-->
Bookmark

Gajendragad : ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ : ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು : ಚಂದ್ರು ರಾಠೋಡ್

Gajendragad : ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ : ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು : ಚಂದ್ರು ರಾಠೋಡ್ 

ಗಜೇಂದ್ರಗಡ : (Jan_16_2025)
9ನೇ ತರಗತಿ ವಿದ್ಯಾರ್ಥಿನಿ ಖುಷಿ ರಂಗ್ರೇಜ್ ಆತ್ಮಹತ್ಯೆ ಪ್ರಕರಣವನ್ನ ಮೊದಲು ಪ್ರಕಟಿಸಿದ್ದು, ಕಿರಾ ನ್ಯೂಸ್ ಕನ್ನಡ.‌‌ ಇದರ ಬೆನ್ನಲ್ಲೆ ಎಸ್.ಎಫ್.ಐ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದರು.

ನೇಣಿಗೆ ಶರಣಾದ ಯುವತಿಯ ಸಾವಿಗೆ ಕಾರಣರಾದವರನ್ನ ಶೀಘ್ರ ಬಂಧಿಸಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. ಯಾವುದೇ, ಜಾತಿ ಧರ್ಮದ ಬಣ್ಣ ಹಚ್ಚದೇ ತಪ್ಪು ಮಾಡಿದವರಿಗೆ ಕಾನೂನಿನಡಿ ಶಿಕ್ಷೆಯಾಗಬೇಕೆಂದು ಮನವಿ ಮಾಡಿದರು.‌ ಹಲವು ಬಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ಕಂಡು ಬರುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮತ್ತು ವಿದ್ಯಾರ್ಥಿನಿಯರ ಹಿತ ದೃಷ್ಟಿಯಿಂದ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚಿಸಬೇಕು. ಸುಪ್ರೀಂಕೋರ್ಟ್ ನಿರ್ದೇಶನಗಳನ್ನ ಪಾಲಿಸಬೇಕು.‌ ವರ್ಮಾ ಸಮಿತಿ ಶಿಫಾರಸುಗಳನ್ನು ಎಲ್ಲ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ವಿರೋಧಿ ಸಮಿತಿ ರಚಿಸಿ, ದೂರು ಪೆಟ್ಟಿಗೆ ಅಳವಡಿಸಬೇಕು. ಬಂದ ದೂರುಗಳನ್ನ ತಿಂಗಳಿಗೊಮ್ಮೆ ಅಥವಾ ಎರಡು ಸಲ ದೂರುಗಳನ್ನ ನಿರ್ವಹಿಸಬೇಕು ಎಂದು ಎಸ್.ಎಫ್.ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ್ ಮತ್ತು ರಾಜ್ಯ ಉಪಾಧ್ಯಕ್ಷ ಗಣೇಶ್ ರಾಠೋಡ್ ತಹಶೀಲ್ದಾರ್ ಕಚೇರಿ ಮೂಲಕ ಮನವಿ ಸಲ್ಲಿಸಿದರು.‌

ಶಿರಸ್ತೇದಾರ ಪಿ.ಬಿ ಶಿಂಗ್ರೀ ಮನವಿ ಸ್ವೀಕರಿಸಿದರು.‌ ಡಿ.ವೈ.ಎಫ್.ಐ ಮುಖಂಡರಾದ ಶಿವಾಜಿ ಜಿ, ಕನಕಪ್ಪ ಹಾದಿಮನಿ, ತಾಲೂಕು ಮುಖಂಡರಾದ ಹನುಮಂತ್ ಎಂ. ರಮೇಶ್ ಕೆ, ಕೃಷ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.‌
Post a Comment

Post a Comment