-->
Bookmark

Gajendragad : ಸಾಹಿತ್ಯ ಗೋಷ್ಠಿಯಲ್ಲಿ ಖಾಲಿ ಕುರ್ಚಿಗಳ ದರ್ಶನ

Gajendragad : ಸಾಹಿತ್ಯ ಗೋಷ್ಠಿಯಲ್ಲಿ ಖಾಲಿ ಕುರ್ಚಿಗಳ ದರ್ಶನ
ಗಜೇಂದ್ರಗಡ : (Jan_21_2025)
ಪಟ್ಟಣದ ತೋಂಟದಾರ್ಯ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಸೋಮವಾರ ಆರಂಭವಾದ ಗದಗ ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನದ ಸಾಹಿತ್ಯಗೋಷ್ಠಿಯಲ್ಲಿ ಖಾಲಿ ಕುರ್ಚಿಗಳ ದರ್ಶನ ಎದ್ದು ಕಂಡಿತು. ಮಧ್ಯಾಹ್ನ ಅಂದಾಜು 4:30 ಗಂಟೆಗೆ ಆರಂಭವಾದ  ಹಳೇ ಹೊನ್ನು ಎಂಬ ಮೊದಲ ಗೋಷ್ಠಿಯನ್ನು ಕೇಳಲು ಜನರೇ ಇಲ್ಲದಂತಾಯಿತು. ಬೆರಳಣಿಕೆಯಷ್ಟು ಸಾಹಿತ್ಯಾಸಕ್ತರು, ಶಿಕ್ಷಕರು ಹಾಗೂ ಅತಿಥಿಗಳು ಕಂಡಬಂದರು. ತಮ್ಮ ಉಪನ್ಯಾಸದ ಆರಂಭದಲ್ಲಿ ಸಾಹಿತಿಗಳು ಖಾಲಿ ಕುರ್ಚಿಗಳ ಕುರಿತು ಪ್ರಸ್ತಾಪಿಸಿದರು. ಕಾರ್ಯಕ್ರಮದ ಗೋಷ್ಠಿಗಳು ತುಂಬಾ ವಿಳಂಬಾವಗಿ ಆರಂಭವಾದ ಕಾರಣ ಜನರು ಉದ್ಘಾಟನಾ ಕಾರ್ಯಕ್ರಮ ಮುಗಿಯುತಿದ್ದಂತೆ ಎದ್ದು ಹೋದರು. ಕವಿಗೋಷ್ಠಿ ನಡೆಯುವಾಗ ಜನರು ಹೊರಗೆ ಹೋಗಬಾರದು ಎಂದು ಶಾಲೆ ಗೇಟ್‌ ಹಾಕಿ ಒಳಗೆ ಕಾರ್ಯಕ್ರಮದ ಕಡೆಗೆ ಕಳುಹಿಸುತ್ತಿದ್ದ ದೃಶ್ಯಗಳು ಸಹ ಕಂಡು ಬಂದವು.
  ಗದಗ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಗಜೇಂದ್ರಗಡ ನಗರದಲ್ಲಿ ನಡೆಯುತ್ತಿರುವ ಕಾರಣ ಗಜೇಂದ್ರಗಡ ಹಾಗೂ ಸುತ್ತಮುತ್ತಲಿನ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಆಹ್ವಾನ ಮಾಡಿದ್ದರೆ ಶಾಲಾ ಮಕ್ಕಳು ಶಿಕ್ಷಕರು ಕಡ್ಡಾಯವಾಗಿ ಭಾಗವಹಿಸುತ್ತಿದ್ದರು ಆಗ ಅಕ್ಷರ ಜಾತ್ರೆಯ ಮಹತ್ವ ಯುವ ಪೀಳಿಗೆಗೆ ತಲುಪಿತಿತ್ತು. ಈಗ ಕೆಲವು ಶಿಕ್ಷಕರು ಸಮ್ಮೇಳನಕ್ಕೆ ಬಂದರೆ ಉಳಿದವರು ಶಾಲಾ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದಾರೆ ಇದರಿಂದಾಗಿ ಸಮ್ಮೇಳನ ಗಜೇಂದ್ರಗಡ ಭಾಗದ ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ ಎಂದು ಎಸ್‌ಎಫ್‌ಐ ನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರು ರಾಠೋಡ ಹೇಳಿದರು.
ಸಾರ್ವಜನಿಕರಿಗೆ ತಲುಪುವಂತೆ ಆಯೋಜನೆ ಮಾಡದೇ ಗಜೇಂದ್ರಗಡ ನಗರದಿಂದ ದೂರದ ಶಾಲೆಯ ಕಾಂಪೌಂಡ್‌ ಒಳಗೆ ಕಾರ್ಯಕ್ರಮ ಆಯೋಜನೆ ಮಾಡಿರುವ ಕಾರಣ ಗಜೇಂದ್ರಗಡ ನಗರದ ಜನರು ಅಷ್ಟು ದೂರ ಜನರು ಹೋಗುತ್ತಿಲ್ಲ. ಗ್ರಾಮೀಣ ಭಾಗದಿಂದ ಬರುವ ಜನರಿಗೆ ಸಾರಿಗೆ ವ್ಯವಸ್ಥೆಯು ಇಲ್ಲ ಇದರಿಂದಾಗಿ ಜನರು ಪಾಲ್ಗೊಳ್ಳು ಆಸಕ್ತಿ ತೋರುತ್ತಿಲ್ಲ. ಕೇವಲ ಸರ್ಕಾರಿ ನೌಕರರು, ಶಿಕ್ಷಕರು ಹಾಗೂ ಆಸಕ್ತರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಜನರಿಲ್ಲದೆ ಖಾಲಿ ಕುರ್ಚಿಗಳ ದರ್ಶನ ಎದ್ದು ಕಾಣುತ್ತಿದೆ ಎಂದು ಎಸ್‌ಎಫ್‌ಐ ನ ರಾಜ್ಯ ಘಟಕದ ಮುಖಂಡ ಗಣೇಶ ರಾಠೋಡ ಹೇಳಿದರು.
Post a Comment

Post a Comment