆಂದು ನಾವು ಸೌಹಾರ್ದವಾಗಿ ಸಂವಿಧಾನ ಆಶಯದಂತೆ ಸಹಬಾಳ್ವೆಗಾಗಿ ಈ ಒಂದು ಮೆರವಣಿಗೆಯನ್ನು ಮಾಡಿ ಜನರಿಗೆ ಸಂವಿಧಾನ ಪೀಠಿಕೆಯ ಪರಿಚಯ ಮಾಡಿ ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ನಂತರ ವಕೀಲರು ಮತ್ತು ಕರ್ನಾಟಕ ಪ್ರಾಂತ್ಯ ರೈತ ಸಂಘದ ಮುಖಂಡರಾದ ಎಂ ಎಸ್ ಹಡಪದ್ ಮಾತನಾಡಿ, ಇಂದು ಸಂವಿಧಾನವನ್ನು ರಕ್ಷಣೆ ಮಾಡುವ ಅಗತ್ಯ ವಿದೆ. ಸಂವಿಧಾನವನ್ನು ವಿರೋಧಿಸುವ ಜನರೇ ಇಂದು ಸಂವಿಧಾನ ಮೂಲಕ ಪ್ರಭುತ್ವವನ್ನು ಸಾಧಿಸಿ ಅದೇ ಸಂವಿಧಾನವನ್ನು ನಾಶ ಮಾಡುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದನ್ನು ನಾವು ಜಾಗೃತ ಮನಸ್ಸಿನ ಎಲ್ಲಾ ಸಮಾಜದ ಸಮುದಾಯ ಜನರು ಅರ್ಥ ಮಾಡಿಕೊಂಡು ಸಂವಿಧಾನ ರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ. ಆಗ ಮಾತ್ರ ಈ ಗಣರಾಜ್ಯೋತ್ಸವಕ್ಕೆ ಅರ್ಥ ಬರುತ್ತದೆ ಎಂದರು.
ನಂತರ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಬಾಲು ರಾಠೋಡ ಮಾತನಾಡಿ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ನಮ್ಮ ಭಾರತದ ಹೆಮ್ಮೆಯ ಸಂವಿಧಾನ ಅದನ್ನು ಜಾರಿ ಮಾಡಿದ ದಿನ ನೆನಪಿನಲ್ಲಿ ಇಡೀ ದೇಶವೇ ಸಂಭ್ರಮ ಪಡುತ್ತಿರುವಾಗಲೇ ಅದನ್ನು ಅಲ್ಲಗಳೆದು ಹಿಂದೂ ರಾಷ್ಟ್ರಕ್ಕೆ ಸಂವಿಧಾನ ಸಿದ್ದ ಎಂದು ಇಂದು ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಾಹಾಕುಂಭ ಮೇಳೆದಲ್ಲಿ ಸಂತರೊಬ್ಬರು ಹೇಳಿದ್ದಾರೆ ಎಂದು ಖಾಸಗಿ ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ಇದು ದೇಶದ ಪ್ರತಿಯೊಬ್ಬ ಪ್ರಜೆಯೂ ಖಂಡಿಸುವ ನೀತಿಯಾಗಿದೆ. ಇಂತಹ ಸಂವಿಧಾನ ವಿರೋಧಿಗಳನ್ನು ತಿರಸ್ಕರಿಸೋಣ. ಒಡಕು ಮನಸ್ಸುಗಳನ್ನು ಕಿತ್ತು ಹಾಕೋಣ ಎಂದು ಪಣ ತೊಡೋಣ.
ಸಂವಿಧಾನದ ಬೇರುಗಳನ್ನು ಗಟ್ಟಿಗೊಳಿಸಿ, ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ, ದುಡಿಯುವ ಜನರ ಹಕ್ಕುಗಳ ರಕ್ಷಣೆ ಮಾಡುವ, ಶೋಷಿತ ವರ್ಗದ ಜನರ ಹಕ್ಕುಗಳ ರಕ್ಷಣೆ ಮಾಡುವ ಕೆಲಸವನ್ನು ಮಾಡುವ ಸಲುವಾಗಿ, ಪ್ರಭುತ್ವ ಮತ್ತು ವಿಕೃತ ಮನಸ್ಸುಗಳನ್ನು ಎಚ್ಚರಿಸುವುದಕ್ಕಾಗಿ ಈ ಒಂದು ಮೆರವಣಿಗೆಯನ್ನು ದುಡಿಯುವ ಜನರು ಮಾಡಿದ್ದೆವೆ ಎಂದರು.
ಸಂವಿಧಾನ ಪೀಠಿಕೆಯನ್ನು ಹಿರಿಯರಾದ ರಂವಿದ್ರ ಹೊನ್ನಾವಾಡ ಅವರು ಎಲ್ಲರಿಗೂ ಬೋಧಿಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಗಣೇಶ ರಾಠೋಡ ವಂದಿಸಿದ್ದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಶಾಮೀದ್ ಅಲಿ ದಿಂಡವಾಡ್, ಪರಶುರಾಮ್ ಬಡಿಗೇರ್, ಮಂದಾರ್ ರಾಠೋಡ್, ಅಮರೇಶ್ ಚವ್ಹಾಣ, ಮುತ್ತು ರಾಠೋಡ್, ಮಂಜುಳಾ ಪವಾರ್, ಚೌಡಮ್ಮ ಯಲ್ಪೊ, ರೇಣವ್ವ ರಾಠೋಡ್, ಅನ್ವರ್ ಹೀರೆಕೊಪ್ಪ, ವಿಷ್ಣು ಚಂದನಕರ್, ಕಳಕೇಶ್ ಮಾಳೋತ್ತರ್, ದಾನಪ್ಪ ರಾಠೋಡ್, ಮುತ್ತಣ್ಣ ರಾಠೋಡ್, ಬಾಷಾಸಾಬ್ ಮಾಲಾದ್ದಾರ್, ಶಂಕರಪ್ಪ ಪಾತರೊಟ್ಟಿ, ಮಾರುತಿ ಗೊಂದೆ, ರೇಣವ್ವ ಕಲಾಲ್, ಬಸಮ್ಮ ಕಾಟಾಪುರ, ಹಸೀನಾ ಬೇಗಂ ಬಳ್ಳೊಳ್ಳಿ, ನಾಗರಾಜ್ ದಿವಾನದ್, ಗಂಗಾವ್ವ ಸವಣೂರ್, ಕಾಳವ್ವ ಚವ್ಹಾಣ, ಪಾರವ್ವ ಪಮ್ಮಾರ್, ಶಾರವ್ವ ರಾಠೋಡ, ಜ್ಯೋತಿ ಜಾಟೋತ್ತರ್, ಲಕ್ಷ್ಮವ್ವ ಪಮ್ಮಾರ್, ಶಾರದಾ ಮಾಳೋತ್ತರ್, ಸುನೀಲ್ ಕುಂಬಾರ್, ಸುರೇಶ್ ಅಕ್ಕಸಾಲಿಗ, ಪಿರೋಜಾ ಮತ್ತು ಇತರರು ಹಾಜರಿದ್ದರು.
Post a Comment