-->
Bookmark

Gajendragad : ವಿರೋಧದ ಬಳಿಕ ಎಚ್ಚೆತ್ತ ಕಸಾಪ : ವಿವೇಕಾನಂದಗೌಡ ನೇತೃತ್ವದಲ್ಲಿ ಪೂರ್ವಭಾವಿ ಸಭೆ

Gajendragad : ವಿರೋಧದ ಬಳಿಕ ಎಚ್ಚೆತ್ತ ಕಸಾಪ : ವಿವೇಕಾನಂದಗೌಡ ನೇತೃತ್ವದಲ್ಲಿ ಪೂರ್ವಭಾವಿ ಸಭೆ 

ಗಜೇಂದ್ರಗಡ : (Jan_10_2024)

ಕನ್ನಡ ಸಾಹಿತ್ಯ ಪರಿಷತ್ ಗದಗ ಜಿಲ್ಲಾ ಸಮ್ಮೇಳನದ ಪೂರ್ವ ಭಾವಿ ಸಭೆ ಪಟ್ಟಣದ ಮೈಸೂರು ಮಠದಲ್ಲಿ ನಡೆಯಿತು. ಈ ಹಿಂದೆ ನಡೆದ ಸಭೆಗೆ ಹಲವು ಸಾಹಿತಿಗಳನ್ನ, ಕನ್ನಡಪರ ಹೋರಾಟಗಾರರನ್ನ, ಕನ್ನಡಾಭಿಮಾನಿಗಳನ್ನ ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಗುರುವಾರ ಜನವರಿ 9 ರಂದು ನಡೆದ ಸಭೆಗೆ ಹಲವರನ್ನ ಆಹ್ವಾನಿಸಲಾಗಿತ್ತು. 

ಕಸಾಪ ಜಿಲ್ಲಾಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಮ್ಮೇಳನದ ಬಗ್ಗೆ ಚರ್ಚೆ ನಡೆಸಲಾಯ್ತು. ಈ ವೇಳೆ ಮಾತನಾಡಿದ ವಿವೇಕಾನಂದಗೌಡ ಪಾಟೀಲ್ ಅವರು, ಸಮ್ಮೇಳನ ಯಶಸ್ಸಿಗೆ ಒಗ್ಗಟ್ಟಾಗಿ ಶ್ರಮಿಸೋಣ ಎಂದರು. ಈ ಸಮ್ಮೇಳನ ನಿಮ್ಮ ಮನೆಯ ಕಾರ್ಯಕ್ರಮ. ಕನ್ನಡ, ನಾಡು, ನುಡಿಗಾಗಿ, ನಡೆಯುವ ಅಕ್ಷರ ಜಾತ್ರೆಗೆ ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕೆಂದು ಕನ್ನಡಾಭಿಮಾನಿಗಳಲ್ಲಿ ಮನವಿ ಮಾಡಿದರು. 

ವಿವಿಧ ಸಂಘಟನೆ ಮುಖಂಡರು ಭಾಗವಹಿಸಿ ಮಾತನಾಡಿ, ಕನ್ನಡ ತೇರನ್ನ ಎಳೆಯಲು ನಮ್ಮಲ್ಲಿನ  ‌ಅಭಿನ್ನಾಭಿಪ್ರಾಯ ಮರೆತು ದುಡಿಯೋಣ ಎಂದು ಹೇಳಿದರು. 

ಹಲವಾರು ವರ್ಷದ ಬಳಿಕ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನ  ಯಶಸ್ವಿಯಾಗಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ.
Post a Comment

Post a Comment